ಚಾಮರಾಜನಗರ, ಅಕ್ಟೋಬರ್,29,2024 (www.justkannada.in): ತಮಿಳುನಾಡಿನ ಪೋಲಿಸರ ದೌರ್ಜನ್ಯ ಖಂಡಿಸಿ ಕರ್ನಾಟಕ ಮತ್ತು ತಮಿಳುನಾಡು ಬಾರ್ಡರ್ ನಲ್ಲಿರುವ ಹೊಗೆನಕಲ್ ಫಾಲ್ಸ್ ನಲ್ಲಿ ಕನ್ನಡಿಗರು ತೆಪ್ಪ ಸಂಚಾರವನ್ನೇ ಸ್ಥಗಿತಗೊಳಿಸಿದ್ದಾರೆ.
ಕಳೆದ 50 ವರ್ಷಗಳಿಂದಲೂ ತೆಪ್ಪ ಓಡಿಸಿಕೊಂಡು ಜೀವನ ಮಾಡುವ ಕನ್ನಡಿಗರಿಗೆ ನೆರೆ ರಾಜ್ಯ ತಮಿಳುನಾಡಿನ ಪೋಲಿಸರು ಕಿರುಕುಳ ನೀಡುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಹನೂರು ತಾಲ್ಲೂಕಿನ ಮಲೆ ಮಹದೇಶ್ವರ ಬೆಟ್ಡದ ಪೂರ್ವ ಭಾಗದಲ್ಲಿರುವ ಹೊಗೆನಕಲ್ ಫಾಲ್ಸ್ ಬಳಿ ಇರುವ ಮಾರುಕೊಟ್ಟಾಯ್ ನಿವಾಸಿಗಳು ಪ್ರತಿಭಟನೆ ನಡೆಸಿ ಪೊಲೀಸರ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ.
ಸ್ಥಳೀಯ 300 ಕ್ಕೂ ಹೆಚ್ಚು ಕನ್ನಡಿಗರು ತೆಪ್ಪ ಓಡಿಸಿ ಜೀವನ ಮಾಡುತ್ತಿದ್ದು, ನ್ಯಾಯ ಕೂಡಿಸುವವರೆಗೆ ತೆಪ್ಪವನ್ನೇ ಓಡಿಸಲ್ಲ ಎಂದು ಸ್ಥಗಿತಗೊಳಿಸಿದ್ದಾರೆ. ಸ್ಥಳೀಯ ಜಿಲ್ಲಾಡಳಿತ ಮತ್ತು ತಮಿಳುನಾಡು ಪೋಲಿಸರ ನಡುವೆ ಮಾತುಕತೆ ಮೂಲಕ ಸಮಸ್ಯೆ ಇತ್ಯರ್ಥ ಮಾಡುವ ತನಕ ತೆಪ್ಪ ಸಂಚಾರ ಸ್ಥಗಿತ ಮಾಡುತ್ತೇವೆ. ನಮಗೆ ನ್ಯಾಯ ಕೊಡಿಸಿ ಎಂದು ಗಡಿನಾಡ ಕನ್ನಡಿಗರು ಅಂಗಲಾಚಿದ್ದಾರೆ.
ತೆಪ್ಪ ಸಂಚಾರ ಸ್ಥಗಿತ ಹಿನ್ನೆಲೆಯಲ್ಲಿ ಕರ್ನಾಟಕದ ಕಡೆಯಿಂದ ಹೊಗೆನಕಲ್ ಫಾಲ್ಸ್ ವೀಕ್ಷಣೆಗೆ ಬರುವ ಪ್ರವಾಸಿಗರಿಗೆ ತೆಪ್ಪ ಸಂಚಾರ ಸದ್ದಕ್ಕಿಲ್ಲ.
Key words: Hogenakkal Falls, Kannadiga, stopped, rafting