ಕಳುವಾಗಿದ್ದ 40 ಕೆ.ಜಿ.ಯಷ್ಟು ಚಿನ್ನಾಭರಣ ಮಾಲೀಕರಿಗೆ ವಾಪಸ್: ಪೊಲೀಸರ ಕಾರ್ಯ ಶ್ಲಾಘಿಸಿದ ಗೃಹ ಸಚಿವ ಅರಗ ಜ್ಞಾನೇಂದ್ರ.

ಬೆಂಗಳೂರು,ಆಗಸ್ಟ್,18,2021(www.justkannada.in): ನನ್ನ ಪೊಲೀಸ್ ಇಲಾಖೆ ನನ್ನ ಹೆಮ್ಮೆ. ಪೊಲೀಸರ ಕೆಲಸ ನೋಡಿ ನನ್ನ ಹೃದಯ ತುಂಬಿ ಬಂದಿದೆ. ಕಾರಣ ಅಷ್ಟೊಂದು ಕೇಸ್​ಗಳನ್ನು ಭೇದಿಸಿದ್ದಾರೆ ಎಂದು ಗೃಹ ಸಚಿವ ಅರಗ ಜ್ಞಾನೇಂದ್ರ ಶ್ಲಾಘಿಸಿದರು.

ಬೆಂಗಳೂರಿನಲ್ಲಿ ಕಳುವಾಗಿದ್ದ 40 ಕೆ.ಜಿ.ಯಷ್ಟು ಚಿನ್ನಾಭರಣವನ್ನು ಮಾಲೀಕರಿಗೆ ಗೃಹ ಸಚಿವ ಆರಗ ಜ್ಞಾನೇಂದ್ರ ವಾಪಸ್ ನೀಡಿದರು. ಬೆಂಗಳೂರಿನಲ್ಲಿ ಪೊಲೀಸರು ವಶಪಡಿಸಿಕೊಂಡಿದ್ದ ಸಾವಿರಾರು ಕೆ.ಜಿ ಗಾಂಜಾ, ಡ್ರಗ್ಸ್​ನ ನಗರ ಪೊಲೀಸರು ಪ್ರದರ್ಶನ ಮಾಡಿದರು. ಜೊತೆಗೆ ರಾಬರಿ, ಕೊಲೆ, ಕಳ್ಳತನ ಕೇಸ್​ನಲ್ಲಿ ವಶಪಡಿಸಿಕೊಂಡಿದ್ದ ಮಾಲುಗಳು ಮತ್ತು ಕೋಟ್ಯಂತರ ಬೆಲೆಯ ಅಂಬರ್ ಗ್ರೀಸ್​ನ ಪ್ರದರ್ಶನ ಮಾಡಿದರು.

 ಈ ವೇಳೆ ಮಾತನಾಡಿ ಪೊಲೀಸರ ಕಾರ್ಯದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಗೃಹ ಸಚಿವ ಅರಗ ಜ್ಞಾನೇಂದ್ರ, ನಾನು ಸೈಬರ್ ಕ್ರೈಂ ಸ್ಟೇಷನ್​ ಗೂ ನಾನು ಭೇಟಿ ಕೊಟ್ಟಿದ್ದೇನೆ. ಸೈಬರ್ ಕ್ರೈಂ ಪ್ರಕರಣವನ್ನು ಭೇದಿಸುವುದು ನೋಡಿದರೆ ಖುಷಿ ಆನಿಸುತ್ತೆ. ಅಂತರಾಷ್ಟ್ರೀಯ ಪೊಲೀಸರು ಸಹ ಬಂದು ತರಬೇತಿ ಪಡೆಯುತ್ತಿದ್ದಾರೆ. 32 ಕೋಟಿ ಮೌಲ್ಯದ ಮಾದಕ ವಸ್ತುಗಳನ್ನು ಇವತ್ತು ಪೊಲೀಸರು ಪ್ರದರ್ಶನ ಮಾಡಿದ್ದಾರೆ. ಕೇಸ್ ಭೇದಿಸುವುದನ್ನು ಸಿನಿಮಾಗಳಲ್ಲಿ ನೋಡುತ್ತಿದ್ದೆವು. ಆದರೆ ಈಗ ಕಣ್ಣ ಮುಂದೆ ನೋಡಿದಂತಾಗಿದೆ ಎಂದು  ಹೇಳಿದರು.

