ಪ್ರಾಸಿಕ್ಯೂಷನ್ ವಿಚಾರದಲ್ಲಿ ಸಂಪುಟ ನಿರ್ಣಯ ಸರಿಯಲ್ಲ- ಪ್ರಭುಲಿಂಗ ನಾವದಗಿ ವಾದ ಮಂಡನೆ

ಬೆಂಗಳೂರು,ಆಗಸ್ಟ್,31,2024 (www.justkannada.in): ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ತಮ್ಮ ವಿರುದ್ದ ಪ್ರಾಸಿಕ್ಯೂಷನ್ ಗೆ ರಾಜ್ಯಪಾಲರು ನೀಡಿರುವ ಅನುಮತಿ ಪ್ರಶ್ನಿಸಿ ಸಿಎಂ ಸಿದ್ದರಾಮಯ್ಯ  ಹೈಕೋರ್ಟ್ ಗೆ ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಯುತ್ತಿದ್ದು ವಾದಮಂಡನೆ ಮುಂದುರೆದಿದೆ.

ಹೈಕೋರ್ಟ್ ನ್ಯಾ. ನಾಗಪ್ರಸನ್ನ ಅವರ ಏಕಸದಸ್ಯ ಪೀಠದಲ್ಲಿ ವಿಚಾರಣೆ ನಡೆಯುತ್ತಿದ್ದು ಈ ವೇಳೆ ದೂರುದಾರ ಪ್ರದೀಪ್ ಕುಮಾರ್ ಪರ ವಾದ ಮಂಡಿಸಿದ ಹಿರಿಯ ವಕೀಲ ಪ್ರಭುಲಿಂಗ ನಾವದಗಿ, ಸಂವಿಧಾನದ 163ನ ಅಡಿ ಸಿಎಂ ಕೂಡ ಕ್ಯಾಬಿನೆಟ್ ಭಾಗ. ಸಿಎಂ ಹೊರತಾದ ಕ್ಯಾಬಿನೆಟ್ ಇರಲು ಸಾಧ್ಯವಿಲ್ಲ. ಪ್ರಾಸಿಕ್ಯೂಷನ್ ವಿಚಾರದಲ್ಲಿ ಸಂಪುಟ ನಿರ್ಧಾರ ಸರಿಯಲ್ಲ. ಸಂಪುಟ ನಿರ್ಣಯವನ್ನು ಗವರ್ನರ್ ಪರಿಗಣಿಸಬೇಕಿಲ್ಲ ಎಂದರು.

ಆರೋಪಿಗೆ ನೋಟಿಸ್ ನೀಡಿ ತನಿಖೆಗೆ ಅವಕಾಶ ನೀಡಬಾರದ.  ಆರೋಪಿಗೆ ನೋಟಿಸ್ ನೀಡಿದರೆ ತನಿಖೆಯೇ ಪೂರ್ವಾಗ್ರಹಕ್ಕೊಳಗಾಗಲಿದೆ . 17ಎ ಹಂತದಲ್ಲಿ ರಾಜ್ಯಪಾಲರ ಕ್ರಮ ಪ್ರಶ್ನಿಸಲು ಆರೋಪಿಗೆ ಅವಕಾಶವಿಲ್ಲ. ಎಫ್ ಐಆರ್ ಆದ ಬಳಿಕ ಪ್ರಶ್ನಿಸಬಹುದು. ರಾಜ್ಯಪಾಲರಿಗೆ ಕ್ಯಾಬಿನೆಟ್ ಸಲಹೆ ಪರಿಗಣಿಸುವ  ಅಗತ್ಯವಿಲ್ಲ. ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿರುವ ರಾಜ್ಯಪಾಲರ ಆದೇಶ ಸರಿಯಾಗಿದೆ. ಮುಡಾ ಪ್ರಕರಣದ ತನಿಖೆ ಅಗತ್ಯವಿದೆ  ಎಂದು ಪ್ರಭುಲಿಂಗ ನಾವದಗಿ ವಾದ ಮಂಡಿಸಿದರು.

ಈಗಾಗಲೇ ರಾಜ್ಯಪಾಲರ ಪರ ತುಷಾರ್ ಮೆಹ್ತಾ ವಾದ ಮಂಡನೆ ಮಾಡಿದ್ದು, ಇನ್ನು ದೂರುದಾರ ಟಿ.ಜೆ ಅಬ್ರಾಹಂ ಪರ ವಕೀಲ ರಂಗನಾಥರೆಡ್ಡಿ ವಾದ ಮಂಡನೆ ಮಾಡುತ್ತಿದ್ದಾರೆ.

Key words: High court, prosecution, Prabhulinga Navadagi, argument