ಮೈಸೂರಿನಲ್ಲಿ ಭೀಕರ ಅಪಘಾತ: ದಂಪತಿಗೆ ಗಂಭೀರ ಗಾಯ

ಮೈಸೂರು, ಜುಲೈ, 19,2024 (www.justkannada.in):  ಗ್ಯಾಸ್ ಟ್ಯಾಂಕರ್ ಮತ್ತು ಬೈಕ್ ನಡುವೆ ಡಿಕ್ಕಿಯಾಗಿ ದಂಪತಿ ಗಂಭೀರ  ಗಾಯಗೊಂಡಿರುವ  ಘಟನೆ ಮೈಸೂರಿನಲ್ಲಿ ಇಂದು ನಡೆದಿದೆ.

ಮೈಸೂರಿನ ಕೂರ್ಗಳ್ಳಿ ಬಳಿ ರಿಂಗ್ ರಸ್ತೆಯಲ್ಲಿ ಈ ದುರ್ಘಟನೆ ಸಂಭವಿಸಿದೆ. ಪತಿ ಚಂದ್ರ ಹಾಗೂ ಪತ್ನಿ ಪ್ರೇಮ ಗಂಭೀರ ಗಾಯಗೊಂಡವರು.  ಬೈಕ್ ನಲ್ಲಿ ತೆರಳುತ್ತಿದ್ದ ಪತಿ ಚಂದ್ರು ಹಾಗೂ ಪತ್ನಿಗೆ ಗ್ಯಾಸ್ ಟ್ಯಾಂಕರ್ ಡಿಕ್ಕಿ ಹೊಡೆದು ಈ ಅಪಘಾತ ಸಂಭವಿಸಿದೆ.

 

ಘಟಕಾ ಸ್ಥಳಕ್ಕೆ ವಿವಿ ಪುರ ಠಾಣೆ ಪೊಲೀಸರು ಭೇಟಿ ನೀಡಿದ್ದು ಪರಿಶೀಲನೆ ನಡೆಸಿದ್ದಾರೆ.

Key words: Horrible accident, Mysore, couple, killed