ಬೆಂಗಳೂರು, ಸೆಪ್ಟೆಂಬರ್ 24, 2019 (www.justkannada.in): ಅತಿವೇಗದಿಂದ ವಾಹನ ಚಲಾಯಿಸಿದ್ದಕ್ಕೆ ಸ್ಪಿನ್ ಮಾಂತ್ರಿಕ ಶೇನ್ ವಾರ್ನ್ ಅವರು ಭಾರಿ ದಂಡ ತೆತ್ತಿದ್ದಾರೆ.
ವಾರ್ನ್ಗೆ 12 ತಿಂಗಳು ಕಾಲ ಡ್ರೈವಿಂಗ್ ಮಾಡದಂತೆ ಇಲ್ಲಿನ ಪೊಲೀಸರು ನಿಷೇಧ ಹೇರಿದ್ದಾರೆ. ಕಳೆದ ಎರಡು ವರ್ಷಗಳಲ್ಲಿ 6 ಬಾರಿ ಇದೇ ರೀತಿ ತಪ್ಪು ಮಾಡಿ ಸಿಕ್ಕಿಬಿದ್ದಿದ್ದಾರೆ.
50 ವರ್ಷದ ಆಸ್ಟ್ರೇಲಿಯಾದ ಮಾಜಿ ಕ್ರಿಕೆಟರ್ ಶೇನ್ ವಾರ್ನ್, ವಿಂಬಲ್ಡನ್ನ ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ಮುಂದೆ ಹಾಜರಾಗಿದ್ದರು. ತಮ್ಮ ತಪ್ಪನ್ನು ಕೋರ್ಟಿನ ಕಟಕಟೆಯಲ್ಲಿ ನಿಂತು ಒಪ್ಪಿಕೊಂಡಿದ್ದಾರೆ.