ಬ್ರಿಟಿಷ್ ಕೌನ್ಸಿಲ್ ಜತೆ 3 ವರ್ಷಗಳ ಒಪ್ಪಂದಕ್ಕೆ ಉನ್ನತ ಶಿಕ್ಷಣ ಇಲಾಖೆ ಅಂಕಿತ.

ಬೆಂಗಳೂರು,ಮಾರ್ಚ್,11,2022(www.justkannada.in):  ರಾಜ್ಯದ ವಿದ್ಯಾರ್ಥಿಗಳಿಗೆ ಜಾಗತಿಕ ಮಟ್ಟದಲ್ಲಿ ಉದ್ಯೋಗಾವಕಾಶಗಳನ್ನು ತಂದುಕೊಡುವ ಮೂರು ವರ್ಷಗಳ ಒಡಂಬಡಿಕೆಗೆ ಕರ್ನಾಟಕ ಸರಕಾರ ಮತ್ತು ಬ್ರಿಟಿಷ್ ಕೌನ್ಸಿಲ್ ಸಂಸ್ಥೆಗಳು ಶುಕ್ರವಾರ ಇಲ್ಲಿ ಅಂಕಿತ ಹಾಕಿದವು.

ವಿಕಾಸಸೌಧದಲ್ಲಿ ಇದರ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ರಾಜ್ಯ ಸರಕಾರದ ಪರವಾಗಿ ಉನ್ನತ ಶಿಕ್ಷಣ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಕುಮಾರ ನಾಯಕ್ ಮತ್ತು ಬ್ರಿಟಿಷ್ ಕೌನ್ಸಿಲ್ ಪರವಾಗಿ ಆ ಸಂಸ್ಥೆಯ ದಕ್ಷಿಣ ಭಾರತ ಮಟ್ಟದ ನಿರ್ದೇಶಕ ಜನಕ ಪುಷ್ಪನಾಥನ್ ಅಂಕಿತ ಹಾಕಿ, ಒಡಂಬಡಿಕೆ ವಿನಿಮಯ ಮಾಡಿಕೊಂಡರು. ಈ ಸಂದರ್ಭದಲ್ಲಿ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ ನಾರಾಯಣ್ ಮತ್ತು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಮಾತನಾಡಿದ ಸಚಿವ ಅಶ್ವತ್ಥ ನಾರಾಯಣ್, ಈ ಒಡಂಬಡಿಕೆಯು ರಾಜ್ಯದ ಪ್ರಾಥಮಿಕ, ಪ್ರೌಢ ಮತ್ತು ಉನ್ನತ ಶಿಕ್ಷಣದ ವಿದ್ಯಾರ್ಥಿಗಳಲ್ಲಿ ಕೌಶಲ್ಯಾಭಿವೃದ್ಧಿ, ಇಂಗ್ಲಿಷ್ ಕಲಿಕೆ ಮತ್ತು ಸಂಶೋಧನೆಗೆ ಅಗತ್ಯವಾದ ಶಿಸ್ತನ್ನು ಕಲಿಸಲಿದೆ. ರಾಜ್ಯ ಮತ್ತು ಇಂಗ್ಲೆಂಡ್ ನ ಶಿಕ್ಷಣ ಸಂಸ್ಥೆಗಳ ಜತೆ ವಿದ್ಯಾರ್ಥಿಗಳ‌ ವಿನಿಮಯ (ಟ್ವಿನ್ನಿಂಗ್ ಕಾರ್ಯಕ್ರಮ), ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ಶೈಕ್ಷಣಿಕ ನಾಯಕತ್ವ ಬೆಳೆಸುವ ವಿಷಯದಲ್ಲಿ ಒಪ್ಪಂದ ಗಮನಹರಿಸಲಿದೆ. ಇದರಿಂದಾಗಿ ರಾಜ್ಯದ ಸಾಮಾಜಿಕ ಮತ್ತು ಆರ್ಥಿಕ ಪರಿಸ್ಥಿತಿಗಳಲ್ಲಿ ಸಕಾರಾತ್ಮಕ ಬದಲಾವಣೆ ಆಗಲಿದೆ ಎಂದರು.

ಬ್ರಿಟಿಷ್ ಕೌನ್ಸಿಲ್ ನೊಂದಿಗೆ ಕಳೆದೊಂದು ದಶಕದಿಂದ ರಾಜ್ಯದ ಸಂಬಂಧ ಹಲವು ಪಟ್ಟು ಸುಧಾರಿಸಿದೆ. ಈ ಸಹಭಾಗಿತ್ವದ ಮೂಲಕ ರಾಜ್ಯದ ವಿ.ವಿ.ಗಳ ಪಠ್ಯಗಳನ್ನು ಅಂತಾರಾಷ್ಟ್ರೀಯ ಮಟ್ಟಕ್ಕೆ ಏರಿಸಲಾಗಿದೆ. ಜೊತೆಗೆ, ಒಳ್ಳೆಯ ಉದ್ಯೋಗ ಸೃಷ್ಟಿಯಾಗುತ್ತಿವೆ ಎಂದು ಅವರು ನುಡಿದರು.

