ಶಿವಮೊಗ್ಗ,ಆಗಸ್ಟ್,21,2021(www.justkannada.in): ಬೆಂಗಳೂರಿನಲ್ಲಿ ರೌಡಿಸಂ ನಿಗ್ರಹಿಸಲು ಹಾಗೂ ರಿಯಲ್ ಎಸ್ಟೇಟ್, ಡ್ರಗ್ಸ್ ಗೆ ಕಡಿವಾಣ ಹಾಕಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದು ಗೃಹಸಚಿವ ಅರಗ ಜ್ಞಾನೇಂದ್ರ ತಿಳಿಸಿದರು.
ಶಿವಮೊಗ್ಗದಲ್ಲಿ ಇಂದು ಮಾತನಾಡಿದ ಗೃಹ ಸಚಿವ ಆರಗ ಜ್ಞಾನೇಂದ್ರ, ಸೈಬರ್ ಕ್ರೈಂ ವಿಭಾಗ ಬಲಪಡಿಸಲು ಇನ್ಫೋಸಿಸ್ ನೆರವು ನೀಡುತ್ತಿದೆ. ಭದ್ರಾವತಿ ಸೇರಿಸಿಕೊಂಡು ಶಿವಮೊಗ್ಗ ಕಮಿಷನರೇಟ್ ಸ್ಥಾಪನೆ ಮಾಡುತ್ತೇವೆ. ಕಮಿಷನರೇಟ್ ಸ್ಥಾಪನೆ ಬಗ್ಗೆ ಸರ್ಕಾರದ ಮಟ್ಟದಲ್ಲಿ ಚಿಂತನೆ ನಡೆದಿದೆ ಎಂದು ತಿಳಿಸಿದರು.
ಆಫ್ಘನ್ನಲ್ಲಿ ಸಿಲುಕಿರುವ ನಾಗರಿಕರ ಬಗ್ಗೆ ಮಾಹಿತಿ ಸಂಗ್ರಹಿಸಲು, ಅವರ ರಕ್ಷಣೆಗಾಗಿ ಐಪಿಎಸ್ ಅಧಿಕಾರಿ ಉಮೇಶ್ ಕುಮಾರ್ ನೇಮಕ ಮಾಡಿದ್ದೇವೆ ಎಂದು ಸಚಿವ ಅರಗ ಜ್ಞಾನೇಂದ್ರ ತಿಳಿಸಿದರು.
Key words: Home Minister- Araga Jnanendra -instructed –rowdyism- real estate – drugs – Bangalore.