ಮೈಸೂರು,ಮೇ,14,2019(www.justkannada.in): ಕಳೆದ ಬಾರಿ ಕೊಡಗಿನಲ್ಲಿ ಉಂಟಾದ ಜಲಪ್ರಳಯದಿಂದ ಮನೆ ಕಳೆದುಕೊಂಡು ನಿರಾಶ್ರಿತರಾಗಿರುವವರಿಗೆ ಮನೆ ನಿರ್ಮಾಣ ಕಾರ್ಯ ಮುಗಿದಿದ್ದು ಶೀಘ್ರವೇ ಮನೆ ನೀಡಲಾಗುತ್ತದೆ ಎಂದು ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಸಾ.ರಾ ಮಹೇಶ್ ಭರವಸೆ ನೀಡಿದ್ದಾರೆ.
ಮೈಸೂರಿನಲ್ಲಿ ಇಂದು ಮಾತನಾಡಿದ ಸಚಿವ ಸಾ.ರಾ ಮಹೇಶ್, ಕೊಡಗಿನಲ್ಲಿ ನೀರಿಗೆ ಯಾವುದೇ ತೊಂದರೆ ಇಲ್ಲ. ಎಲ್ಲ ಅಧಿಕಾರಿಗಳು ಕೇಂದ್ರ ಸ್ಥಾನದಲ್ಲಿ ಇದ್ದು ಸಮಸ್ಯೆ ಆದರೆ ತಕ್ಷಣ ತಿಳಿಸುವಂತೆ ಸೂಚನೆ ನೀಡಿದ್ದೇನೆ. ಕೊಡಗಿನಲ್ಲಿ 800 ಮನೆಗಳ ನಿರ್ಮಾಣ ಮುಗಿದಿದೆ. 400 ಮನೆಗಳನ್ನು ನಿರಾಶ್ರಿತರಿಗೆ ಶೀಘ್ರದಲ್ಲೇ ನೀಡಲಾಗುತ್ತದೆ ಎಂದು ತಿಳಿಸಿದರು.
ಇನ್ನು ನಿರಾಶ್ರಿತರಿಗೆ ಮೂಲಭೂತ ಸೌಕರ್ಯಗಳನ್ನು ಕಲ್ಪಿಸುವ ಕೆಲಸ ನಡೆಯುತ್ತಿದೆ. ಸದ್ಯ ಸಂಪೂರ್ಣವಾಗಿ ಮನೆ ಕಳೆದುಕೊಂಡವರಿಗೆ 400 ಮನೆ ನೀಡಲಾಗುವುದು. ಸ್ವಲ್ಪ ಭಾಗ ಮನೆ ಉಳಿದಿರುವವರು ಅಲ್ಲೇ ವಾಸ ಮಾಡುತ್ತಿದ್ದಾರೆ. ಉಳಿದ 400 ಮನೆಗಳನ್ನು ಅವ್ರಿಗೂ ನೀಡಲಾಗುವುದು ಎಂದು ಸಚಿವ ಸಾ.ರಾ ಮಹೇಶ್ ಸ್ಪಷ್ಟನೆ ನೀಡಿದರು.
Key words: Home – refugees – Kodagu- soon-Minister- Sa ra Mahesh