ಯಾದಗಿರಿ,ಸೆಪ್ಟಂಬರ್,9,2021(www.justkannada.in): ನಾಡಿನಾದ್ಯಂತ ಗೌರಿ ಗಣೇಶ ಹಬ್ಬದ ಸಂಭ್ರಮವಾಗಿದ್ದು ಈ ನಡುವೆ ಶಿವಾಜಿ ಸೇನೆ ರಾಜ್ಯಾಧ್ಯಕ್ಷರಾದ ಪರಶುರಾಮ್ ಶೇಗುರಕರ್ ಪ್ರಚೋಧನಾಕಾರಿ ಭಾಷಣ ಮಾಡಿದ್ದಾರೆ.
ಹಿಂದೂಗಳು ಮನೆಗೊಂದು ತಲ್ವಾರ ಇಡಬೇಕು. ಒಂದು ಎಕರೆ ಜಮೀನು ಬಂದೂಕು ಇಡಬೇಕು ಎಂದು ರಾಜ್ಯಾಧ್ಯಕ್ಷರಾದ ಪರಶುರಾಮ್ ಶೇಗುರಕರ್ ಪ್ರಚೋದನಾಕಾರಿಯಾಗಿ ಹೇಳಿಕೆ ನೀಡಿದ್ದಾರೆ.
ಯಾದಗಿರಿ ತಾಲ್ಲೂಕು ಹೊನೆಗೇರಾದಲ್ಲಿ ಶಿವಾಜಿ ಸೇನೆ ರಾಜ್ಯಾಧ್ಯಕ್ಷ ಪರಶುರಾಮ್ ಮಾತನಾಡಿದ್ದು, 11 ಅಥವಾ 21 ದಿನ ಗಣೇಶ ಮೂರ್ತಿಯನ್ನ ಪ್ರತಿಷ್ಠಾಪಿಸಿ ಯಾವನೇ ಬಂದರೂ ನಮ್ಮ ಸಂಘಟನೆ ಹೆಸರು ಹೇಳಿ. ಅಮೇಲೆ ಯಾರು ಬರ್ತಾರೆ ನೋಡೇಬಿಡೋಣ. ಹಿಂದೂಗಳನ್ನ ಯಾರಿಂದಲೂ ತಡೆಯಲು ಆಗಲ್ಲ ಎಂದು ಹೇಳಿದ್ದಾರೆ.
Key words: Hindus – home- Talwar-Shivaji sene-president-yadgir