ಮೈಸೂರು,ಡಿಸೆಂಬರ್,5,2024 (www.justkannada.in): ಫೆಂಗಲ್ ಚಂಡಮಾರುತ ಎಫೆಕ್ಟ್ ನಿಂದಾಗಿ ರಾಜ್ಯದ ಹಲವು ಭಾಗಗಳಲ್ಲಿ ಭಾರಿ ಮಳೆಯಾಗಿದ್ದು ಈ ನಡುವೆ ಮಳೆಗೆ ಮನೆ ಗೋಡೆ ಕುಸಿದಿದ್ದು ಕುಟುಂಬಸ್ಥರು ಪ್ರಾಣಾಪಾಯದಿಂದ ಪಾರದ ಘಟನೆ ಮೈಸೂರು ಜಿಲ್ಲೆ ನಂಜನಗೂಡು ತಾಲ್ಲೂಕಿನ ದೊಡ್ಡಕವಲಂದೆ ಗ್ರಾಮದಲ್ಲಿ ನಡೆದಿದೆ.
ಎಡಬಿಡದೆ ಸುರಿದ ಜಿಟಿಜಿಟಿ ಮಳೆಗೆ ದೊಡ್ಡಕವಲಂದೆ ಗ್ರಾಮದ ಮೋಸಿನಾ ಭಾನು ಎಂಬುವವರಿಗೆ ಸೇರಿದ ಮಣ್ಣಿನ ಮನೆ ಕುಸಿದಿದ್ದು, ಅದೃಷ್ಟವಶಾತ್ ಕುಟುಂಬಸ್ಥರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಮೋಸಿನಾ ಭಾನು ಕುಟುಂಬದವರು ತಡರಾತ್ರಿ ಮನೆಯಲ್ಲಿ ಮಲಗಿದ್ದ ಸಂದರ್ಭದಲ್ಲಿ ಮೇಲ್ಚಾವಣಿ, ಗೋಡೆ ಕುಸಿದಿದೆ. ತಕ್ಷಣವೇ ಕುಟುಂಬಸ್ಥರು ಪಕ್ಕದ ಮನೆಯಲ್ಲಿ ಅಶ್ರಯ ಪಡೆದಿದ್ದಾರೆ. ಮನೆಯಲ್ಲಿದ್ದ ದವಸ ಧಾನ್ಯಗಳು, ಎಲೆಕ್ಟ್ರಾನಿಕ್ ಉಪಕರಣಗಳು ಸೇರಿ ಮನೆ ವಸ್ತುಗಳು ಹಾನಿಯಾಗಿದ್ದು ಸೂಕ್ತ ಪರಿಹಾರಕ್ಕಾಗಿ ಕುಟುಂಬಸ್ಥರು ಮನವಿ ಮಾಡಿದ್ದಾರೆ.
Key words: Rain, House wall, collapses