ಮಂಗಳೂರು,ಆಗಸ್ಟ್,20,2021(www.justkannada.in): ಯಾದಗಿರಿ ಯರಗೊಳ ಗ್ರಾಮದಲ್ಲಿ ಕೇಂದ್ರ ಸಚಿವ ಭಗವಂತ ಖೂಬಾ ಅವರನ್ನ ಸ್ವಾಗತಿಸುವ ವೇಳೆ ಗುಂಡು ಹಾರಿಸಿದ ಘಟನೆಯನ್ನ ಗೃಹ ಸಚಿವ ಅರಗ ಜ್ಞಾನೇಂದ್ರ ಸಮರ್ಥಿಸಿಕೊಂಡಿದ್ದಾರೆ.
ಈ ಕುರಿತು ಮಾಧ್ಯಮಗಳ ಜತೆ ಮಾತನಾಡಿರುವ ಸಚಿವ ಅರಗ ಜ್ಞಾನೇಂದ್ರ, ಗುಂಡು ಹಾರಿಸುವುದು ಆ ಭಾಗದಲ್ಲಿ ವಾಡಿಕೆಯಾಗಿದೆ. ಖುಷಿಯಾಗಿದ್ದಾಗ ಮತ್ತು ದುಃಖದಲ್ಲಿದ್ಧಾಗ ಗುಂಡು ಹಾರಿಸುತ್ತಾರೆ. ಹೀಗಾಗಿ ಕೇಂದ್ರಸಚಿವರು ಬಂದಾಗ ಖುಷಿಯಲ್ಲಿ ಗುಂಡು ಹಾರಿಸಿದ್ದಾರೆ ಎಂದಿದ್ದಾರೆ.
ಇನ್ನು ಪ್ರಕರಣ ಸಂಬಂಧ ಪೊಲೀಸರು ಕ್ರಮ ಕೈಗೊಳ್ಳುತ್ತಾರೆ. ಕರ್ತವ್ಯಲೋಪವೆಸಗಿದ ಪೊಲೀಸರ ವಿರುದ್ದವೂ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಸಚಿವ ಅರಗ ಜ್ಞಾನೇಂದ್ರ ತಿಳಿಸಿದರು.
Key words: Home Minister -Arag Jaganendra -defended – firing -welcome – Union Cabinet.