ಬೆಂಗಳೂರು,ಫೆಬ್ರವರಿ,9,2022(www.justkannada.in): ಹಿಜಾಬ್ ವಿವಾದಕ್ಕೆ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳೇ ಕಾರಣ ಎಂದು ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರು ಗುಡುಗಿದ್ದಾರೆ.
ಈ ಕುರಿತು ನವದೆಹಲಿಯಲ್ಲಿ ಮಾತನಾಡಿದ ಹೆಚ್.ಡಿ ದೇವೇಗೌಡರು, ಇದರಲ್ಲಿ ಯಾವುದೇ ಅನುಮಾನ ಇಲ್ಲ. ಹಿಜಾಬ್ ವಿವಾದಕ್ಕೆ ಈ ಎರಡು ಪಕ್ಷಗಳೇ ಕಾರಣ ಪ್ರಕರಣ ವಿಸ್ತೃತ ಪೀಠಕ್ಕೆ ಹೋಗಿದೆ ಅಂದ್ರೆ ಗಂಭೀರವಾಗಿ ಪರಿಗಣಿಸಿದೆ. ಸರ್ಕಾರ ಈ ವಿವಾದ ಹತ್ತಿಕ್ಕಬಹುದಿತ್ತು ಆದರೆ ಮಾಡಿಲ್ಲ. ಸರ್ಕಾರಕ್ಕೆ ಮೊದಲೇ ಮಾಹಿತಿ ತಿಳಿದಿರುತ್ತದೆ. ಆದೆರೆ ಯಾಕೆ ಹೀಗಾಯಿತು.
ವಿವಾದ ನಡೆಯಲಿ ಎಂದು ಬಿಜೆಪಿ ಸರ್ಕಾರ ಬಿಟ್ಟಿದೆ. ಬಿಜೆಪಿ ಸರ್ಕಾರವೇ ಈ ವಿವಾದ ಹಬ್ಬಲು ಬಿಟ್ಟಿದೆ. ಎಲ್ಲಗೆ ಬಂದಿದೆ ನಮ್ಮ ರಾಜ್ಯ. ಎರಡೂ ಪಕ್ಷದ ನಾಯಕರು ಜನರನ್ನ ಪ್ರಚೋದಿಸುತ್ತಿದ್ದಾರೆ ಎಂದು ಹೆಚ್.ಡಿ ದೇವೇಗೌಡರು ಕಿಡಿಕಾರಿದರು.
Key words: hijab-congress-bjp-former PM-HD devegowda