ವಿಚಾರಣೆ ಮುಗಿಯುವವರೆಗೂ ಶಾಲು, ಹಿಜಾಬ್ ಧರಿಸಿ ಶಾಲೆಗೆ ಹೋಗುವಂತಿಲ್ಲ- ಹೈಕೋರ್ಟ್ ಮಧ್ಯಂತರ ಆದೇಶ.

ಬೆಂಗಳೂರು,ಫೆಬ್ರವರಿ,10,2022(www.justkannada.in): ವಿಚಾರಣೆ ಮುಗಿಯುವರೆಗೂ ಶಾಲು ಹಿಜಾಬ್ ಧರಿಸಿ ಶಾಲೆಗೆ ಹೋಗುವಂತಿಲ್ಲ ಎಂದು ಹೈಕೋರ್ಟ್ ಮಧ್ಯಂತರ ಆದೇಶ ಹೊರಡಿಸಿ ವಿಚಾರಣೆಯನ್ನ ಸೋಮವಾರಕ್ಕೆ ಮುಂದೂಡಿದೆ.

ಶಾಲಾ-ಕಾಲೇಜುಗಳಲ್ಲಿ ಹಿಜಾಬ್ ಗೆ ಅನುಮತಿ ಕೋರಿ ಸಲ್ಲಿಸಲಾಗಿದ್ದ ಅರ್ಜಿ ವಿಚಾರಣೆ ಹೈಕೋರ್ಟ್ ನ ಸಿಜೆ ರಿತುರಾಜ್ ಅವಸ್ತಿ, ನ್ಯಾ.ಕೃಷ್ಣ ಎಸ್ ದೀಕ್ಷಿತ್ ಹಾಗೂ ನ್ಯಾ.ಖಾಜಿ ಜೈಬುನ್ನೀಸಾ ಮೊಹಿದ್ದೀನ್ ಅವರನ್ನೊಳಗೊಂಡ ಪೂರ್ಣಪೀಠದಲ್ಲಿ ನಡೆಯಿತು.

ಅರ್ಜಿದಾರರ ಪರ ದೇವದತ್ ಕಾಮತ್, ಸಂಜಯ್ ಹೆಗ್ಡೆ, ಸರ್ಕಾರದ ಪರ ಎಜಿ ಪ್ರಭುಲಿಂಗ ನಾವದಗಿ ವಾದ ಮಂಡಿಸಿದರು. ವಿಚಾರಣೆಯನ್ನ ಸೋಮವಾರಕ್ಕೆ ಮುಂದೂಡಿದ ಹೈಕೋರ್ಟ್ ತ್ರಿಸದಸ್ಯ ಪೀಠ, ವಿಚಾರಣೆ ಮುಗಿಯವವರೆಗೆ ಧಾರ್ಮಿಕ ಗುರುತುಗಳನ್ನ ಬಳಸಬಾರದು. ಅಂತಿಮ ಆದೇಶದವರೆಗೂ ಸಮವಸ್ತ್ರ ಧರಿಸಿಯೇ ಶಾಲೆಗೆ ಹೋಗಬೇಕು. ಈಗ ಮಧ್ಯಂತರ ಆದೇಶ ನೀಡ ಬಯಸುತ್ತೇವೆ. ಸೋಮವಾರ ವಿಚಾರಣೆ ಮುಂದುವರೆಯಲಿದೆ.  ಪ್ರತಿದಿನ ವಿಚಾರಣೆ ನಡೆಸಿ ಶೀಘ್ರದಲ್ಲೇ ತೀರ್ಪು ನೀಡುತ್ತೇವೆ. ಶೀಘ್ರದಲ್ಲೀ ಶಾಲೆಕಾಲೇಜು ಆರಂಭಿಸಬೇಕು ಎಂದು ಹೈಕೋರ್ಟ್ ಸಿಜೆ ಸೂಚಿಸಿದರು.

Key words: hijab-High Court- interim- order.