ಗೃಹ ಸಚಿವರ ನಿವಾಸಕ್ಕೆ ಪೊಲೀಸ್ ಸಿಬ್ಬಂದಿ ಹೋಗಬೇಕಾದ್ರೆ ಡಿಜಿ ಕಚೇರಿಯಲ್ಲಿ ನೋಂದಣಿ ಕಡ್ಡಾಯ

ಬೆಂಗಳೂರು,ಫೆಬ್ರವರಿ,27,2025 (www.justkannada.in): ಗೃಹ ಸಚಿವ ಡಾ. ಜಿ. ಪರಮೇಶ್ವರ್  ಅವರ ಮನೆಗೆ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ನೇರವಾಗಿ ಭೇಟಿ ನೀಡುವಂತಿಲ್ಲ. ಗೃಹ ಸಚಿವರ ನಿವಾಸಕ್ಕೆ ಪೊಲೀಸ್ ಸಿಬ್ಬಂದಿ ಹೋಗಬೇಕಾದ್ರೆ ಡಿಜಿ ಕಚೇರಿಯಲ್ಲಿ ನೋಂದಣಿ ಮಾಡಿಸುವುದು ಕಡ್ಡಾಯವಾಗಿದೆ ಎಂದು ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಅಲೋಕ್ ಮೋಹನ್ ಅವರೇ ಎಲ್ಲಾ ಪೊಲೀಸ್ ಅಧಿಕಾರಿಗಳಿಗೆ ಆದೇಶ ಹೊರಡಿಸಿದ್ದಾರೆ ಎನ್ನಲಾಗಿದೆ.

ವರ್ಗಾವಣೆ ಹಾಗೂ ಕೆಲಸದ ವಿಚಾರವಾಗಿ  ಗೃಹ ಸಚಿವ ಡಾಜಿ.ಪರಮೇಶ್ವರ್ ಮನೆಗೆ ಪೊಲೀಸ್ ಅಧಿಕಾರಿಗಳು ಸಿಬ್ಬಂದಿಗಳು ಆಗಾಗ ಭೇಟಿ ನೀಡುತ್ತಲೇ ಇರುತ್ತಾರೆ. ಗೃಹಸಚಿವರ ಕಚೇರಿಗೆಗಷ್ಟೇ ಅಲ್ಲದೇ, ಮನೆಗೂ ನಿರಂತರವಾಗಿ ಭೇಟಿ ನೀಡುತ್ತಿರುತ್ತಾರೆ. ಈ ಬಗ್ಗೆ ಗಹ ಸಚಿವರ ಕಚೇರಿಯಿಂದ ಡಿಜಿ ಐಜಿ ಕಚೇರಿಗೆ ಮಾಹಿತಿ ಬಂದಿತ್ತು ಎನ್ನಲಾಗಿದೆ. ಇದನ್ನು ಆಧರಿಸಿ ಖುದ್ದು ಡಿಜಿ &ಐಜಿಪಿ ಅಲೋಕ್ ಮೋಹನ್‌ ಅವರೇ ಎಲ್ಲಾ ಪೊಲೀಸ್ ಅಧಿಕಾರಿಗಳಿಗೆ ಮೆಮೋ ಕಳಿಸಿದ್ದು, ಪೊಲೀಸ್ ಅಧಿಕಾರಿ, ಪೊಲೀಸ್ ಸಿಬ್ಬಂದಿಗಳು ಗೃಹ ಸಚಿವರ ಮನೆಗೆ ನೇರವಾಗಿ ಹೋಗುವಂತಿಲ್ಲ.

ಗೃಹ ಸಚಿವರ ಮನೆ ಅಥವಾ ಕಚೇರಿಗೆ ಭೇಟಿ ನೀಡಬೇಕಾದರೇ ಡಿಜಿ ಕಚೇರಿಯಲ್ಲಿ ನೋಂದಣಿ ಮಾಡಿಸೋದು ಕಡ್ಡಾಯ‌ವಾಗಿದೆ. ನೋಂದಣಿ ಮಾಡಿಸಿಕೊಳ್ಳದೇ ಗೃಹ ಸಚಿವರ ಮನೆಗೆ ಯಾರೂ ಹೋಗುವಂತಿಲ್ಲ ಎಂದು ಆದೇಶ ಹೊರಡಿಸಿದ್ದಾರೆ.

Key words: Registration, DG office, police, home minister, residence