ಈ ಒಡಂಬಡಿಕೆಯು ರಾಜ್ಯದ ಉನ್ನತ ಶಿಕ್ಷಣ ವಲಯದಲ್ಲಿ ವಿದ್ಯಾರ್ಥಿಗಳು ಉದ್ಯೋಗವನ್ನು ಪಡೆಯಲು ಬೇಕಾದ ಕೌಶಲ್ಯಗಳನ್ನು ಹೆಚ್ಚಿಸಲಿದೆ. ಜತೆಗೆ, ಯುನೈಟೆಡ್ ಕಿಂಗ್ಡಂ ಮತ್ತು ಭಾರತದ ನಡುವೆ ಶೈಕ್ಷಣಿಕ ಸಂಶೋಧನಾ ಉಪಕ್ರಮ ಮತ್ತು `ಗೋಯಿಂಗ್ ಗ್ಲೋಬಲ್’ ಕಾರ್ಯಕ್ರಮಗಳ ಮೂಲಕ ಈ ಸಹಭಾಗಿತ್ವವನ್ನು ಇನ್ನಷ್ಟು ವಿಸ್ತರಿಸಲಾಗುವುದು ಎಂದು ಅವರು ಹೇಳಿದರು.

ಬಹುಮುಖ್ಯವಾಗಿ ಐಟಿಐ, ಎಂಜಿನಿಯರಿಂಗ್ ಮತ್ತು ವ್ಯವಸ್ಥಾಪನಾ ವಿಜ್ಞಾನ (ಮ್ಯಾನೇಜ್ಮೆಂಟ್ ಕೋರ್ಸಸ್)ಗಳನ್ನು ಓದುತ್ತಿರುವವರಿಗೆ ಇದರಿಂದ ಅಪಾರ ಲಾಭವಾಗಲಿದೆ. ಅಲ್ಲದೆ, ಕರ್ನಾಟಕದ ವಿದ್ಯಾರ್ಥಿಗಳು ಇಂಗ್ಲೆಂಡಿನ ವಿಶ್ವವಿದ್ಯಾಲಯಗಳಿಗೆ ತೆರಳಿ ಉನ್ನತಾಧ್ಯಯನ ಮಾಡಲು ಅವಕಾಶವಾಗಲಿದೆ ಎಂದು ಅವರು ಮಾಹಿತಿ ನೀಡಿದರು.

ಮಿಗಿಲಾಗಿ, ಎರಡೂ ಕಡೆಯ ಉತ್ಕೃಷ್ಟತಾ ಕೇಂದ್ರಗಳು ಸುಸ್ಥಿತ ಸಹಭಾಗಿತ್ವವನ್ನು ಹೊಂದುವ ಮೂಲಕ ಸಂಶೋಧನೆ ಮತ್ತು ನಾವೀನ್ಯತೆಗಳಿಗೆ ಹೆಚ್ಚು ಉತ್ತೇಜನ ನೀಡಲಿವೆ. ಇದರಿಂದಾಗಿ, ರಾಜ್ಯದ ವಿದ್ಯಾರ್ಥಿಗಳು ಆರ್ಟಿಫಿಶಿಯಲ್ ಇಂಟೆಲಿಜೆನ್ಸ್, ಮಶೀನ್ ಲರ್ನಿಂಗ್, ಎಡ್-ಟೆಕ್, ಜೀವವಿಜ್ಞಾನಗಳು ಮತ್ತು ಸೈಬರ್ ಸೆಕ್ಯುರಿಟಿಯಂತಹ ಅತ್ಯಾಧುನಿಕ ಕೋರ್ಸುಗಳನ್ನು ಕಲಿಯಬಹುದು ಎಂದು ಅಶ್ವತ್ ನಾರಾಯಣ್ ತಿಳಿಸಿದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಇಂಗ್ಲೆಂಡ್ ಸರ್ಕಾರದ ಅಂತರರಾಷ್ಟ್ರೀಯ ಶಿಕ್ಷಣ ಚಾಂಪಿಯನ್, ಶಿಕ್ಷಣ ತಜ್ಞ ಸರ್ ಸ್ಟೀವ್ ಸ್ಮಿತ್, ಈ ವರ್ಷದ ಮೇ ತಿಂಗಳಲ್ಲಿ ತಮ್ಮ ದೇಶದಲ್ಲಿ ನಡೆಯಲಿರುವ `ವಿಶ್ವ ಶಿಕ್ಷಣ ಒಕ್ಕೂಟ’ದ ಸಮಾವೇಶಕ್ಕೆ ಸಚಿವರನ್ನು ಆಹ್ವಾನಿಸಿದರು. ಇದರಂತೆ, ರಾಜ್ಯದಿಂದ ಉನ್ನತ ಶಿಕ್ಷಣ ಸಚಿವರ ನೇತೃತ್ವದಲ್ಲಿ ತೆರಳಲಿರುವ ನಿಯೋಗದಲ್ಲಿ ರಾಜ್ಯ ಉನ್ನತ ಶಿಕ್ಷಣ ಪರಿಷತ್ತಿನ ಪ್ರತಿನಿಧಿಗಳು, ಹಲವು ವಿ.ವಿ.ಗಳ ಕುಲಪತಿಗಳು ಮತ್ತು ಇಲಾಖೆಯ ಕೆಲವು ಉನ್ನತಾಧಿಕಾರಿಗಳು ಇರಲಿದ್ದಾರೆ.

