ಬೆಂಗಳೂರು,ಫೆ,28,2020(www.justkannada.in): ಶ್ವಾಸಕೋಶ ತೊಂದರೆಯಿಂದ ಬಳಲುತ್ತಿದ್ದ ಖ್ಯಾತ ಇತಿಹಾಸಕಾರ ಷ.ಶೆಟ್ಟರ್ (85) ಇಂದು ಕೊನೆಯುಸಿರೆಳೆದಿದ್ದಾರೆ.
ಇಂದು ಬೆಳಿಗ್ಗೆ ಖಾಸಗಿ ಆಸ್ಪತ್ರೆಯಲ್ಲಿ ಷ.ಶೆಟ್ಟರ್ ನಿಧನರಾದರು. ಶ್ವಾಸಕೋಶದಲ್ಲಿ ನೀರು ತುಂಬಿದ್ದ ಪರಿಣಾಮ ಷ.ಶೆಟ್ಟರ್ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಷ.ಶೆಟ್ಟರ್ ಮೃತಪಟ್ಟಿದ್ದಾರೆ. ಸ್ವಗೃಹ ಭೂಪಸಂದ್ರದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು.
ಬಳ್ಳಾರಿ ಜಿಲ್ಲೆಯ ಹಂಪಸಾಗರದಲ್ಲಿ 1935ರ ಡಿಸೆಂಬರ್ 11ರಂದು ಜನಿಸಿದ ಷ.ಶೆಟ್ಟರ್ ಮೈಸೂರು, ಧಾರವಾಡ ಮತ್ತು ಕೇಂಬ್ರಿಡ್ಜ್ ನಲ್ಲಿ ಉನ್ನತ ಅಧ್ಯಯನ ನಡೆಸಿದ್ದರು. ಇತಿಹಾಸ ಹಾಗೂ ಪ್ರಾಚೀನ ಲಿಪಿಗಳ ಬಗ್ಗೆ ಆಳವಾದ ಸಂಶೋಧನೆ ನಡೆಸಿದ್ದರು. ಸಾವನ್ನು ಸ್ವಾಗತಿಸಿ ಎಂಬ ಕೃತಿಯನ್ನು ರಚಿಸಿದ್ದರು.
Key words: historian-sha shetter- no more