ಶಿವಮೊಗ್ಗ,ಜುಲೈ,21,2023(www.justkannada.in): ಪ್ರತಿ ಚುನಾವಣೆಯಲ್ಲಿ ಕನಿಷ್ಠ 10 ಜನ ಜೆಡಿಎಸ್ನಿಂದ ಹೊರ ಬರ್ತಿದ್ದಾರೆ. ಜೆಡಿಎಸ್ ಈ ಸ್ಥಿತಿಗೆ ಬರಲು ಅವರ ಕುಟುಂಬದವರೇ ಕಾರಣ, ನಾವಲ್ಲ ಎಂದು ಕೃಷಿ ಸಚಿವ ಚಲುವರಾಯಸ್ವಾಮಿ ಟಾಂಗ್ ನೀಡಿದರು.
ಶಿವಮೊಗ್ಗದಲ್ಲಿ ಇಂದು ಮಾತನಾಡಿದ ಸಚಿವ ಚಲುವರಾಯಸ್ವಾಮಿ, ಮಾಜಿ ಸಿಎಂ ಹೆಚ್ಡಿ ಕುಮಾರಸ್ವಾಮಿ ನಡವಳಿಕೆ ಸರಿಯಿಲ್ಲವೆಂದು ಜೆಡಿಎಸ್ನಿಂದ ಹೊರಬಂದಿದ್ದೇವೆ. ಮಂಡ್ಯದಲ್ಲಿ ಕಾಂಗ್ರೆಸ್ ಗೆಲ್ಲಲ್ಲ, ತಮ್ಮದೇ ಆಡಳಿತ ಎಂದು ತಿಳಿದುಕೊಂಡಿದ್ದರು.
ಈಗ ಎಲ್ಲವೂ ರಿವರ್ಸ್ ಆಗುತ್ತಿದೆ, 7 ಕ್ಷೇತ್ರಗಳ ಪೈಕಿ 6ರಲ್ಲಿ ಗೆದ್ದಿದ್ದೇವೆ. ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ನೋಡಿ ತಡೆದುಕೊಳ್ಳಲು ಆಗುತ್ತಿಲ್ಲ. ಯಾವ ಉದ್ದೇಶದಿಂದ ನಮ್ಮನ್ನು ಟಾರ್ಗೆಟ್ ಮಾಡುತ್ತಿದ್ದಾರೆ ಮಾಡಲಿ. ಹೊಸ ಸರ್ಕಾರ ಬಂದಾಗ ಅಧಿಕಾರಿಗಳ ವರ್ಗಾವಣೆ ಸಹಜ ಪ್ರಕ್ರಿಯೆ ಎಂದು ಚಲುವರಾಯಸ್ವಾಮಿ ಹೇಳಿದರು.
Key words: His family – reason – JDS -come – this stage-Minister -Chaluvarayaswamy