ಮೈಸೂರು,ಜನವರಿ,17,2022(www.justkannada.in): ಮೈಸೂರಿನಲ್ಲಿ ಹುಕ್ಕಾ ಬಾರ್ ಬಂದ್ ಮಾಡುವ ಬಗ್ಗೆ ಮೈಸೂರು ಮಹಾನಗರ ಪಾಲಿಕೆ ಕೌನ್ಸಿಲ್ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ.
ಈ ಸಂಬಂಧ ಕೌನ್ಸಿಲ್ ಸಭೆಯಲ್ಲಿ ಮಾತನಾಡಿದ ಪಾಲಿಕೆ ಸದಸ್ಯ ಅಯೂಬ್ ಖಾನ್, ಮೈಸೂರಿನಲ್ಲಿ ಹುಕ್ಕಾ ಬಾರ್ ದಂಧೆ ನಡೆಯುತ್ತಿದೆ. ಹುಕ್ಕಾ ಬಾರ್ ಗಳಲ್ಲಿ ಏನು ನಡೆಯುತ್ತಿದೆ ಎಂಬುದು ಗೊತ್ತಿಲ್ಲ. ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ನಡೆಯುತ್ತಿದ್ದರೂ ನೋಡಿಕೊಂಡು ಆರಾಮವಾಗಿದ್ದಾರೆ. ಹುಕ್ಕ ಬಾರ್ ಗಳಲ್ಲಿ ಅಸಹ್ಯ ಚಟುವಟಿಕೆ ನಡೆಯುತ್ತಿದೆ. ಹುಕ್ಕಾ ಹೆಸರಲ್ಲಿ ಏನೇನು ನಡೆಯುತ್ತಿದೆಯೊ ಗೊತ್ತಿಲ್ಲ. ಡ್ರಗ್ಸ್ ಸೇವನೆ ಕಡೆ ಯುವಕರು ಹೋಗುತ್ತಿದ್ದಾರೆ ಎಂಬ ಆತಂಕ ಇದೆ. ಸಂಪಾದನೆ ಮಾಡಲು ಏನು ಬೇಕಾದರೂ ಮಾಡುತ್ತಿದ್ದಾರೆ. ಹುಕ್ಕಾಬಾರ್ ಗಳ ಲೈನ್ಸನ್ ಕ್ಯಾನ್ಸಲ್ ಮಾಡಬೇಕು. 18 ವರ್ಷ ಕೆಳ ಪಟ್ಟ ಮಕ್ಕಳಿಗೂ ಹುಕ್ಕ ಸೇವನೆ ಮಾಡುತ್ತಿದ್ದಾರೆ. ಇದನ್ನು ಗಂಭೀರವಾಗಿ ಪರಗಣಿಸಬೇಕು. ಹುಕ್ಕಾ ಬಾರ್ ಬಂದ್ ಮಾಡಿವಂತೆ ಕೌನ್ಸಿಲ್ ನಿರ್ಣಯ ಮಾಡುವಂತೆ ಅಯೂಬ್ ಖಾನ್ ಆಗ್ರಹಿಸಿದರು.
ಹುಕ್ಕಾ ಬಾರ್ ಬಂದ್ ಮಾಡುವುದಾಗಿ ಮೇಯರ್ ಸುನಂದ ಪಾಲನೇತ್ರ ನಿರ್ಣಯ ಪ್ರಕಟಿಸಿದರು.
ಅಧಿಕಾರಿಗಳ ವಿರುದ್ಧ ಮೇಯರ್ ಗರಂ.
ಕೌನ್ಸಿಲ್ ಸಭೆಯಲ್ಲಿ ಮಾತನಾಡುತ್ತಾ ಕುಳಿತಿದ್ದ ಅಧಿಕಾರಿಗಳಿಗೆ ತರಾಟೆ ತೆಗೆದುಕೊಂಡ ಮೇಯರ್ ಸುನಂದ ಪಾಲನೇತ್ರ, ನಿಮಗೆ ಜವಬ್ದಾರಿ ಇಲ್ವಾ. ಸದಸ್ಯರು ಇಷ್ಟೆಲ್ಲ ಸಮಸ್ಯೆ ಹೇಳುತ್ತಿದ್ದಾರೆ. ನಿಮ್ಮಗಳಿಂದಲೆ ಇಷ್ಟೆಲ್ಲಾ ಸಮಸ್ಯೆ ಆಗುರೋದು. ನೀವು ಸರಿ ಇದ್ದಿದ್ದರೇ ನಮಗೆ ಈ ಕಷ್ಟ ಬರುತ್ತಿರಲಿಲ್ಲ.ಎಂದು ಅಧಿಕಾರಿಗಳ ವಿರುದ್ಧ ಗರಂ ಆದರು.
