ಬೆಂಗಳೂರು, ಜೂ.7, 2020 (www.justkannada.in): ರಾಜ್ಯದಲ್ಲಿ ನಾಳೆಯಿಂದ ಹೋಟೆಲ್ ಮತ್ತು ರೆಸ್ಟೋರೆಂಟ್ ಗಳು ಒಪನ್ ಆಗಲಿದ್ದಾವೆ.
ಕೆಲ ಮುಂಜಾಗ್ರತಾ ಕ್ರಮಗಳನ್ನು ಹೋಟೆಲ್ ಮತ್ತು ರೆಸ್ಟೋರೆಂಟ್ ತೆರೆಯೋದಕ್ಕಾಗಿ ಕಡ್ಡಾಯವಾಗಿ ಪಾಲಿಸಬೇಕಿದೆ. ಕಳೆದ ಇತ್ತೀಚೆಗಷ್ಟೇ ಹೋಟೆಲ್ ಮತ್ತು ರೆಸ್ಟೋರೆಂಟ್ ಮಾಲೀಕರ ಸಂಘದ ಮುಖಂಡರು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರನ್ನು ಭೇಟಿ ಮಾಡಿ, ಹೋಟೆಲ್ ಮತ್ತು ರೆಸ್ಟೋರೆಂಟ್ ತೆರೆಯಲು ಅನುಮತಿ ಕೋರಿತ್ತು.
ಈ ಮನವಿಗೆ ಸ್ಪಂದಿಸಿದ್ದಂತ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ, ಜೂನ್ 8ರ ನಾಳೆಯಿಂದ ರಾಜ್ಯದಲ್ಲಿ ಹೋಟೆಲ್ ಮತ್ತು ರೆಸ್ಟೋರೆಂಟ್ ತೆರೆಯಲು ಅನುಮತಿ ನೀಡಿದ್ದರು. ಅಲ್ಲದೇ ಕೊರೋನಾ ಸೋಂಕಿನ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಿಕೊಂಡು, ತೆರೆಯಲು ಸೂಚಿಸಿದ್ದರು. ಹೀಗಾಗಿ ನಾಳೆಯಿಂದ ರಾಜ್ಯಾಧ್ಯಂತ ಹೋಟೆಲ್ ಮತ್ತು ರೆಸ್ಟೋರೆಂಟ್ ಗಳು ತೆರೆಯಲಿವೆ.
ಹೋಟೆಲ್ ಒಳಗೆ 6 ಅಡಿ ಅಂತರ ಕಾಪಾಡಬೇಕು. ಮಾಸ್ಕ್ ಧರಿಸುವುದು ಕಡ್ಡಾಯ ಈ ನಿಯಮಗಳನ್ನು ಹೋಟೆಲ್ ಮತ್ತು ರೆಸ್ಟೋರೆಂಟ್ ನಲ್ಲಿ ಕಡ್ಡಾಯವಾಗಿ ಅನುಸರಿಸಬೇಕು.