ಮೈಸೂರು,ನವೆಂಬರ್,4,2022(www.justkannada.in): ಮುಂದಿನ 2030 ನಮಗೆಲ್ಲ ತುಂಬಾ ಮುಖ್ಯವಾದ ವರ್ಷ. ಜಾಗತಿಕ ತಾಪಮಾನ ತಗ್ಗಿಸಲು ಮತ್ತು ಸುಸ್ಥಿರ ಗುರಿಗಳ ಘೋಷಣೆಗೆ ಇದು ಸುಸಮಯ ಎಂದು ಮೈಸೂರು ವಿವಿ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್ ತಿಳಿಸಿದ್ದಾರೆ.
ಮಾನಸ ಗಂಗೋತ್ರಿಯ ರಾಣಿ ಬಹದ್ದೂರು ಸಭಾಂಗಣದಲ್ಲಿ ವಿಶ್ವಸಂಸ್ಥೆಯ ಸುಸ್ಥಿರ ಅಭಿವೃದ್ಧಿ ಗುರಿ ಸಾಧನೆಗೆ ಜ್ಞಾನ ಪಾಲುದಾರಿಕೆ ಎಂಬ ವಿಷಯದ ಬಗ್ಗೆ ನಡೆದ ಅಂತಾರಾಷ್ಟ್ರೀಯ ಸಮ್ಮೇಳನದಲ್ಲಿ ಮಾತನಾಡಿದ ಅವರು, ಇಂದು ಇಡೀ ವಿಶ್ವವೇ ಜಾಗತಿಕ ತಾಪಮಾನದಿಂದ ಬಳಲುತ್ತಿದ್ದು, ಸುಸ್ಥಿರ ಅಭಿವೃದ್ಧಿಯೇ ಇದಕ್ಕಿರುವ ಪರಿಹಾರ. ಪ್ರಸ್ತುತ ದಿನಗಳಲ್ಲಿ ಜಗತ್ತಿನ ನಾನಾ ದೇಶಗಳು ಜಾಗತಿಕ ತಾಪಮಾನ ಸಮಸ್ಯೆಯಿಂದ ಬಳಲುತ್ತಿವೆ. ಹೀಗಿರುವಾಗ ಸಾಮಾಜಿಕವಾಗಿ ಜವಾಬ್ದಾರಿಯುತ, ಪ್ರಾದೇಶಿಕ ಪ್ರಜ್ಞೆ ಮತ್ತು ಸುಸ್ಥಿರತೆಗೆ ನಾವೆಲ್ಲರೂ ಆದ್ಯತೆ ನೀಡಬೇಕಿದೆ. ಇಂದಿನ ದಿನಮಾನದಲ್ಲಿ ಎಂಜಿನಿಯರಿಗ್, ಮ್ಯಾನೇಜ್ಮೆಂಟ್, ಸಮಾಜ ವಿಜ್ಞಾನ ಮತ್ತು ನೈಸರ್ಗಿಕ ವಿಜ್ಞಾನ ವಿಭಾಗದ ಎಲ್ಲರನ್ನೂ ಒಳಗೊಳ್ಳುವಂತಹ ಅಂತರಶಿಸ್ತೀಯ ಸಮ್ಮೇಳನಗಳ ಅಗತ್ಯವಿದೆ, ಆದ್ದರಿಂದ ಇಂತಹ ಚರ್ಚೆಗಳು ಮತ್ತು ವಿಚಾರಗಳ ವಿನಿಮಯದಿಂದ ದೇಶವನ್ನು ಮುನ್ನಡೆಸುವ ಮಾರ್ಗಗಳು ಮತ್ತು ವಿಧಾನಗಳನ್ನು ಕಂಡುಕೊಳ್ಳಬಹುದು ಎಂದು ಹೇಳಿದರು.
ಮೈಸೂರು ಸ್ವಚ್ಛನಗರಿ ಹಾಗೂ ಉದಯೋನ್ಮುಖ ’ಕ್ಷೇಮ ನಗರಿ’ಯಾಗಿದ್ದು, ಇಲ್ಲಿ ವಿಸ್ತರಿಸುತ್ತಿರುವ ನಗರ ಪರಿಸರವು ಅದರ ಗ್ರಾಮೀಣ ಒಳನಾಡಿನ ವಿಶಿಷ್ಟ ಸಮಸ್ಯೆಗಳನ್ನು ತೆರೆದಿಡುತ್ತಿದೆ. ಈ ನಿಟ್ಟಿನಲ್ಲಿ ಮೈಸೂರು ವಿವಿಯಲ್ಲಿ ಇಂದು ಅರ್ಥಪೂರ್ಣ ಸಮ್ಮೇಳನ ಆಯೋಜನೆಯಾಗಿದೆ ಎಂದರು.
2016 ರಲ್ಲಿ ನಡೆದ ಯುನೈಟೆಡ್ ನೇಷನ್ ಸುಸ್ಥಿರ ಅಭಿವೃದ್ಧಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಬರುತ್ತಿದೆ. ಏಷ್ಯಾ ಸೇರಿದಂತೆ ಪ್ರಮುಖ ರಾಷ್ಟ್ರಗಳ ವಿವಿಗಳು ಒಡಂಬಡಿಕೆ ಮಾಡಿಕೊಂಡು ಈ ರೀತಿಯ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಬರುತ್ತಿದೆ. ನಾವು ಸುಸ್ಥಿರ ಗುರಿಗಳ ಘೋಷಣೆ ಇದು ಸುಸಮಯ ಎಂದರು.
ಸದ್ಯ ಮೈಸೂರು ವಿವಿಯಲ್ಲಿ ಎರಡು ದಿನ ಈ ಸಮ್ಮೇಳನ ಆಯೋಜನೆ ಮಾಡಿರುವುದು ಸಂತೋಷದ ವಿಷಯ. ನವೆಂಬರ್ 7ರಂದು ಕೈರೋದಲ್ಲಿ ಇದರ ಮತ್ತೊಂದು ಸಮಾವೇಶ ಪ್ರಾರಂಭವಾಗಲಿದೆ. ಅದಕ್ಕೂ ಮುಂಚೆ ಮೈವಿವಿಯಲ್ಲಿ ಈ ಸಮ್ಮೇಳನ ನಡೆದಿದ್ದು, ಹೆಮ್ಮೆಯ ಸಂಗತಿ ಎಂದು ಹೇಮಂತ್ ಕುಮಾರ್ ನುಡಿದರು. ಅಂತಾರಾಷ್ಟ್ರೀಯ ಸಮ್ಮೇಳನದಲ್ಲಿ ಬ್ಯಾಂಕಾಕ್ ಪ್ರೊ. ಲಾರೆನ್ಸ್ ಸುರೇಂದ್ರ, ಪ್ರೊ. ಡಿ.ಆನಂದ್ ಮತ್ತಿತರರು ಉಪಸ್ಥಿತರಿದ್ದರು.
Key words: high time –reduce- global warming – announce -sustainable -goals – Prof. G. Hemanth Kumar