ಕಾರ್ಯಕ್ರಮದಲ್ಲಿ ಬ್ರಿಟಿಷ್ ಕೌನ್ಸಿಲ್ ಸಂಸ್ಥೆಯ ದಕ್ಷಿಣ ಏಷ್ಯಾ ಪ್ರಾದೇಶಿಕ ನಿರ್ದೇಶಕ ಆಡ್ರಿಯನ್ ಚಾಡ್ವಿಕ್, ಪ್ರಾಥಮಿಕ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಸೆಲ್ವಕುಮಾರ್, ಕಾಲೇಜು ಶಿಕ್ಷಣ ಇಲಾಖೆ ಆಯುಕ್ತ ಪಿ.ಪ್ರದೀಪ, ಉನ್ನತ ಶಿಕ್ಷಣ ಪರಿಷತ್ ಉಪಾಧ್ಯಕ್ಷ ಪ್ರೊ ತಿಮ್ಮೇಗೌಡ, ಕಾರ್ಯನಿರ್ವಾಹಕ ನಿರ್ದೇಶಕ ಗೋಪಾಲಜೋಶಿ, ಆಡಳಿತಾಧಿಕಾರಿ ಡಾ.ತಾಂಡವಗೌಡ ಉಪಸ್ಥಿತರಿದ್ದರು.

Key words: Higher Education-Department – contract – British Council

ENGLISH SUMMARY…

MoU inked with British Council to impart global skills for students

Bengaluru: The Government of Karnataka and the British Council, the UK’s international organisation for educational opportunities and cultural exchange, signed a Memorandum of Understanding (MoU) on Friday, to renew their partnership in the area of Education, English, and Arts aimed at creating global opportunities for the youth of Karnataka.

The MoU was signed at Vikasa Soudha in presence of Dr. C.N. Ashwath Narayan, Minister of Higher Education, and B.C. Nagesh, Minister of Primary & Secondary Education. G. Kumar Naik, Principal Secretary, Higher Education, GoK and Janaka Pushpanathan, Director British Council South India signed the MoU which lasts for 3 years.

Speaking on the occasion, Ashwatha Narayana said the extended 3 years MoU would enable to develop the skills of faculty and students from higher education institutions in the State and to Expand collaborations through British Council initiatives such as the UK-India Education Research Initiative (UKIERI) and the Going Global Partnerships.

This MoU also paves the way to develop sustainable partnerships in research and innovation between centers of excellence (CoE) in both, the UK and Karnataka, across areas of Artificial Intelligence, machine learning, ed-tech, biosciences, and cybersecurity, he stated.

Explaining the benefits Naraya explained, “The MoU allows to build initiatives to improve English and employability skills of young people attending industrial training institutions (ITIs), engineering and management courses. This facilitates student mobility between universities in India and the UK and enhances partnership opportunities between institutes in Karnataka and the UK for internationalisation in the curricula”.

Janaka Pushpanathan, Director South India, British Council said that the MoU would allow developing further initiatives to improve English teaching and enhance employability skills in schools and training institutes, building capacity in higher education & research, and promote co-operation on inspiring young people in the state through arts and culture.

On the occasion, Steve Smith, International Education Champion, Govt. of UK, extended the invitation for Ministers to participate in the Education World Forum (EWF) scheduled to be held in London in May 2022 to explore further partnerships for Karnataka.

Adrion Chadwick, Regional Director, British Council, South Asia, Dr.S.Selvakumar, Principal Secretay, Dept. of Primary & Secondary Education, P.Pradeep, Commissioner, DCTE, Prof.B.Thimme Gowda, Vice-Chairman, Prof.Gopalakrishna Joshi, ED, and Dr.Tandava Gowda, Administrator, State Higher Education Council (KSHEC) were present.