ಹೆಚ್ ಡಿಕೆ ಬಳಿ ಟನ್ ಗಟ್ಟಲೆ ದಾಖಲೆಗಳಿದ್ದರೆ ಕೊಡಲಿ- ಗೃಹ ಸಚಿವ ಪರಮೇಶ್ವರ್ ವ್ಯಂಗ್ಯ

ಮಂಡ್ಯ,ಏಪ್ರಿಲ್,9,2025 (www.justkannada.in): ರಾಜ್ಯ ಕಾಂಗ್ರೆಸ್ ಸರ್ಕಾರದ ಅಕ್ರಮದ ಬಗ್ಗೆ ಟನ್ ಗಟ್ಟಲೇ ದಾಖಲೆಗಳಿವೆ ಎಂದು ಹೇಳಿಕೆ ನೀಡಿದ್ದ ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿಗೆ ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿರುಗೇಟು ನೀಡಿದ್ದಾರೆ.

ಈ ಕುರಿತು ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಗೃಹ ಸಚಿವ ಡಾ.ಜಿ.ಪರಮೇಶ್ವರ್, ಕುಮಾರಸ್ವಾಮಿ  ಬಳಿ ಟನ್ ಗಟ್ಟಲೆ ದಾಖಲೆಗಳಿದ್ದರೆ ಕೊಡಲಿ. ಕೇಂದ್ರ ಸಚಿವ ಹೆಚ್ ಡಿಕೆ ಪ್ರಕಾರ ತಾವು ಒಬ್ಬರೇ ಸರಿ ಇರೋದು ಎಂದು ಲೇವಡಿ ಮಾಡಿದರು.

ಸಚಿವ ಕೆಎನ್ ರಾಜಣ್ಣಗೆ ಹನಿಟ್ರ್ಯಾಪ್  ಪ್ರಕರಣ ಬಗ್ಗೆ ತನಿಖೆ ನಡೆಯುತ್ತಿದೆ. ತನಿಖೆ ನಡೆಯುತ್ತಿರುವಾಗ ಹೆಚ್ ಡಿಕೆ ಯಾಕೆ ಮಾತನಾಡುತ್ತಾರೆ ಗೊತ್ತಿಲ್ಲ ಎಂದು ಕಿಡಿಕಾರಿದರು.

ಇನ್ನು ಆನ್ ಲೈನ್ ಬೆಟ್ಟಿಂಗ್  ತಡೆ ಬಗ್ಗೆ ಸಭೆ ನಡೆಸಿದ್ದೇವೆ. ಬೆಟ್ಟಿಂಗ್ ನಡೆಸುವವರನ್ನೂ ಕೂಡ ನಾವು ಕರೆದಿದ್ದವು.  ಕಾನೂನು ವ್ಯಾಪ್ತಿಯಲ್ಲಿ ಇರುವುದಕ್ಕೆ ಅವರು ಒಪ್ಪಿದ್ದಾರೆ.  ಒಂದು ತಿಂಗಳೊಳಗೆ ನಾವು ಹೊಸ ಕಾನೂನು ಕೂಡ ತರುತ್ತೇವೆ ಎಂದು ಪರಮೇಶ್ವರ್ ತಿಳಿಸಿದರು.

Key words: HDK, tons of documents, Home Minister,  Parameshwar