ಬೆಂಗಳೂರು, ಜುಲೈ ೧೨, ೨೦೨೧ (www.justkannada.in): ಮನೆಯ ಕಾಲಿಂಗ್ ಬೆಲ್ ಕೇಳಿ ತನ್ನ ಪತಿ ಮನೆಗೆ ಹಿಂದಿರುಗಿದರು ಎಂದುಕೊAಡು ಬಾಗಿಲು ತೆಗೆದ ಗೃಹಿಣಿಯೊಬ್ಬರಿಗೆ ಬಾಗಿಲ ಬಳಿ ನವಜಾತ ಗಂಡು ಶಿಶುವನ್ನು ಕಂಡು ಹೌಹಾರಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ!
ಮುಕ್ತಾ ಬಾಯಿ ಎಂಬ ಗೃಹಿಣಿ ಜುಲೈ ೮ರಂದು ಬೆಳಿಗ್ಗೆ ಸುಮಾರು ೬ ಗಂಟೆಯ ಹೊತ್ತಿಗೆ ಮನೆಯ ಕಾಲಿಂಗ್ ಬೆಲೆ ಕೇಳಿ ತನ್ನ ಪತಿ ಭೀಮ್ರಾವ್, ೬೩, ಕೆಲಸ ಮುಗಿಸಿಕೊಂಡು ಮನೆಗೆ ಹಿಂದಿರುಗಿದರು ಎಂದು ಬಾಗಿಲು ತೆಗೆದರು. ಭೀಮ್ರಾವ್ ಖಾಸಗಿ ಕಂಪನಿಯೊAದರಲ್ಲಿ ಭದ್ರತಾ ಸಿಬ್ಬಂದಿಯಾಗಿ ಕೆಲಸ ನಿರ್ವಹಿಸುತ್ತಿದ್ದು, ಸಾಮಾನ್ಯವಾಗಿ ರಾತ್ರಿ ಪಾಳಿ ಮುಗಿಸಿ ಬೆಳಿಗ್ಗೆ ಮನೆಗೆ ಹಿಂದಿರುಗುತ್ತಾರೆ. ಈ ಕುಟುಂಬ ಪಶ್ಚಿಮ ಬೆಂಗಳೂರಿನ ಮಲ್ಲತ್ತಹಳ್ಳಿಯ ಹೊಸ ಎನ್ಜಿಇಎಫ್ ಬಡಾವಣೆಯಲ್ಲಿ ವಾಸವಿದೆ.
ಮುಕ್ತಾ ಬಾಯಿ ಮನೆ ಕಾಲಿಂಗ್ ಬೆಲ್ ಸದ್ದು ಕೇಳಿ ಎಚ್ಚರಗೊಂಡು ಸರಸರನೆ ಬಾಗಿಲು ತೆಗೆಯಲು ಆಗಮಿಸಿದರಂತೆ. ಆದರೆ ಮನೆ ಬಾಗಿಲು ತೆಗೆದು ನೋಡಿದರೆ ಆಕೆಯ ಪತಿ ಇರಲಿಲ್ಲ. ಕಾಲಿಂಗ್ ಬೆಲ್ ಯಾರು ಒತ್ತಿದರು ಎಂದು ನೋಡಲು ಆಕೆ ಹೊರಗೆ ಬಂದು ನೋಡಿದ್ದಾರೆ. ಅಲ್ಲಿ ನವಜಾತ ಶಿಶು ಇರುವುದನ್ನು ಕಂಡು ಆಶ್ಚರ್ಯಗೊಂಡಿದ್ದಾರೆ.
ಆ ಶಿಶು ಅಲ್ಲಿಗೆ ಹೇಗೆ ಬಂತು ಎಂದು ತಿಳಿಯದೆ ಮುಕ್ತಾಬಾಯಿ ಮತ್ತು ಆಕೆಯ ಮಗ ಸುತ್ತಮುತ್ತಲೆಲ್ಲಾ ನೋಡಿದ್ದಾರೆ. ಆದರೆ ಅಲ್ಲಿ ಯಾರೂ ಕಂಡು ಬಂದಿಲ್ಲ. ಕೂಡಲೇ ಮುಕ್ತಾ ಬಾಯಿ ಆಕೆಯ ಪತಿಗೆ ದೂರವಾಣಿ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ಜೊತೆಗೆ ಮನೆಯ ಮಾಲೀಕರಿಗೂ ತಿಳಿಸಿದ್ದಾರೆ. ವಿಷಯ ಪೊಲೀಸರಿಗೆ ಮುಟ್ಟಿತು. ಗಸ್ತಿನಲ್ಲಿದ್ದಂತಹ ಜ್ಞಾನಭಾರತಿ ಪೊಲೀಸ್ ಠಾಣೆಯ ಸಿಬ್ಬಂದಿ ಮನೆಯ ಬಳಿ ಆಗಮಿಸಿ ಭೀಮ್ರಾವ್ ಅವರ ಮಗ ಮತ್ತು ಇತರರನ್ನು ವಿಚಾರಿಸಿದ್ದಾರೆ. ಆದರೆ ಅದು ಯಾರ ಮಗು ಎನ್ನುವುದು ಯಾರಿಗೂ ಗೊತ್ತಾಗಲಿಲ್ಲ ಮತ್ತು ಅಲ್ಲಿಗೆ ಹೇಗೆ ಬಂತು ಎಂದು ಯಾರಿಗೂ ಗೊತ್ತಾಗಲಿಲ್ಲ.
