ದಕ್ಷಿಣ ಕನ್ನಡ,ಮೇ,16,2022(www.justkannada.in): ರಾಜ್ಯದಲ್ಲಿ ಹಿಜಾಬ್, ಹಲಾಲ್, ಮುಸ್ಲಿಂ ವ್ಯಾಪಾರಿಗಳಿಗೆ ನಿರ್ಬಂಧ, ಆಜಾನ್ ವಿವಾದಗಳ ಬೆನ್ನಲ್ಲೇ ಇದೀಗ ಬಿಜೆಪಿ ಶಾಸಕರೊಬ್ಬರು ಟೀಕೆಗಳಿಗೆ ಗುರಿಯಾಗುವಂತ ಹೇಳಿಕೆಯೊಂದನ್ನ ನೀಡಿದ್ದಾರೆ.
ಹೌದು, ಚುನಾವಣೆಯಲ್ಲಿ ನನಗೆ ಮುಸ್ಲಿಂ ವೋಟುಗಳು ಬೇಡ. ತಾಕತ್ತಿನಿಂದ ಹೇಳುತ್ತೇನೆ. ನನಗೆ ಮುಸ್ಲಿಮರ ವೋಟ್ ಬೇಡ. ಹಿಂದೂಗಳ ವೋಟ್ ಸಾಕು ಎಂದು ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ಬಿಜೆಪಿ ಶಾಸಕ ಹರೀಶ್ ಪೂಂಜಾ ಹೇಳಿಕೆ ನೀಡಿದ್ದಾರೆ.
ಧಾರ್ಮಿಕ ಸಭೆಯೊಂದರಲ್ಲಿ ಮಾತನಾಡಿರುವ ಅವರು, ಮುಸ್ಲಿಂರ ವೋಟ್ ಇಲ್ಲದೇ ಗೆಲ್ತೀನಿ. ನಮಗೆ ಮುಸ್ಲೀಮರ ವೋಟು ಬೇಡ. ನನಗೆ ಹಿಂದೂಗಳ ಮತಗಳೇ ಸಾಕು. ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ಆಗಬೇಕು. ದತ್ತ ಪೀಠದಲ್ಲಿ ದತ್ತಾತ್ರೇಯರ ಪೀಠ ಆಗಬೇಕು,. ಹಾಗಾಗಿ ನನಗೆ ಹಿಂದೂಗಳ ವೋಟ್ ಸಾಕು ಎಂದಿದ್ದಾರೆ.
Key words: hindu-muslim-vote-bjp- MLA