ಕರ್ನಾಟಕ ಭೂ ಕಂದಾಯ ಕಾಯಿದೆಯಡಿ ಆದಾಯದ ಗರಿಷ್ಠ ಮಿತಿ ಹೆಚ್ಚಳಕ್ಕೆ ಗೃಹ ಸಚಿವ ಆರಗ ಜ್ಞಾನೇಂದ್ರ ಮನವಿ

ಬೆಂಗಳೂರು,ಸೆಪ್ಟಂಬರ್,4,2021(www.justkannada.in): ಕರ್ನಾಟಕ ಭೂ ಕಂದಾಯ ಕಾಯಿದೆ-೧೯೬೪ 94-C ಗೆ ಪ್ರಸ್ತುತ ಇರುವ ಆದಾಯದ ಗರಿಷ್ಟ ಮಿತಿಯನ್ನು ರೂ 1,20000 ಕ್ಕೆ ಹೆಚ್ಚಿಸುವಂತೆ ಗೃಹ ಸಚಿವ ಆರಗ ಜ್ಞಾನೇಂದ್ರ ಮನವಿ ಮಾಡಿದ್ದಾರೆ.

ಕರ್ನಾಟಕ ಭೂ ಕಂದಾಯ ಕಾಯಿದೆ 94-C ಅಡಿಯಲ್ಲಿ ಸಾರ್ವಜನಿಕರು ಭೂ ಮಂಜೂರಾತಿ ಫಲಾನುಭವಿಗಳಾಗಿ ಅರ್ಹತೆ ಗಳಿಸಲು ಪ್ರಸ್ತುತ ಇರುವ ವಾರ್ಷಿಕ ಗರಿಷ್ಠ  ಆದಾಯದ ಮಿತಿಯನ್ನು  ರೂ. 30000 ದಿಂದ ವಾರ್ಷಿಕ ಗರಿಷ್ಟ ರೂ.1,20000 ಕ್ಕೆ ಮಿತಿಗೆ ಹೆಚ್ಚಿಸಬೇಕೆಂದು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಕಂದಾಯ ಸಚಿವ ಆರ್ ಅಶೋಕ್ ಅವರಿಗೆ ಗೃಹ ಸಚಿವ ಅರಗ ಜ್ಞಾನೇಂದ್ರ ಮನವಿ ಸಲ್ಲಿಸಿದ್ದಾರೆ.

ಈ ಸಂಬಂಧ ಮುಖ್ಯಮಂತ್ರಿಗಳು ಹಾಗೂ ಕಂದಾಯ ಸಚಿವರಿಗೆ ಪತ್ರ ಬರೆದಿರುವ ಸಚಿವ ಅರಗ ಜ್ಞಾನೇಂದ್ರ, ಗರಿಷ್ಟ ಆದಾಯದ  ಮಿತಿಯನ್ನು ಹೆಚ್ಚಿಸಲು ಅನುಕೂಲವಾಗುವಂತೆ ಕರ್ನಾಟಕ ಭೂ ಕಂದಾಯ ಕಾಯಿದೆ-೧೯೬೪ (ಕರ್ನಾಟಕ ಕಾಯಿದೆ-೧೨ ೧೯೬೪) 94-C ಗೆ ತಿದ್ದುಪಡಿ ತಂದು ಗರಿಷ್ಟ ಮಿತಿಯನ್ನು ರೂ 1,20000/- ಕ್ಕೆ ಪರಿಷ್ಕರಿಸಿ ಆದೇಶ ಹೊರಡಿಸಲು ಕೋರಿದ್ದಾರೆ.

ಆಹಾರ ಇಲಾಖೆಯಲ್ಲಿ ಬಿ ಪಿ ಎಲ್ ಕಾರ್ಡ್ ಫಲಾನುಭವಿಗಳಾಗಲು ಪ್ರಸ್ತುತ ಇರುವ ಆದಾಯದ ಮಿತಿ ರೂ  1,20000  ಇರುವುದನ್ನು ಮುಖ್ಯಮಂತ್ರಿ ಹಾಗೂ ಕಂದಾಯ ಸಚಿವರ ಗಮನಕ್ಕೆ  ತಂದಿದ್ದಾರೆ.

ENGLISH SUMMARY…

Home Minister Araga Jnanendra appeals to increase maximum limit of the Karnataka Land Revenue Act
Bengaluru, September 4, 2021 (www.justkannada.in): Home Minister Araga Jnanendra has appealed to increase the present maximum limit of the 94-C of the Karnataka Land Revenue Act, 1964, to Rs.1,20,000.
Home Minister Araga Jnanendra has written a letter to Chief Minister Basavaraj Bommai, and Revenue Minister R. Ashok, demanding to increase the annual maximum eligible income limit of the beneficiaries who apply for land approval, under 94-C of the Karnataka Land Revenue Act from the present Rs.30,000 to Rs.1,20,000.
He has brought the present income limit of Rs. 1,20,000 to become BPL card beneficiaries, to the notice of the Chief Minister and the Revenue Minister.
Keywords: Karnataka Land Revenue Act/ limit/ increase/ appeal/ Home Minister/ Araga Jnanendra

Key words: Home Minister- Aargha Jnanendra -appeals – maximum -revenue -increase -under -Karnataka Land Revenue Act.