ಪಾದಯಾತ್ರೆ ಕರೋನಾ ಯಾತ್ರೆ ಆಗುವುದು ಬೇಡ: ‘ಕೈ’ ನಾಯಕರಿಗೆ ಗೃಹ ಸಚಿವ ಆರಗ ಜ್ಞಾನೇಂದ್ರ ಮನವಿ

ಬೆಂಗಳೂರು, ಜನವರಿ,12,2022(www.justkannada.in):  ಪಾದಯಾತ್ರೆ ಕರೋನಾ ಯಾತ್ರೆ ಆಗುವುದು ಬೇಡ, ದಯವಿಟ್ಟು ನಿಮ್ಮ ರಾಜಕೀಯ ಉದ್ದೇಶದ ನಡಿಗೆ ಕಾರ್ಯಕ್ರಮವನ್ನು ಕೈಬಿಡಿ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಕಾಂಗ್ರೆಸ್ ನಾಯಕರಿಗೆ ಕರೆ ನೀಡಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಗೃಹ ಸಚಿವ ಅರಗ ಜ್ಞಾನೇಂದ್ರ, ಆರಂಭದಲ್ಲಿ, ಇವರು, ಪಾದಯಾತ್ರೆ ಆರಂಭಿಸಿದಾಗ, ನಮಗೆ ಸಾರ್ವಜನಿಕರ ಆರೋಗ್ಯದ ಮೇಲೆ ಬೀರಬಹುದಾದ ಅಡ್ಡ.    ಪರಿಣಾಮದ ಬಗ್ಗೆ, ಆತಂಕ ಇತ್ತು. ಆ ಕಾರಣದಿಂದ ನಾವು ಕಾರ್ಯಕ್ರಮವನ್ನು ಮುಂದಕ್ಕೆ ಹಾಕಿಕೊಳ್ಳಿ ಎಂದು, ಕಾಂಗ್ರೆಸ್ ನಾಯಕರಿಗೆ ಮನವಿ ಮಾಡಿದ್ದೆವು.

ಈಗ ನಮ್ಮ ಆತಂಕ ನಿಜವಾಗುತ್ತಿದೆ, ಕರೋನಾ ಬಗ್ಗೆ ಕಾಂಗ್ರೆಸ್ ನಾಯಕರು ಅಪ ಪ್ರಚಾರ ಮಾಡುತ್ತಿರುವುದಲ್ಲದೆ  ವಿತಂಡ ವಾದ ಮಂಡಿಸುತ್ತಿದ್ದಾರೆ. ಪಾದಯಾತ್ರೆಯಲ್ಲಿ ತೊಡಗಿಕೊಂಡಿದ್ದ ಕೆಲವು ನಾಯಕರಿಗೆ ಸೋಂಕು ತಗುಲಿದ್ದು, ಆಸ್ಪತ್ರೆ ಸೇರಿದ್ದಾರೆ. ಆ ಕಾರಣದಿಂದ ಮತ್ತೊಮ್ಮೆ ಕಾಂಗ್ರೆಸ್ ನಾಯಕರಿಗೆ, ಮನವಿ ಮಾಡುತ್ತೇನೆ, ನಿಮ್ಮ ನಿರ್ಧಾರವನ್ನು ಸಾರ್ವಜನಿಕರ ಆರೋಗ್ಯ ರಕ್ಷಣೆಯ ದೃಷ್ಟಿಯಿಂದ, ಪಾದಯಾತ್ರೆ ಕಾರ್ಯಕ್ರಮವನ್ನು, ಕೈಬಿಡಿ ಎಂದು ಮನವಿ ಮಾಡಿದರು.

ಕರೋನಾ, ಅಪಾಯಕಾರಿ ರೀತಿಯಲ್ಲಿ ಹರಡುತ್ತಿದೆ, ಸಮಾಜದ ಎಲ್ಲಾ ಜನರೂ, ವಿಶೇಷವಾಗಿ, ಎಲ್ಲಾ ಕ್ಷೇತ್ರದ  ಶ್ರಮಿಕ ವರ್ಗದವರೂ ಆತಂಕಗೊಂಡಿದ್ದಾರೆ. ಈಗಾಗಲೇ ನೀವು ಜನತೆಯ ಆಕ್ರೋಶಕ್ಕೆ ಗುರಿಯಾಗಿದ್ದು ಅವರ ಕ್ಷಮೆ ಕೇಳಬೇಕಾಗಿದೆ, ಎಂದು ಸಚಿವ ಅರಗ ಜ್ಞಾನೇಂದ್ರ, ತಿಳಿಸಿದ್ದಾರೆ.

Key words: Home Minister- Aaruga Jnanendra –congress- leaders

ENGLISH SUMMARY…

Home Minister Araga Jnanendra appeals to Cong. leaders to withdraw padayatra
Bengaluru, January 12, 2022 (www.justkannada.in): “Please don’t make the padayatra a corona yatra, withdraw the padayatra that you are taking out for your political gains immediately,” Home Minister Araga Jnanendra appealed to the Congress leaders.
In a press statement, the Home Minister has informed that they were worried about the health issues that the participants may face during this padayatra. “That is why we appealed to the Congress leaders to postpone it. Now we are really worried, the Congress leaders are spreading false news about Corona and are arguing meaninglessly. Several leaders who participated in the Padayatra have tested Corona positive and have been hospitalized. That is why I again appeal to the Congress leaders to stop the padayatra keeping in mind the health of the public.”
Keywords: Corona/ Padayatra/ Congress/ Home Minister Araga Jnanendra/