ಮೈಸೂರಿನಲ್ಲಿ ಹಂದಿ ಹಾಗೂ ಹಾವಳಿ ಹೆಚ್ವಳ ವಿಚಾರಕ್ಕೆ ಸಂಬಂಧಿಸಿದಂತೆ ಕೌನ್ಸಿಲ್ ಸಭೆಯಲ್ಲಿ ಚರ್ಚೆ ನಡೆಯಿತು. ನಗರದಲ್ಲಿ ನಾಯಿಗಳ ಹಾವಳಿ ಹೆಚ್ಚಾಗಿದೆ. ಆಪರೇಷನ್ ಮಾಡಿದ್ದೀವಿ ಅಂತ ಹೇಳುತ್ತಿದ್ದೀರಿ. ಹೇಗೆ ನಾಯಿಗಳು ಹೆಚ್ಚಾಗುತ್ತಿವೆ. ಹಿಂದಿನ ಸಭೆಗಳಲ್ಲಿ ನಾಯಿ ಹಾಗೂ ಹಂದಿಗಳ ಪುನರ್ವಸತಿ ತಲಾ 5 ಎಕರೆ ಜಾಗ ಗುರುತಿಸಲಾಗಿದೆ.ಅದು ಇನ್ನೂ ಪ್ರಗತಿ ಆಗಿಲ್ಲ. ಯಾವ ರೀತಿ ಆಪರೇಷನ್ ಮಾಡುತ್ತಿದ್ದೀರಿ. ನಾಯಿಗಳ ಆಪರೇಷನ್ ಕೊಟ್ಯಾಂತರ ಖರ್ಚು ಮಾಡಲಾಗುತ್ತಿದೆ.ಆದ್ರೆ ಆಪರೇಷನ್ ವಿಫಲ ಆಗ್ತಿದೆ. ಆಪರೇಷನ್ ಮಾಡದೆ ಗೋಲ್ ಮಾಲ್ ಮಾಡಲಾಗಿದೆ. ಈ ಸಂಬಂಧ ದಂಡದ ಜೊತೆ ಕೇಸು ದಾಖಲಿಸುವಂತೆ ಜೆಡಿಎಸ್ ಸದಸ್ಯರು ಆಗ್ರಹಿಸಿದರು.
ನಾಯಿ ಆಪರೇಷನ್ ಮಾಡಿ ಮತ್ತೆ ಅದೇ ಸ್ಥಳದಲ್ಲಿ ಬಿಡಬೇಕು ಎಂಬುದರ ಬಗ್ಗೆ ಸುಪ್ರಿಂ ಕೋರ್ಟ್ ಆದೇಶ ಇದೆ. ಅವುಗಳನ್ನು ಪುನರ್ವಸತಿ ಮಾಡಲು ಸಾಧ್ಯವಾಗಲ್ಲ. ಹುಚ್ಚು ನಾಯಿ ಅಥವಾ ತುಂಭಾ ಸಮಸ್ಯೆ ಇದ್ರೆ ಮಾತ್ರ ಅವುಗಳನ್ನು ಪುನರ್ವಸತಿ ಮಾಡಲಾಗುತ್ತಿದೆ. ಪ್ರತಿ ನಿತ್ಯ ಎರಡು ವಾರ್ಡ್ ಗಳಲ್ಲಿ ವಿಶೇಷ ಕಾರ್ಯಾಚರಣೆಯ ಮಾಡಲಾಗುವುದು ಎಂದು ಕೌನ್ಸಿಲ್ ಸಭೆಯಲ್ಲಿ ಸದಸ್ಯರಿಗೆ ಆಯುಕ್ತ ಲಕ್ಷ್ಮೀಕಾಂತ್ ರೆಡ್ಡಿ ಭರವಸೆ ನೀಡಿದರು.
Key words: Hookah Bar- Bandh – Mysore.