ಶಿವಮೊಗ್ಗ,ಜನವರಿ,16,2021(www.justkannada.in): ನಾವು ವಿಶ್ವದಲ್ಲೇ ಅತ್ಯತ್ತಮವಾಗಿ ಕೊರೋನಾ ನಿಭಾಯಿಸಿದ್ದೇವೆ. ದೇಶದ ಜನತೆಗೆ ಮೋದಿ ನಾಯಕತ್ವದ ಬಗ್ಗೆ ಗೊತ್ತಿದೆ. ಕೊರೋನಾ ವಿರುದ್ಧ ಸೆಣೆಸಾಡುವಲ್ಲಿ ಪ್ರಧಾನಿ ಮೋದಿ ಯಶಸ್ವಿಯಾಗಿದ್ದಾರೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಬಣ್ಣಿಸಿದರು.
ಶಿವಮೊಗ್ಗ ಜಿಲ್ಲೆ ಭದ್ರಾವತಿ ಹೊರವಲಯದ ಬುಳ್ಳಾಪುರ ಬಳಿ ನಿರ್ಮಾಣವಾಗುತ್ತಿರುವ ಆರ್ ಪಿಎಫ್ ಘಟಕಕ್ಕೆ ಅಮಿತ್ ಶಿಲನ್ಯಾಸ ನೆರವೇರಿಸಿದರು. ಬಳಿಕ ಮಾತನಾಡಿದ ಅವರು, ಶಿಲನ್ಯಾಸ ಮಾಡಿದ್ಧು ನನಗೆ ಸಂತಸ ತಂದಿದೆ. ದಕ್ಷಿಣ ಭಾರತದ ಶಾಂತಿ ಸ್ಥಾಪನೆಗೆ ಈ ಬೆಟಾಲಿಯನ್ ಸಹಾಯಕವಾಗಲಿದೆ. ನಾನು ಗೃಹ ಸಚಿವನಾಗಿ ಎರಡು ಮೂರು ತಿಂಗಳಲ್ಲೇ ಬಿಎಸ್ ವೈ ರಿಂದ ಪತ್ರ ಬಂದಿತ್ತು. ಆರ್ ಎಎಫ್ ನಿರ್ಮಾಣಕ್ಕೆ ರಾಜ್ಯ ಸರ್ಕಾರದಿಂದ ಭೂಮಿ ನೀಡುವುದಾಗಿ ಪತ್ರ ಬಂದಿತ್ತು. ಆರ್ ಎಎಫ್ ಘಟಕ ನಿರ್ಮಾಣಕ್ಕೆ ಭೂಮಿ ಕೊಡುವುದಾಗಿ ಪತ್ರ ಬರೆದಿದ್ದರು. 230 ಕೋಟಿ ವೆಚ್ಚದಲ್ಲಿ ಆರ್ ಎಎಫ್ ಘಟಕ ನಿರ್ಮಾಣ ಮಾಡಲಾಗುತ್ತಿದೆ ಭೂಮಿ ನೀಡಿದ್ದಕ್ಕೆ ಸರ್ಕಾರಕ್ಕೆ ಧನ್ಯವಾದ ಅರ್ಪಿಸುವುದಾಗಿ ತಿಳಿಸಿದರು.
ಇಂದೇ ಕೊರೋನಾ ಲಸಿಕೆ ಅಭಿಯಾನ ಆರಂಭವಾದ ದಿನ. ಕೊರೋನಾ ಪೀಡಿತರು ಹೆಚ್ಚಿನ ಸಂಖ್ಯೆಯಲ್ಲಿ ಗುಣಮುಖರಾಗುತ್ತಿದ್ದಾರೆ. ಪ್ರಧಾನಿ ಮೋದಿ ನೇತೃತ್ವದಲ್ಲಿ ಕೊರೋನ ನಿಯಂತ್ರಣ ಹೋರಾಟದಲ್ಲಿ ಭಾರತ ಯಶಸ್ಸು ಕಾಣುತ್ತಿದೆ. ವಿಶ್ವದಲ್ಲೇ ಅತ್ಯತ್ತಮವಾಗಿ ಕೊರೋನಾ ನಿಭಾಯಿಸಿದ್ದೇವೆ. ದೇಶದ ಜನತೆಗೆ ಮೋದಿ ನಾಯಕತ್ವದ ಬಗ್ಗೆ ಗೊತ್ತಿದೆ. ಕೊರೋನಾ ವಿರುದ್ಧ ಸೆಣೆಸಾಡುವಲ್ಲಿ ಮೋದಿ ಯಶಸ್ವಿಯಾಗಿದ್ದಾರೆ. ಪ್ರಧಾನಿ ಮೋದಿ ದಿವ್ಯದೃಷ್ಠಿಯಲ್ಲಿ ಯಶಸ್ವಿಯಾಗಿದ್ದೇವೆ ಎಂದು ಪ್ರಧಾನಿ ಮೋದಿ ಕಾರ್ಯವನ್ನ ಅಮಿತ್ ಶ್ಲಾಘಿಸಿದರು.
ಇನ್ನು ಸಿಆರ್ ಪಿಎಫ್ ನಮ್ಮ ದೇಶದ ಶಕ್ತಿ. ಸಿಆರ್ ಪಿಎಫ್ ದೇಶದ ಮೂಲೆ ಮೂಲೆಗೂ ಹೋಗುತ್ತದೆ. ಅಹಿತಕರ ಘಟನೆ ನಡೆದ್ರೆ ,ಮೊದಲು ಹೋಗುತ್ತೆ. ಪೊಲೀಸರು ಕಠಿಣ ಪರಿಸಥಿತಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಸರ್ಕಾರಿ ಕೆಲಸಗಳಲ್ಲಿ ಪೊಲೀಸ್ ಕೆಲಸ ಕಠಿಣ. ಪೊಲೀಸರನ್ನ ನೋಡುವ ದೃಷ್ಠೀ ಬದಲಾಗಬೇಕು. ದೆಹಲಿಗೆ ಹೋದಾಗ ರಾಷ್ಟ್ರೀಯ ಪೊಲೀಸ್ ಸ್ಮಾರಕಕ್ಕೆ ಹೋಗಿ ಎಂದು ನೆರೆದಿದ್ದ ಜನರಿಗೆ ಅಮಿತ್ ಶಾ ಹೇಳಿದರು.
Key words: Home Minister- Amit Shah- praises- Prime Minister Modi