ಬೆಂಗಳೂರು, ಸೆಪ್ಟೆಂಬರ್ 11, 2022 (www.justkannada.in): ಈ ವರ್ಷ 48 ವರ್ಷಗಳ ಇತಿಹಾಸದಲ್ಲೇ ಅತ್ಯಧಿಕ ಕಾವೇರಿ ನೀರು ತಮಿಳುನಾಡಿಗೆ ಸೇರಿದೆ.
ಜಲಾನಯನ ಪ್ರದೇಶದ ಎಲ್ಲಾ ಜಲಾಶಯಗಳು ತುಂಬಿರುವುದರಿಂದ, ರಾಜ್ಯದಿಂದ ತಮಿಳುನಾಡಿಗೆ ಇಡೀ ಜಲ ವರ್ಷಕ್ಕೆ (ಜೂನ್’ನಿಂದಲೇ) 47 ಟಿಎಂಸಿ ಅಡಿ ಹೆಚ್ಚುವರಿ ಕಾವೇರಿನೀರನ್ನು ಬಿಡುಗಡೆಮಾಡಿದೆ. ಇದು 48 ವರ್ಷಗಳಲ್ಲೇ ಗರಿಷ್ಠವಾಗಿದೆ.
ಹಾರಂಗಿ, ಹೇಮಾವತಿ, ಕೆಆರ್‌ಎಸ್, ಕಬಿನಿ ಸೇರಿದಂತೆ ಕಾವೇರಿ ಜಲಾನಯನ ಪ್ರದೇಶದ ಎಲ್ಲಾ ನಾಲ್ಕು ಜಲಾಶಯಗಳಲ್ಲಿ 104 ಟಿಎಂಸಿ ಅಡಿ ರೇಂಜ್ ಗೆ ಇತ್ತು. 114 ಟಿಎಂಸಿ ಅಡಿ ಒಟ್ಟು ನೀರು ಸಂಗ್ರಹಿಸಬಹುದು.
ಅಂದಹಾಗೆ ರಾಜ್ಯದಲ್ಲಿ ಈ ಬಾರಿ ಮಳೆಯಾಗಿದ್ದು, ಜೂನ್ 1ರಿಂದ ಆಗಸ್ಟ್ 31ರವರೆಗಿನ ಮುಂಗಾರು ಮಳೆ ಅವಧಿಯಲ್ಲಿ ಸಾಧಾರಣಕ್ಕಿಂತ ಶೇ.22ರಷ್ಟು ಅಧಿಕ ಮಳೆಯಾಗಿದೆ.