ಮೈಸೂರು,ಸೆಪ್ಟಂಬರ್,28,2021(www.justkannada.in): ಹುಕ್ಕಾಬಾರ್ ಬಗ್ಗೆ ಪತ್ರಕರ್ತರು ಕೇಳಿದ ಪ್ರಶ್ನೆಗೆ ಗೃಹ ಸಚಿವ ಅರಗ ಜ್ಞಾನೇಂದ್ರ ತಬ್ಬಿಬ್ಬಾದ ಘಟನೆ ಮೈಸೂರಿನಲ್ಲಿ ನಡೆಯಿತು.
ಮೈಸೂರಿನಲ್ಲಿ ಅಧಿಕಾರಿಗಳ ಜತೆ ಸಭೆ ನಡೆಸಿದ ಬಳಿಕ ಗೃಹ ಸಚಿವ ಅರಗ ಜ್ಞಾನೇಂದ್ರ ಸುದ್ಧಿಗೋಷ್ಠಿ ನಡೆಸಿ ಮಾತನಾಡಿದರು. ಈ ವೇಳೆ ಮಾತನಾಡುತ್ತಾ, ಮೈಸೂರು ನಗರದಲ್ಲಿ ಮೂರು ವರ್ಷದಲ್ಲಿ ಮಾದಕ ವಸ್ತುಗಳಿಗೆ ಸಂಬಂಧಿಸಿದಂತೆ 61 ಕೇಸ್ ದಾಖಲು ಮಾಡಿ 104 ಜನರನ್ನು ಬಂದಿಸಿದ್ದಾರೆ. ಹುಕ್ಕಾ ಬಾರ್ ಗಳು ಮೈಸೂರಿನಲ್ಲಿ ಹೆಚ್ಚಾಗಿವೆ. ಇದರ ಬಗ್ಗೆ ಗಮನ ಹರಿಸುವಂತೆ ಪೊಲೀಸ್ ಕಮಿಷನರ್ ಗೆ ಸೂಚನೆ ನೀಡಲಾಗಿದೆ ಎಂದು ಹೇಳಿದರು.
ಈ ವೇಳೆ ಮೈಸೂರಿನ ಹುಕ್ಕಾ ಬಾರ್ ದಂಧೆ ಬಗ್ಗೆ ಮಾಧ್ಯಮ ಪ್ರತಿನಿಧಿಗಳು ಗೃಹ ಸಚಿವ ಅರಗ ಜ್ಞಾನೇಂದ್ರ ಅವರಿಗೆ ಸರಣಿ ಪ್ರಶ್ನೆಗಳನ್ನ ಕೇಳಿದರು. ಪತ್ರಕರ್ತರ ಸರಣಿ ಪ್ರಶ್ನೆಗಳಿಗೆ ತಬ್ಬಿಬ್ಬಾದ ಸಚಿವ ಅರಗ ಜ್ಞಾನೇಂದ್ರ, ಪೊಲೀಸ್ ಅಧಿಕಾರಿಗಳಿಂದ ನೆರವು ಪಡೆದುಕೊಂಡರು. ಹುಕ್ಕಾ ಬಾರ್ ಅಂದ್ರೆ ಏನು ? ಅದು ಹೆಂಗಿರುತ್ತೆ..?ಎಂದು ಕೇಳಿ ವಿವರ ಪಡೆದುಕೊಂಡರು. ಈ ವೇಳೆ ಗೃಹಸಚಿವರಿಗೆ ಮೈಸೂರು ಪೊಲೀಸ್ ಕಮಿಷನರ್ ಡಾ . ಚಂದ್ರಗುಪ್ತ ಕಿವಿಯಲ್ಲಿ ವಿವರ ನೀಡಿದರು.
Keywords: Hookah – Home Minister -Araga Jnanendra- Journalist-question