ಮೈಸೂರು,ಜುಲೈ,26,2022(www.justkannada.in): ದೇಶದಲ್ಲಿ ಉನ್ನತ ಶಿಕ್ಷಣ ಸಂಸ್ಥೆಗಳು ಸಂಖ್ಯೆಯಲ್ಲಿ ವೇಗವಾಗಿ ಬೆಳೆಯುತ್ತಿವೆ. ಆದರೆ, ಉನ್ನತ ಶಿಕ್ಷಣ ಎಲ್ಲರಿಗೂ ಸಿಗುತ್ತಿಲ್ಲ ಎಂದು ಮೈಸೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್ ಅಭಿಪ್ರಾಯಪಟ್ಟರು.
ಮಾನಸ ಗಂಗೋತ್ರಿಯ ಇಎಂಆರ್‌ಸಿ ಸಭಾಂಗಣದಲ್ಲಿ ಮೈಸೂರು ವಿಶ್ವವಿದ್ಯಾಲಯ ಸಂಶೋಧಕರ ಸಂಘ, ಸಿ.ಎಸ್.ಐ.ಆರ್.-ಯು.ಜಿ.ಸಿ. ನೆಟ್ ತರಬೇತಿ ಕೇಂದ್ರ, ಆಂತರಿಕ ಗುಣಮಟ್ಟ ಖಾತರಿ ಘಟಕ ಇವರ ಸಂಯುಕ್ತ ಆಶ್ರಯದಲ್ಲಿ ‘ಸಂಶೋಧನಾ ವಿಧಾನಗಳು ಮತ್ತು ಪ್ರಕಟಣೆ’ ಎಂಬ ವಿಷಯದ ಕುರಿತು ಒಂದು ದಿನದ ಉಚಿತ ಕಾರ್ಯಾಗಾರದಲ್ಲಿ ಮಾತನಾಡಿದರು.
ಪದವೀಧರರ ಕಡಿಮೆ ಉದ್ಯೋಗಾವಕಾಶ, ಬೋಧನೆಯ ಕುಸಿತದ ಗುಣಮಟ್ಟ, ಕ್ಷೀಣಿಸುತ್ತಿರುವ ಅನುದಾನ, ನಿಧಿಗಳು ಮತ್ತು ಸಂಕೀರ್ಣ ನಿಯಂತ್ರಣ ನೀತಿಗಳಿಂದ ನಾನಾ ಸಮಸ್ಯೆಗಳು ತಲೆದೂರಿದೆ. ಉನ್ನತ ಶಿಕ್ಷಣದ ಪ್ರವೇಶವು ಅನೇಕ ಆಕಾಂಕ್ಷಿಗಳಿಗೆ ದೂರದ ಗುರಿಯಾಗಿ ಉಳಿದಿದೆ. ಪ್ರಸ್ತುತ ಅಂಕಿ ಅಂಶವು 27.1% ರಷ್ಟಿದೆ, 2022 ರ ವೇಳೆಗೆ 32% ಅನ್ನು ಸಾಧಿಸುವ ಗುರಿ ಹೊಂದಲಾಗಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಮಾಜದ ಆಶೋತ್ತರಗಳನ್ನು ಪೂರೈಸಲು ಮತ್ತು ಶೈಕ್ಷಣಿಕ ವ್ಯವಸ್ಥೆಯನ್ನು ಪರಿವರ್ತಿಸಲು ಪ್ರಯತ್ನಿಸುತ್ತಿವೆ ಎಂದರು.
ನಾವಿಂದು 75ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸುತ್ತಿದ್ದೇವೆ. ವರ್ಷವಿಡೀ ’ಆಜಾದಿ ಕಾ ಅಮೃತ್ ಮಹೋತ್ಸವ’ವನ್ನು ನಡೆಸಲಾಗುತ್ತಿದೆ. ಒಂದು ರಾಷ್ಟ್ರವಾಗಿ, ನಮ್ಮ ವೈಜ್ಞಾನಿಕ ಸಾಧನೆಗಳು ಭವಿಷ್ಯದ ಬಗ್ಗೆ ಹೊಸ ಭರವಸೆಯನ್ನು ಮೂಡಿಸಿದೆ. ಭಾರತದಲ್ಲಿ ಉನ್ನತ ಶಿಕ್ಷಣ ಸಂಸ್ಥೆಗಳು ಸಂಖ್ಯೆಯಲ್ಲಿ ವೇಗವಾಗಿ ಬೆಳೆಯುತ್ತಿವೆ. ಸುಮಾರು 52,000 ಕ್ಕೂ ಹೆಚ್ಚು ಸಂಸ್ಥೆಗಳನ್ನು ಹೊಂದಿದೆ. 2001ರ ಅಂಕಿಅಂಶಗಳಿಗೆ ಹೋಲಿಸಿದರೆ ಇದು ನಾಲ್ಕು ಪಟ್ಟು ಹೆಚ್ಚಾಗಿದೆ. ಇದು ಸಂತೋಷದ ಜೊತೆಗೆ ಹೊಸ ಸವಾಲುಗಳನ್ನು ಸೃಷ್ಟಿಸಿದೆ ಎಂದರು.
