ನಾಳೆ ಐತಿಹಾಸಿಕ ಕಡಲೆಕಾಯಿ ಪರಿಷೆ : ಸ್ವಚ್ಚತೆಗೆ ಆದ್ಯತೆ, ಜನರಿಗೆ ತೊಂದರೆಯಾಗದಂತೆ ಕ್ರಮ-ಸಚಿವ ರಾಮಲಿಂಗರೆಡ್ಡಿ.

ಬೆಂಗಳೂರು,ಡಿಸೆಂಬರ್,8,2023(www.justkannada.in):  ಬೆಂಗಳೂರಿನ ಬಸವನಗುಡಿಯಲ್ಲಿ ನಾಳೆಯಿಂದ ಡಿಸೆಂಬರ್ 13ರವರೆಗೆ ಐತಿಹಾಸಿಕ ಕಡಲೆಕಾಯಿ ಪರಿಷೆ  ನಡೆಯಲಿದ್ದು ಸ್ವಚ್ಚತೆಗೆ ಆದ್ಯತೆ ನೀಡಿದ್ದೇವೆ. ಜನರಿಗೆ ಯಾವುದೇ ತೊಂದರೆಯಾಗದಂತೆ ಕ್ರಮ ಕೈಗೊಂಡಿದ್ದೇವೆ ಎಂದು ಮುಜರಾಯಿ ಮತ್ತು ಸಾರಿಗೆ ಇಲಾಖೆ ಸಚಿವ ರಾಮಲಿಂಗರೆಡ್ಡಿ ತಿಳಿಸಿದರು.

ಈ ಕುರಿತು ಇಂದು ಮಾತನಾಡಿದ ಸಚಿವ ರಾಮಲಿಂಗರೆಡ್ಡಿ,  ನಾಳೆಯಿಂದ ಡಿ. 13ರವರೆಗೆ ಬೆಂಗಳೂರಿನ ಬಸವನಗುಡಿಯ ದೊಡ್ಡ ಬಸವಣ್ಣ, ದೊಡ್ಡ ಗಣಪತಿ ದೇವಸ್ಥಾನದಲ್ಲಿ ಐತಿಹಾಸಿಕ ಕಡಲೆಕಾಯಿ ಪರಿಷೆ  ನಡೆಯಲಿದೆ. ಈ ಬಾರಿ ಕಡಲೆಕಾಯಿ ಪರಿಷೆಯಲ್ಲಿ ಸ್ವಚ್ಚತೆಗೆ ಆದ್ಯತೆ ನೀಡಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಪರಿಷೆಯಲ್ಲಿ ಪ್ಲಾಸ್ಟಿಕ್​ ಬಳಕೆಗೆ ನಿರ್ಬಂಧಿಸಲಾಗಿದ್ದು, ಕಡ್ಲೆಕಾಯಿ ಪರಿಷೆಗೆ ಬನ್ನಿ ಬಟ್ಟೆಯ ಕೈ ಚೀಲ ತನ್ನಿ ಎಂದು ಕರೆ ನೀಡಲಾಗಿದೆ ಎಂದರು.

 

ಟ್ರಾಫಿಕ್ ಸಮಸ್ಯೆ ಸೇರಿದಂತೆ ಬಂದ ಜನರಿಗೆ ಯಾವುದೇ ತೊಂದರೆ ಆಗದಂತೆ ವ್ಯವಸ್ಥೆ ಕ್ರಮ ತೆಗೆದುಕೊಳ್ಳಲಾಗುವುದು. ಬರುವವರು ಪ್ಲಾಸ್ಟಿಕ್ ಬದಲಾಗಿ ಕೈ ಚೀಲಾ ಹಿಡಿದು ಬರಬೇಕು ಎಂದು ಸಚಿವ ರಾಮಲಿಂಗರೆಡ್ಡಿ ತಿಳಿಸಿದರು.

Key words: Historic- groundnut   -tomorrow-cleanliness- Minister -Ramalingareddy