ಮೈಸೂರು,ಸೆಪ್ಟಂಬರ್,18,2021(www.justkannada.in): ಹಿಂದಿ ಭಾಷೆ ಹೇರಿಕೆ ಕೇಂದ್ರ ಸರ್ಕಾರದ ಹುನ್ನಾರವಾಗಿದ್ದು, ಹಿಂದಿ ಭಾಷೆ ಮೂಲಕ ಕನ್ನಡ ತುಳಿಯುವ ಕೆಲಸ ಆಗಿದೆ ಎಂದು ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ವಾಗ್ದಾಳಿ ನಡೆಸಿದ್ದಾರೆ.
ಮೈಸೂರಿನಲ್ಲಿ ಇಂದು ಮಾತನಾಡಿದ ವಾಟಾಳ್ ನಾಗರಾಜ್, ನಮಗೆ ಕನ್ನಡವೇ ಶಕ್ತಿ, ಕನ್ನಡವೇ ಸಾರ್ವಭೌಮ. ಹಿಂದಿ ಹೇರಿಕೆಗೆ ಬೆಂಬಲ ಕೊಡಬಾರದು. ಬ್ಯಾಂಕ್ ಗಳಲ್ಲಿ ಹಿಂದಿ ಭಾಷೆ ತೆಗಿಯಬೇಕು. ಚೆಕ್ ಗಳೂ ಕೂಡ ಕನ್ನಡದಲ್ಲೆ ಇರಬೇಕು. ಕನ್ನಡಕ್ಕೆ ಗೌರವ ಕೊಡದೆ ಹೋದರೆ ಕನ್ನಡ ಬಿಟ್ಟು ನಿಮ್ಮ ರಾಜ್ಯಕ್ಕೆ ಹೊರಡಿ ಎಂದು ಕಿಡಿಕಾರಿದರು.
ನಾಳೆ ಬೆಳಗ್ಗೆ ಬೆಂಗಳೂರಲ್ಲಿ ಹಿಂದಿ ಭೂತ ದಹನ ಮಾಡಲಿದ್ದೇವೆ. ನವೆಂಬರ್ 1 ಕರ್ನಾಟಕ ಏಕೀಕರಣ ದಿನ. ಅಂದು ರಾಜ್ಯೋತ್ಸವ ಜೊತೆಗೆ ಹಿಂದಿ ತೊಲಗಬೇಕು ಎಂದು ಹಿಂದಿ ವಿರೋಧಿ ಕೂಗು ಏಳಲಿದೆ. ಕೇಂದ್ರದ ಮಂತ್ರಿಗಳು ನಮಗೆ ಬೇಕಿಲ್ಲ. ಇದು ಕೇಂದ್ರದ ಗುಲಾಮಗಿರಿ ಸಂಕೇತ. ಕನ್ನಡವೂ ಸಹ ರಾಷ್ಟ್ರ ಭಾಷೆ. ಹಿಂದಿಯಷ್ಟೆ ಕನ್ನಡಕ್ಕೆ ಶಕ್ತಿ ಇದೆ. ಪಾರ್ಲಿಮೆಂಟ್ ಸದಸ್ಯ ಏನು ಮಾಡುತ್ತಿದ್ದಾರೆ. ಇವರಿಗೆ ಜವಾಬ್ದಾರಿ ಇದ್ರೆ ಲೋಕಸಭೆಯಲ್ಲಿ ಸಂಸದರು ಹೋರಾಟ ಮಾಡಬೇಕು ಎಂದು ವಾಟಾಳ್ ನಾಗರಾಜ್ ಆಗ್ರಹಿಸಿದರು.
Key words: Hindi language -central government-kannada-vatal Nagaraj