ಈ ಕಾರ್ಯಾಗಾರವು ಶಿಕ್ಷಣದಲ್ಲಿ ಗುಣಮಟ್ಟದ ಉತ್ತೇಜಿಸಲು ಸಂಶೋಧನೆ ಎಷ್ಟು ಮಹತ್ವದ ಪಾತ್ರವನ್ನು ವಹಿಸಿದೆ ಎಂಬುದನ್ನು ತಿಳಿಸಿಕೊಡುತ್ತದೆ. ಜೊತೆಗೆ ಸಂಶೋಧನಾ ವಿಧಾನದ ಬಗ್ಗೆ ಚರ್ಚಿಸುತ್ತದೆ. ಇದರ ಪ್ರಯೋಜನವನ್ನು ವಿದ್ಯಾರ್ಥಿಗಳು ಪಡೆದುಕೊಳ್ಳಬೇಕೆಂದು ಸಲಹೆ ನೀಡಿದರು.
ಎನ್ ಇಪಿ ಸಮರ್ಥ ಅನುಷ್ಠಾನ
ಹೊಸ ಶಿಕ್ಷಣ ನೀತಿ ಉನ್ನತ ಶಿಕ್ಷಣ ಸೇರಿದಂತೆ ಶೈಕ್ಷಣಿಕ ವ್ಯವಸ್ಥೆಯನ್ನು ಪುನರುಜ್ಜೀವನಗೊಳಿಸುವಲ್ಲಿ ಮಹತ್ವಾಕಾಂಕ್ಷೆಯ ಹೆಜ್ಜೆಯಾಗಿದೆ. ಪರಿಣಾಮಕಾರಿ ಅನುಷ್ಠಾನಗೊಂಡರೆ ದೇಶದ ಶಿಕ್ಷಣ ವ್ಯವಸ್ಥೆಯಲ್ಲಿ ಅಮೂಲಾಗ್ರ ಬದಲಾವಣೆ ತರಬರಬಹುದು. ಈ ನಿಟ್ಟಿನಲ್ಲಿ, ಮೈಸೂರು ವಿಶ್ವವಿದ್ಯಾನಿಲಯವು ಎನ್ ಇಪಿ ಅಳವಡಿಸಿಕೊಂಡ ಕರ್ನಾಟಕದ ಮೊದಲ ವಿವಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಕೋವಿಡ್ ನಂತಹ ಮಾರಣಾಂತಿಕ ರೋಗವನ್ನು ನಿಯಂತ್ರಿಸುವ ಭಾರತದ ಪ್ರಯತ್ನ ವಿಶ್ವಕ್ಕೆ ಮಾದರಿಯಾಗಿದೆ ಎಂದು ಹೇಳಿದರು.
ಮೈಸೂರು ವಿಶ್ವವಿದ್ಯಾನಿಲಯ ನಾನಾ ಸಮಸ್ಯೆ ಸವಾಲಿನ ನಡುವೆಯೂ ಉತ್ತಮ ಕಾರ್ಯ ನಿರ್ವಹಣೆ ಮಾಡುತ್ತಿದೆ. ಕಳೆದ ವರ್ಷ ವಿವಿ ನ್ಯಾಕ್‌ನಿಂದ ‘ಎ’ ಗ್ರೇಡ್ ಮಾನ್ಯತೆ ಪಡೆದಿದೆ. ಇತ್ತೀಚೆಗೆ ಎನ್ ಐಆರ್ ಎನಿಂದ ವಿಶ್ವವಿದ್ಯಾನಿಲಯ ವಿಭಾಗದಲ್ಲಿ 33ನೇ ಸ್ಥಾನ ದೊರೆತಿದೆ. ಇನ್ನೂ ಉತ್ತಮ ಶ್ರೇಯಾಂಕಗಳನ್ನು ಗಳಿಸಬಹುದಿತ್ತು. ಆದರೆ ಅಧ್ಯಾಪಕರ ಕೊರತೆ ಹಾಗೂ ಸಂಶೋಧನಾ ಫಲಿತಾಂಶವು ವೇಗವಾಗಿ ಕುಸಿಯುತ್ತಿರುವುದು ಇದಕ್ಕೆ ಕಾರಣ ಎಂದರು.