ಈ ಕುರಿತು ಮಾತನಾಡಿದ ಭೀಮ್ರಾವ್, “ನಮ್ಮ ಮನೆಗೆ ಎರಡು ಬಾಗಿಲುಗಳಿವೆ – ಒಂದು ಮರದ ಬಾಗಿಲು ಹಾಗೂ ಮತ್ತೊಂದು ಕಬ್ಬಿಣದ ಗ್ರಿಲ್ ಬಾಗಿಲು. ಈ ಶಿಶುವನ್ನು ಇಲ್ಲಿ ಬಿಟ್ಟು ಹೋಗಿರುವವರು ಬಹುಶಃ ಮನೆಗೆ ಎರಡು ಬಾಗಿಲುಗಳಿರುವುದನ್ನು ಗಮನಿಸಿ, ನಂತರ ಮನೆಯ ಮೆಟ್ಟಿಲ ಮುಂದೆ ಬಿಟ್ಟು ಹೋಗಿರಬಹುದು,” ಎಂದಿದ್ದಾರೆ.
ಪೊಲೀಸ್ ಅಧಿಕಾರಿ ಪ್ರಕಾರ ಅದು ಸುಮಾರು ಒಂದು ತಿಂಗಳ ಶಿಶುವಾಗಿದ್ದು, ಬಹುಶಃ ಅನೈತಿಕ ಸಂಬAಧದಿAದ ಹುಟ್ಟಿರಬಹುದು ಎಂದು ಶಂಕೆ ವ್ಯಕ್ತಪಡಿಸಿದ್ದಾರೆ. “ಶಿಶು ಆರೋಗ್ಯವಾಗಿದೆ. ಸಾಮಾನ್ಯವಾಗಿ ಆರೋಗ್ಯವಾಗಿರುವ ಗಂಡು ಮಗುವನ್ನು ಯಾರೂ ದೂರ ಮಾಡುವುದಿಲ್ಲ,” ಎನ್ನುತ್ತಾರೆ ಆ ಪೊಲೀಸ್ ಅಧಿಕಾರಿ.
“ಈ ಶಿಶುವನ್ನು ದೂರ ಮಾಡಲು ಅದರ ಪೋಷಕರು ಬಹುಶಃ ಕೋವಿಡ್ ನಿಯಮಗಳು ಸಂಪೂರ್ಣವಾಗಿ ಮುಗಿಯಲಿ ಎಂದು ಕಾದು ಈಗ ಈ ರೀತಿ ಮಾಡಿರಬಹುದು. ಏಕೆಂದರೆ, ಪೊಲೀಸರು ಲಾಕ್ಡೌನ್ ಸಮಯದಲ್ಲಿ ಎಲ್ಲಾ ರಸ್ತೆಗಳಲ್ಲಿಯೂ ಅತ್ಯಂತ ಎಚ್ಚರಿಕೆಯಿಂದ ಗಸ್ತು ತಿರುಗುತ್ತಿದ್ದರು,” ಎನ್ನುತ್ತಾರೆ ಪೊಲೀಸರು.
ಕಳೆದ ಮೂರು ವಾರಗಳಲ್ಲಿ ಈ ರೀತಿಯ ಎರಡನೆಯ ಘಟನೆಯಂತೆ! ಜೂನ್ ೨೩ರಂದು ಬೆಂಗಳೂರಿನ ಹೆಚ್ಆರ್ಬಿಆರ್ ಬಡಾವಣೆಯ ತೋಪೊಂದರಲ್ಲಿ ವಿಕಲಚೇತನ ಗಂಡು ಶಿಶುವೊಂದನ್ನು ಬಿಟ್ಟು ಹೋಗಿದ್ದ ಘಟನೆ ವರದಿಯಾಗಿತ್ತು.
ಸುದ್ದಿ ಮೂಲ: ಡೆಕ್ಕನ್ ಹೆರಾಲ್ಡ್
key words: Home- doorbell- found – husband -women -newborn