ಬೆಂಗಳೂರು,ಫೆಬ್ರವರಿ,4,2022(www.justkannada.in): ರಾಜ್ಯದಲ್ಲಿ ವಿವಾದಕ್ಕೀಡಾಗಿರುವ ಹಿಜಾಬ್ ಕೇಸರಿ ಶಾಲು ವಿವಾದ ಇದೀಗ ರಾಷ್ಟ್ರಮಟ್ಟಕ್ಕೂ ವ್ಯಾಪಿಸಿದ್ದು ಸರ್ಕಾರಕ್ಕೆ ತಲೆನೋವಾಗಿ ಪರಿಣಮಿಸಿದೆ. ಈ ವಿವಾದ ಕುರಿತು ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ಖಾನ್ ಪ್ರತಿಕ್ರಿಯಿಸಿದ್ದಾರೆ.
ಈ ಬಗ್ಗೆ ಮಾತನಾಡಿರುವ ಅವರು, ಹಿಜಾಬ್ ಧರಿಸುವುದು ಅವರ ಹಕ್ಕು. ಹಿಜಾಬ್ ಧರಿಸಿದ್ದ ಕಾಲೇಜಿಗೆ ಬಂದಿರುವ ವಿದ್ಯಾರ್ಥಿನಿಯರನ್ನ ತಡೆದಿದ್ದಾರೆ. ವಿದ್ಯಾರ್ಥಿನಿಯರನ್ನ ತಡೆದಿದ್ದು ಸರಿ ಅಲ್ಲ. ವಿದ್ಯಾರ್ಥಿಗಳನ್ನ ರಾಜಕೀಯಕ್ಕೆ ಬಳಸಿಕೊಳ್ತಿದ್ದಾರೆ. ಸರ್ಕಾರ ಇದರ ಹಿಂದೆ ಇದೆ ಎಂದು ಅನ್ನಿಸುತ್ತಿದೆ ಎಂದು ಕಿಡಿಕಾರಿದ್ದಾರೆ.
ಇನ್ನು ಈ ಕುರಿತು ಮಾತನಾಡಿರುವ ಮಾಜಿ ಸಚಿವ ಯುಟಿ ಖಾದರ್, ಹಿಜಾಬ್ ಧರಿಸಿದೋ ಹಿಂದಿನಿಂದಲೂ ಇದೆ. ಈಗ ಕೇಸರು ಶಾಲು ಧರಿಸುತ್ತಿದ್ದಾರೆ. ಹಿಜಾಬ್ ನಿಲ್ಲಿಸುವುದ ಸರಿ ಇಲ್ಲ. ಬೇಕಾದರೇ ಕೇಸರಿ ಶಾಲು ಧರಿಸಲು ಅವಕಾಶ ನೀಡಿ ಈ ಬಗ್ಗೆ ಹೈಕೋರ್ಟ್ ಏನು ಹೇಳುತ್ತೆ ನೋಡೋಣಾ ಎಂದಿದ್ದಾರೆ.
Key words: hijab-MLA- Zamir Ahmad Khan