ಹುಬ್ಬಳ್ಳಿ,ಡಿಸೆಂಬರ್,13,2022(www.justkannada.in): ರಾಜ್ಯ ಕಾಂಗ್ರೆಸ್ ನಲ್ಲಿ ದಲಿತ ಸಿಎಂ ಬಳಿಕ ಮಹಿಳಾ ಮುಖ್ಯಮಂತ್ರಿ ಬೇಡಿಕೆಯೂ ಬಂದಿದೆ. ಹೌದು, ಮಹಿಳಾ ಮುಖ್ಯಮಂತ್ರಿ ಬರಬೇಕೆಂದು ನಮ್ಮೆಲ್ಲರ ಆಶಯ ಎಂದು ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಡಾ.ಪುಷ್ಪ ಅಮರನಾಥ್ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಹುಬ್ಬಳ್ಳಿಯಲ್ಲಿ ಇಂದು ಮಾತನಾಡಿದ ಡಾ.ಪುಷ್ಪಾ ಅಮರನಾಥ್, ಮಹಿಳಾ ಮುಖ್ಯಮಂತ್ರಿ ಬರಬೇಕೆಂಬುದು ನಮ್ಮೆಲ್ಲರ ಆಶಯ. ನಾವು ಅರ್ಧದಷ್ಟು ಜನಸಂಖ್ಯೆ ಇದ್ದೇವೆ. ಯಾಕೆ ಕೊಡಬಾರದು. ಅದಕ್ಕೆ ತಕ್ಕ ವಾತಾವರಣ ಸೃಷ್ಟಿಯಾಗಬೇಕಿದೆ ಎಂದು ಹೇಳಿದರು.
ಟಿಕೆಟ್ ಹಂಚಿಕೆ ವೇಳೆ ಮಹಿಳೆಯರಿಗೆ ಪ್ರಾತಿನಿಧ್ಯ ನೀಡಬೇಕು. ಈಗಾಗಲೇ ನಮ್ಮ ನಾಯಕರ ಗಮನಕ್ಕೆ ತಂದಿದ್ದೇವೆ, ಮಹಿಳೆಯರಿಗೆ ಟಿಕೆಟ್ ನೀಡುವ ಬಗ್ಗೆ ಪಕ್ಷದಲ್ಲೂ ಚರ್ಚಿಸಿದ್ದೇವೆ ಎಂದು ಪುಷ್ಪ ಅಮರನಾಥ್ ತಿಳಿಸಿದರು. ಜನವರಿ 8ರಂದು ಚಿತ್ರದುರ್ಗದಲ್ಲಿ ಡಾ.ಜಿ.ಪರಮೇಶ್ವರ್ ನಾಯಕತ್ವದಲ್ಲಿ ಐಕ್ಯತಾ ಸಮಾವೇಶ ಮಾಡುತ್ತೇವೆ ಎಂದು ಹೇಳಿದರು.
Key words: hope – woman -Chief Minister -will -come.-KPCC -Women’s- Unit –president- Dr. Pushpa Amarnath.