ಬೆಂಗಳೂರು,ಡಿ,22,2019(www.justkannada.in): ಹೊಸಕೋಟೆ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ವಿರುದ್ದ ಬಂಡೆದ್ದು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆಲುವು ಸಾಧಿಸಿರುವ ಶರತ್ ಬಚ್ಚೇಗೌಡ ಇಂದು ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮದ ಬಳಿಕ ಸಿಎಂ ಬಿಎಸ್ ಯಡಿಯೂರಪ್ಪ ಅವರನ್ನ ಮಾತನಾಡಿಸಲು ಮುಂದಾಗಿದ್ದರು.
ಹೌದು, ವಿಧಾನಸೌಧದಲ್ಲಿ 15 ಶಾಸಕರು ಪ್ರಮಾಣ ವಚನ ಸ್ವೀಕರಿಸಿದ ನಂತರ ನೂಕುನುಗ್ಗಲು ಉಂಟಾಗಿತ್ತು. ಈ ವೇಳೆ ಪಕ್ಷೇತರ ಶಾಸಕ ಶರತ್ ಬಚ್ಚೇಗೌಡರು ಸಿಎಂ ಬಿಎಸ್ ಯಡಿಯೂರಪ್ಪ ಅವರನ್ನ ಮಾತನಾಡಿಸಲು ಪ್ರಯತ್ನಿಸಿದರು. ಈ ಸಮಯದಲ್ಲಿ ಸಿಎಂ ಬಿಎಸ್ ಯಡಿಯೂರಪ್ಪ ಅವರು ಶರತ್ ಬಚ್ಚೇಗೌಡರ ಕಡೆ ತಿರುಗಿ ನೋಡದೇ ಮುಂದೆ ಸಾಗಿದರು.
ಈ ಮೂಲಕ ಸಿಎಂ ಬಿಎಸ್ ವೈ ಶರತ್ ಬಚ್ಚೇಗೌಡರ ಜತೆ ಮಾತನಾಡಲು ನಿರಾಕರಿಸಿದರು. ನಂತರ ಶರತ್ ಬಚ್ಚೇಗೌಡರು ಕಂದಾಯ ಸಚಿವ ಆರ್. ಅಶೋಕ್ ಜತೆ ನಕ್ಕು ಸುಮ್ಮನಾದರು. ಪ್ರಮಾಣ ವಚನ ಸ್ವೀಕರಿಸಿದ ಬಳಿಕ ಮಾತನಾಡಿದ ಶರತ್ ಬಚ್ಚೇಗೌಡ ಹೊಸಕೋಟೆ ಕ್ಷೇತ್ರದಲ್ಲಿನನ್ನ ಎದುರಾಳಿಗಳು ಯಾರೂ ಇಲ್ಲ. ಬಿಜೆಪಿ ಸೇರುವ ಬಗ್ಗೆ ಬೆಂಬಲಿಗರ ಜತೆ ಚರ್ಚಿಸಿ ನಿರ್ಧಾರ ಮಾಡುತ್ತೇನೆ ಎಂದು ತಿಳಿಸಿದರು.
Key words: hoskote- independent mla-Sharath Bachegauda- try-speak – CM BS yeddyurappa