ಅಂಬರ್ ಗ್ರೀಸ್ ಅನ್ನೋದು ನನಗೆ ಗೊತ್ತೇ ಇರಲಿಲ್ಲ. ಅದು ಒಂದು ಕೆ.ಜಿಗೆ ಒಂದು ಕೋಟಿ ಅಂತೆ. ಅದನ್ನು ಕೂಡ ಈಗ ರಿಕವರಿ ಮಾಡಿದ್ದಾರೆ. ಕಳ್ಳತನದಿಂದ ಆ ಸಂಪತ್ತು ಬೇರೆಯವರ ಪಾಲಾಗುತಿತ್ತು. ಅದನ್ನ ಹಿಡಿದು ದೇಶದ ಖಜಾನೆ ತುಂಬುವ ಕೆಲಸ ಮಾಡಿದ್ದಾರೆ. ಕೋಟ್ಯಂತರ ಬೆಲೆ ಬಾಳುವ ಮಾದಕ ವಸ್ತು ಪತ್ತೆ ಹಚ್ಚಿದ್ದಾರೆ. ನೂರಾರು ಕೋಟಿ ವೆಚ್ಚದಲ್ಲಿ ಡ್ರಗ್ಸ್ ಮಾಫಿಯಾ ನಡಿಯುತ್ತಿದೆ. ಡ್ರಗ್ಸ್ ಯುವ ಜನಾಂಗದ ಜೀವನ ಹಾಳು ಮಾಡುತ್ತಿದೆ. ಇದನ್ನ ತಡೆಯುವಲ್ಲಿ ಪೊಲೀಸರ ಕಾರ್ಯ ಮೆಚ್ಚುವಂತದ್ದು ಎಂದು ಎಂದು ಶ್ಲಾಘನೆ ವ್ಯಕ್ತಪಡಿಸಿದರು.

ಅಪ್ರಾಮಾಣಿಕ ಪೊಲೀಸರನ್ನು ಕ್ಷಮಿಸುವ ಪ್ರಶ್ನೆಯೇ ಇಲ್ಲ.

ಪೊಲೀಸರು ಪ್ರಾಮಾಣಿಕರಾಗಿ ಕೆಲಸ ಮಾಡಬೇಕು. ಇಲ್ಲದಿದ್ದರೆ ಸಮಾಜ ಹಾಳಾಗುತ್ತದೆ. ಅಪ್ರಾಮಾಣಿಕ ಪೊಲೀಸರನ್ನು ಕ್ಷಮಿಸುವ ಪ್ರಶ್ನೆಯೇ ಇಲ್ಲ. ಕೊಲೆ ಪ್ರಕರಣಗಳಲ್ಲಿ ಕೆಲ ಪೊಲೀಸರು ಭಾಗಿಯಾಗುತ್ತಾರೆ. ಅಂತಹ ಪೊಲೀಸರನ್ನು ನೋಡಿದರೆ ಅವಮಾನವಾಗುತ್ತದೆ. ಪ್ರಾಮಾಣಿಕ ಪೊಲೀಸರ ಬೆನ್ನು ತಟ್ಟುವ ಕೆಲಸ ಮಾಡುತ್ತೇವೆ. ಅಪ್ರಾಮಾಣಿಕ ಪೊಲೀಸರ ವಿರುದ್ಧ ಮುಲಾಜಿಲ್ಲದೆ ಕ್ರಮ ಕೈಗೊಳ್ಳಲಾಗುತ್ತದೆ. ಅಪರಾಧಿಗಳ ಪರ ನಿಲ್ಲುವಂತಹ ಪೊಲೀಸರ ಪಟ್ಟಿ ಮಾಡಿ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಸೂಚನೆ ನೀಡಿದರು.

ENGLISH SUMMARY….

Police return about 40 kilo seized stolen ornaments to its owners: Home Minister pats Police work
Bengluru, August 18, 2021 (www.justkannada.in): “My Police Department is my pride. The Police have cracked so many cases, which I feel very proud to mention,” said Home Minister Araga Jnanendra.
The police department has seized about 40 kilos of stolen gold and silver ornaments from culprits, which was distributed to its owners by Home Minister Araga Jnanendra. The police also exhibited thousands of kilos of drugs in Bengaluru, apart from another huge haul including Ambergris worth crores of rupees, which was actually stolen in several cases of robbery and thefts.
Speaking on the occasion, the Home Minister explained that he had also visited the cyber crime cell and felt happy about the functioning of the cell. “Even police from several other countries are trained here. Today our police have exhibited drugs worth more than Rs. 32 crore. We usually used to see all such things in films. But today I am witnessing it live,” he said.
“I wasn’t knowing what Ambergris means. Recently I came to know that the value of one kilo Ambergris is Rs. 1 crore! Our police have recovered that also. Thus they have contributed to the State’s exchequer. The police have been playing a viral active role in recent days in cracking drug peddlers, which is actually spoiling our youth,” he added.
Keywords: Home Minister/ Arag Jnanendra/ Police Department/ appreciates/ 40 kilo ornaments

Key words: Home Minister- Araga jnanendra-praised -work – police.