ಉಡುಪಿ,ಮಾರ್ಚ್,15,2022(www.justkannada.in): ಹಿಜಾಬ್ ಕುರಿತು ಹೈಕೋರ್ಟ್ ತ್ರಿಸದಸ್ಯ ಪೀಠ ಇಂದು ನೀಡಿದ ತೀರ್ಪಿಗೆ ರಿಟ್ ಅರ್ಜಿದಾರಾದ ಐವರು ಮುಸ್ಲೀಂ ವಿದ್ಯಾರ್ಥಿನೀಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಉಡುಪಿಯಲ್ಲಿ ಸುದ್ಧಿಗೋಷ್ಠಿ ನಡೆಸಿ ಈ ಕುರಿತು ಮಾತನಾಡಿರುವ ಅವರು, ಹೈಕೋರ್ಟ್ ತೀರ್ಪು ನಮ್ಮ ಪರವಾಗಿ ಬಂದಿಲ್ಲ. ನಮ್ಮ ಹಕ್ಕು ನಮಗೆ ಸಿಕ್ಕಿಲ್ಲ. ನಾವು ಹಿಜಾಬ್ ತೆಗೆಯಲ್ಲ. ನಮ್ಮ ಹೋರಾಟ ಮುಂದುರೆಸುತ್ತೇವೆ ಎಂದು ತಿಳಿಸಿದ್ದಾರೆ.
ನಮಗೆ ಹಿಜಾಬ್ ಬೇಕೆಂದು ಕೋರ್ಟ್ ಮೆಟ್ಟಿಲೇರಿದ್ದವು. ನ್ಯಾಯಾಂಗದ ಮೇಲೆ ನಮಗೆ ಭರವಸೆ ಇತ್ತು. ಆದರೆ ನಮಗೆ ನ್ಯಾಯ ಸಿಕ್ಕಿಲ್ಲ. ಹಿಜಾಬ್ ವಿಚಾರವಾಗಿ ಹೋರಾಟ ಮುಂದುವರೆಸುತ್ತೇವೆ. ಹಿಜಾಬ್ ಗಾಗಿ ನಾವು ಎಲ್ಲಾ ರೀತಿಯ ಕಾನೂನು ಪ್ರಯತ್ನ ಮಾಡುತ್ತೇವೆ ಎಂದರು.
ಪರೀಕ್ಷೆ ಬರೆಯಲು ಸಿದ್ಧರಿದ್ದೇವೆ. ಹಿಜಾಬ್ ತೆಗೆಯಲ್ಲ. ಧಾರ್ಮಿಕ ಆಚರಣೆ ಮಾಡೋದು ನಮಗೆ ಬಿಟ್ಟಿದ್ದು. ನಮಗೆ ಧರ್ಮ, ಶಿಕ್ಷಣ ಎರಡೂ ಮುಖ್ಯ. ಕಾಲೇಜಿಗೆ ಗೈರಾಗಿದ್ರೂ ಪರೀಕ್ಷೆಗೆ ಸಿದ್ಧತೆ ನಡೆಸಿದ್ದೇವೆ. ಸರ್ಕಾರ ಆಡಳಿತ ಮಂಡಳಿ ಅವಕಾಶ ನೀಡಿದರೇ ಪರೀಕ್ಷೆ ಬರೆಯುತ್ತೇವೆ ಎಂದು ಐವರು ವಿದ್ಯಾರ್ಥಿನೀಯರು ತಿಳಿಸಿದ್ದಾರೆ.
Key words: hijab-high court- petitioner -student