ಬೆಂಗಳೂರು,ಮಾರ್ಚ್,3,2022(www.justkannada.in): ಮೇಕೆದಾಟು ಯೋಜನೆ ಜಾರಿಗೆ ಆಗ್ರಹಿಸಿ ಪಾದಯಾತ್ರೆ ನಡೆಸುತ್ತಿರುವ ಕಾಂಗ್ರೆಸ್ ಗೆ ಬಿಗ್ ಶಾಕ್. ಬೆಂಗಳೂರಿನಲ್ಲಿ ಯಾವುದೇ ಪ್ರತಿಭಟನೆ ಮೆರವಣಿಗೆಗೆ ಅವಕಾಶ ನೀಡದಂತೆ ನಿರ್ಬಂಧ ವಿಧಿಸಿ ಹೈಕೋರ್ಟ್ ಮಹತ್ವದ ಆದೇಶ ಹೊರಡಿಸಿದೆ.
ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ಹಾಗೂ ನ್ಯಾಯಮೂರ್ತಿ ಎಸ್.ಆರ್ ಕೃಷ್ಣಕುಮಾರ್ ಅವರಿದ್ದ ವಿಭಾಗೀಯ ಪೀಠದಿಂದ ಈ ಆದೇಶ ಹೊರಡಿಸಿದೆ. ಫ್ರೀಡಂ ಪಾರ್ಕ್ ನಲ್ಲಿ ಮಾತ್ರ ಪ್ರತಿಭಟನೆಗೆ ಅವಕಾಶ ನೀಡಿ. ಬೇರೆಡೆ ಧರಣಿ ರ್ಯಾಲಿ ನಡೆಸದಂತೆ ಕ್ರಮ ಕೈಗೊಳ್ಳಲು ಸರ್ಕಾರಕ್ಕೆ ವಿಭಾಗೀಯ ಪೀಠ ಕಟ್ಟುನಿಟ್ಟಿನ ಸೂಚನೆ ನೀಡಿದೆ.
ಫ್ರೀಡಂಪಾರ್ಕ್ನಲ್ಲಿ ಪ್ರತಿಭಟನೆ ನಡೆಸುವ ವೇಳೆಯೂ ನಗರದ ಸಾರಿಗೆ-ಸಂಚಾರ ಹಾಗೂ ಜನರ ದಿನನಿತ್ಯದ ಚಟುವಟಿಕೆಗಳಿಗೆ ತೊಂದರೆಯಾಗದಂತೆ ನೋಡಿಕೊಳ್ಳುವಂತೆ ಸರ್ಕಾರಕ್ಕೆ ತಾಕೀತು ಮಾಡಿತು.ಇಂದು ಹೈಕೋರ್ಟ್ ತಲುಪಲು ನಮಗೇ ಒಂದು ಗಂಟೆ ತಗುಲಿತು. ಜನಸಾಮಾನ್ಯರು ಓಡಾಡುವುದು ಹೇಗೆ? ಎಂದು ಪ್ರಶ್ನಿಸಿದ ಹೈಕೋರ್ಟ್ ಇದಕ್ಕೆಲ್ಲಾ ನಿರ್ಬಂಧಗಳನ್ನು ವಿಧಿಸಿ ಎಂದು ಸರ್ಕಾರಕ್ಕೆ ಸೂಚನೆ ನೀಡಿತು.
ಹಿಂದಿನಿಂದಲೂ ಪ್ರತಿಭಟನೆಗಳಿಂದ ಟ್ರಾಫಿಕ್ ಜಾಮ್ ಆಗುತ್ತಿದೆ. ಜನರು ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ. ಹೀಗಾಗಿ ನಿಗದಿದ ಸ್ಥಳ ಬಿಟ್ಟು ಬೇರೆಡೆ ಪ್ರತಿಭಟನೆಗೆ ಅವಕಾಶ ಬೇಡ ಯಾವುದೇ ಸಂಘಟನೆಗಳು ಪಕ್ಷಗಳಿಗೆ ಅವಕಾಶ ನೀಡುವುದು ಬೇಡ ಎಂದು ತಿಳಿಸಿದೆ.
Key words: High Court -protests – Restriction- Bengaluru
ENGLISH SUMMARY….
HC shock to Cong. Leaders who are taking out the padayatra
Bengaluru, March 3, 2022 (www.justkannada.in): The Congress party leaders, who are protesting against the State Government demanding to implement the Mekedatu project at the earliest today, received a shock from the Hon’ble High Court, which has issued orders to the State Government not to allow any protest marches.
The divisional bench comprising High Court Justices Rituraj Avasthi and Justice S.R. Krishnakumar has issued the orders. The High Court has issued orders to allow protests only at the freedom park and prevent protests at any other places.
The State Government also has been asked to ensure that there will be no traffic jams due to the protests. “Today, it took us one hour to reach the court we wonder how people manage it? The justices asked and directed the State Government to restrict protest marches.
Keywords: Congress party/ Mekedatu project/ Padayatra/ HC shock