ಮೈಸೂರು,ಅ,19,2019(www.justkannada.in): ಬಿಜೆಪಿಯವರು ಒಂದೇ ಸುಳ್ಳನ್ನ ಪದೇ ಪದೇ ಹೇಳುತ್ತಾರೆ. ಆಗ ಹಿಟ್ಲರ್ ಅದನ್ನೇ ಮಾಡಿದ್ದ. ಈಗ ಬಿಜೆಪಿಯವರು ಮಾಡುತ್ತಿದ್ದಾರೆ. ಬಿಜೆಪಿಯವರಿಗೂ ಹಿಟ್ಲರ್ ಗೂ ವ್ಯತ್ಯಾಸವಿಲ್ಲ ಎಂದು ಮಾಜಿ ಸಿಎಂ ಸಿದ್ಧರಾಮಯ್ಯ ಲೇವಡಿ ಮಾಡಿದರು.
ಮೈಸೂರಿನಲ್ಲಿ ಇಂದು ಮಾತನಾಡಿದ ಮಾಜಿ ಸಿಎಂ ಸಿದ್ಧರಾಮಯ್ಯ, ಬಿಜೆಪಿಯ ದುರಾಡಳಿತವನ್ನ ಮನೆ ಮನೆಗೆ ತಲುಪಿಸಬೇಕು. 2018ರಲ್ಲಿ ಸರ್ಕಾರದ ವೈಪಲ್ಯದಿಂದ ಸೋಲಾಗಲಿಲ್ಲ. ಬಿಜೆಪಿಯವರ ಅಪಪ್ರಚಾರದಿಂದ ಸೋಲಾಯಿತು. ಕೇವಲ ಹಣದಿಂದ ಚುನಾವಣೆ ಗೆಲ್ಲಲು ಸಾಧ್ಯವಿಲ್ಲ. ಮಂಡ್ಯದಲ್ಲಿ ಸುಮಲತಾ ದುಡ್ಡಿನಿಂದ ಗೆದ್ದಿಲ್ಲ. ಹೀಗಾಗಿ ಜನರ ತೀರ್ಪಿನ ಮುಂದೆ ದುಡ್ಡಿನ ಆಟ ನಡೆಯಲ್ಲ. ಉಪಚುನಾವಣೆಯಲ್ಲಿ ಕಾಂಗ್ರೆಸ್ ಗೆಲ್ಲಬೇಕು ಎಂದು ತಿಳಿಸಿದರು.
ಹಸಿವು ಮತ್ತು ನಿರುದ್ಯೋಗ ಮೋದಿ ಅವರ ಕೊಡುಗೆ..
ಇದೇ ವೇಳೆ ಪ್ರಧಾನಿ ಮೋದಿ ವಿರುದ್ದ ವಾಗ್ದಾಳಿ ನಡೆಸಿದ ಸಿದ್ಧರಾಮಯ್ಯ, ಮೋದಿ ಪ್ರಕಾರ ಆರ್ಥಿಕ ಸ್ಥಿತಿ 5ಕ್ಕೆ ಕುಸಿದಿದೆ. ಆದರೆ ವಾಸ್ತವವಾಗಿ 3.5ಕ್ಕೆ ಆರ್ಥಿಕ ಸ್ಥಿತಿ ಕುಸಿದಿದೆ. ದೇಶದ ಆರ್ಥಿಕತೆ ಇಷ್ಟು ಮಟ್ಟಕ್ಕೆ ಕುಸಿದಿರಲಿಲ್ಲ. ಅಂತರಾಷ್ಟ್ರೀಯ ಮಟ್ಟದಲ್ಲಿ ಹಸಿವು ಹೆಚ್ಚಾಗಿರುವ ದೇಶಗಳಲ್ಲಿ ಭಾರತ 102ನೇ ಸ್ಥಾನದಲ್ಲಿದೆ. ಆದರೂ ಸಮೃದ್ಧಿಯಾಗಿದೆ ಎಂದು ಹೇಳುತ್ತಾರೆ. ಹಸಿವು ನಿರುದ್ಯೋಗ ಪ್ರಧಾನಿ ಮೋದಿ ಅವರು ದೇಶಕ್ಕೆ ಕೊಟ್ಟ ಕೊಡುಗೆ ಎಂದು ಕಿಡಿಕಾರಿದರು.
ಆರ್ ಎಸ್ ಎಸ್ ನವರು ಏನಾದ್ರೂ ಸಗಣಿ ಎತ್ತಿ ಬೆರಣಿ ತಟ್ಟಿದ್ರಾ..?
ಇದೇ ವೇಳೆ ಆರ್ ಎಸ್ ಎಸ್ ವಿರುದ್ದ ವಾಗ್ದಾಳಿ ನಡೆಸಿದ ಸಿದ್ಧರಾಮಯ್ಯ, ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಗೋ ರಕ್ಷಣೆ ಹೆಸರಿನಲ್ಲಿ ಗುಂಪು ಹತ್ಯೆಗಳು ಹೆಚ್ಚಾಗುತ್ತಿದೆ. ವರ್ಷದಲ್ಲಿ ನಾವು ಎರಡು ಬಾರಿ ಗೋವುಗಳನ್ನ ಪೂಜೆ ಮಾಡುತ್ತೇವೆ. ತಳ ಸಮುದಾಯದವರು ಗೋವುಗಳನ್ನ ರಕ್ಷಣೆ ಮಾಡುತ್ತಾರೆ. ಆರ್ ಎಸ್ ಎಸ್ ನವರೇನು ಸಗಣಿ ಎತ್ತಿ ಬೆರಣಿ ತಟ್ಟಿದ್ರಾ..? ಇವರೆಲ್ಲಾ ಗೋವು ರಕ್ಷಣೆ ಮಾಡ್ತಾರೆ ಎಂದು ಸಿದ್ಧರಾಮಯ್ಯ ವ್ಯಂಗ್ಯವಾಡಿದರು.
Key words: Hitler – BJP-Modi- contribution – hunger – unemployment-Siddaramaiah -Mysore.