ಕಾರ್ಯಾಗಾರದ ಉದ್ಘಾಟನೆಯನ್ನು ವಿಶ್ರಾಂತ ಕುಲಪತಿ ಪ್ರೊ.ಎಸ್.ಆರ್.ನಿರಂಜನ ನೆರವೇರಿಸಿದರು. ಆಶಯ ಭಾಷಣವನ್ನು ಭಾರತೀಯ ವಿಜ್ಞಾನ ಸಂಸ್ಥೆ ಮಾಜಿ ನಿರ್ದೇಶಕ ಪ್ರೊ. ಪಿ. ಬಲರಾಮ್ ನಡೆಸಿಕೊಟ್ಟರು. ಮನೋವಿಜ್ಞಾನ ಅಧ್ಯಯನ ವಿಭಾಗದ ಅಧ್ಯಕ್ಷ ಪ್ರೊ .ಜಿ.ವೆಂಕಟೇಶ್ ಕುಮಾರ್ ಹಾಗೂ ಐಕ್ಯೂಎಸಿ ನಿರ್ದೇಶಕ ಪ್ರೊ.ಎನ್.ಎಸ್.ಹರಿನಾರಾಯಣ ಭಾಗವಹಿಸಿದ್ದರು. ಪ್ರಾಧ್ಯಾಪಕ ಡಾ. ಕೆ.ಎನ್. ಅಮೃತೇಶ್, ಸಂಯೋಜಕ ಡಾ. ಜೆ. ಲೋಹಿತ್, ಮೈವಿವಿ ಸಂಶೋಧಕರ ಸಂಘದ ಅಧ್ಯಕ್ಷ ನಟರಾಜ್ ಶಿವಣ್ಣ ಇದ್ದರು.
ನಾನಾ ಗೋಷ್ಠಿ
ಮೊದಲ ಗೋಷ್ಠಿಯಲ್ಲಿ ಸಂಶೋಧನೆಯ ಬಗೆಗಿನ ಮನೋಭಾವ ಎಂಬ ವಿಷಯದ ಕುರಿತು ವಿಷಯ ತಜ್ಞರು ಚರ್ಚೆ ನಡೆಸಿದರು. ಎರಡನೇ ಗೋಷ್ಠಿಯಲ್ಲಿ ಸಂಶೋಧನಾ ವಿನ್ಯಾಸದ ಬಗ್ಗೆ ಬಹದ್ದೂರ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ ಮೆಂಟ್ ಸೈನ್ಸ್ ನ ಅಧ್ಯಕ್ಷರಾದ ಪ್ರೊ ಡಿ. ಆನಂದ್ ವಿಷಯ ಮಂಡಿಸಿದರು.
ಮೂರನೇ ಗೋಷ್ಠಿಯಲ್ಲಿ ಸಂಶೋಧನೆ ಮತ್ತು ಪ್ರಕಟಣೆಯಲ್ಲಿ ನೈತಿಕತೆ ಎಂಬ ವಿಷಯದ ಬಗ್ಗೆ ನಿವೃತ್ತ ಗ್ರಂಥಪಾಲಕರಾದ ಡಾ. ಸಿ.ಪಿ. ರಾಮಶೇಷ್ ತಮ್ಮ ಅನಿಸಿಕೆ ಹಂಚಿಕೊಳ್ಳಲಿದ್ದಾರೆ. ಸಮಾರೋಪ ಭಾಷಣವನ್ನು ಐ.ಎನ್.ಎಸ್.ಎ. ಹಿರಿಯ ವಿಜ್ಞಾನಿ ಡಾ. ಆರ್. ರಾಘವೇಂದ್ರರಾವ್ ನಡೆಸಿಕೊಡಲಿದ್ದಾರೆ.
Key words: higher-education – increase- further-Mysore University-VC-Prof. G. Hemanth Kumar
ENGLISH SUMMARY…
No. of people availing higher education should increase: UoM VC
Mysuru, July 26, 2022 (www.justkannada.in): “The number of higher education institutions in the state is growing. But, higher education is not reachable to everyone,” observed Prof. G. Hemanth Kumar, Vice-Chancellor, University of Mysore.
He participate in the one-day free workshop on the topic, “Research Methods and Publication,” organized by the University of Mysore Researchers Association, CSIR-UGC Net Training Center, under the auspices of the Internal Quality Assessment Centre, held at the EMRC auditorium in Manasa Gangotri campus.
In his address, he said, “lesser job opportunities for graduates, declined quality of teaching, declining grants, funds and due to complex management policies the education sector is facing several problems. Higher education has remained a mirage for many aspirants. The present statistic is 27.1%. However, it is aimed to increase this number to 32% by 2022. Both the State and the Union governments are attempting to transform the education system and fulfill the ambitions of the society.”
“We are celebrating our 75th Independence day this year. Azadi ka Amruth Mahotsav is observed the entire year. As a nation, our scientific achievements have triggered new hope for a new future. Higher education institutions are growing faster in our country. There are an estimated 52,000 institutions as of now, which is four times more compared to the 2001 statistics. While it is indeed a matter to be happy, it has also created new challenges,” he explained.
“This workshop will show how much important are research works to increase the quality of education. Moreover, it also discusses the research methods. I advise the students to utilize this opportunity,” he added.
Former Vice-Chancellor Prof. S.R. Niranjan inaugurated the workshop. Prof. P. Balram, Former Director of Indian Science Institute presented the introductory speech. Prof. G. Venkatesh Kumar, Chairperson, Psychological Research Division, and IQAC Director Prof. N.S. Harinarayan participated. Dr. K.N. Amrutesh, Coordinator Dr. J. Lohith, and University of Mysore Researchers Association Chairperson Nataraj Shivanna were present.
Keywords: University of Mysore/ workshop/ higher education