ಮೈಸೂರು,ಏಪ್ರಿಲ್,9,2021(www.justkannada.in): ಕೋರ್ಟ್ ಮೆಟ್ಟಿಲೇರಿದ್ದ ಸಚಿವರ ವಿರುದ್ಧ ಕಿಡಿ ಕಾರಿರುವ ಶಾಸಕ ಸಾ.ರಾ ಮಹೇಶ್, ಮಾನ ಕಾಪಾಡಿಕೊಳ್ಳಲು ಕೋರ್ಟ್ ಗೆ ಹೋದ ಸಚಿವರಿಂದ ಅಭಿವೃದ್ಧಿ ನಿರೀಕ್ಷೆ ಮಾಡಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದ್ದಾರೆ.
ಮೈಸೂರಿನಲ್ಲಿ ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಶಾಸಕ ಸಾ.ರಾ ಮಹೇಶ್, ಸಚಿವರು ಎರಡೆರಡು ಬಾರಿ ಪ್ರಮಾಣವಚನ ಸ್ವೀಕಾರ ಮಾಡ್ತಾರೆ. ಮಾನ ಕಾಪಾಡಿಕೊಳ್ಳಲು ಕೋರ್ಟ್ ಗೆ ಹೋದ ಸಚಿವರಿಂದ ಅಭಿವೃದ್ಧಿ ನಿರೀಕ್ಷೆ ಮಾಡಲು ಹೇಗೆ ಸಾಧ್ಯ. ಇವರು ಆರೂವರೆ ಕೋಟಿ ಜನರನ್ನ ಹೇಗೆ ರಕ್ಷಣೆ ಮಾಡ್ತಾರೆ ಎಂದು ಪ್ರಶ್ನಿಸಿದರು.
ಶಾಸಕ ಜಮೀರ್ ಅಹ್ಮದ್ ಖಾನ್ ಗೆ ತಿರುಗೇಟು…
ಹಾಗೆಯೇ ಜೆಡಿಎಸ್ ಮತ್ತು ಹೆಚ್.ಡಿ ಕುಮಾರಸ್ವಾಮಿ ಬಗ್ಗೆ ಟೀಕಿಸಿದ ಶಾಸಕ ಜಮೀರ್ ಅಹ್ಮದ್ ಖಾನ್ ಗೆ ತಿರುಗೇಟು ನೀಡಿದ ಶಾಸಕ ಸಾ.ರಾ ಮಹೇಶ್, ನಮ್ಮ ಪಕ್ಷವನ್ನ ಬೇರೆ ನಾಯಕರು ಯಾರೂ ಟೀಕೆ ಮಾಡಲ್ಲ. ಪಕ್ಷದಲ್ಲಿ ಅಧಿಕಾರ ಅನುಭವಿಸಿ, ನಮ್ಮ ನಾಯಕರನ್ನು ಇಂದ್ರ ಚಂದ್ರ ಅಂತ ಹೊಗಳಿದ್ದವರೇ ಈಗ ನಮ್ಮ ಪಕ್ಷದ ಬಗ್ಗೆ ಟೀಕೆ ಮಾಡ್ತಾರೆ. ದೇವೇಗೌಡರು, ಕುಮಾರಸ್ವಾಮಿ, ರೇವಣ್ಣ ಅವರಿಗೆ ಟೀಕೆಗಳನ್ನ ಅರಗಿಸಿಕೊಳ್ಳುವ ಶಕ್ತಿಯನ್ನ ನಮ್ಮ ಪಕ್ಷದ ಕಾರ್ಯಕರ್ತರು ನೀಡುತ್ತಾರೆ ಎಂದು ಹೇಳಿದರು.
ನೌಕರರ ನ್ಯಾಯಯುತ ಬೇಡಿಕೆಗಳು ಈಡೇರಿಸಲು ಸರ್ಕಾರ ಮುಂದಾಗಲಿ.
ಸಾರಿಗೆ ನೌಕರರ ಪ್ರತಿಭಟನೆ ವಿಚಾರ ಕುರಿತು ಪ್ರತಿಕ್ರಿಯಿಸಿದ ಸಾ.ರಾ ಮಹೇಶ್, ಯಾವುದೇ ಸರ್ಕಾರ ಏಕಾಏಕಿ ನಿರ್ಧಾರ ತೆಗೆದುಕೊಳ್ಳಲು ಆಗೋದಿಲ್ಲ.ಸರ್ಕಾರ ಮುಷ್ಕರ ವಿಚಾರದಲ್ಲಿ ತೀರ್ಮಾನಕ್ಕೆ ಬರಬೇಕು. ಪ್ರೀತಿಯಿಂದ ಸಮಸ್ಯೆ ಇತ್ಯರ್ಥ ಮಾಡಿ. ಭಯದ ವಾತಾವರಣ ನಿರ್ಮಾಣ ಮಾಡುವುದು ಬೇಡ ಎಂದರು.
ಏಕಾಏಕಿ ಬಸ್ ಬಂದ್ ಮಾಡಿ ಸಂಚಾರ ವ್ಯವಸ್ಥೆ ಬಂದ್ ಮಾಡುವುದು ಸಾರ್ವಜನಿಕರಿಗೆ ಅನಾನುಕೂಲ ಆಗುತ್ತೆ. ನೌಕರರ ಕಡೆಯಿಂದ ಯಾರಾದರೂ ಮುಖಂಡರು ಪ್ರತಿಭಟನೆ ಮಾಡಲಿ, ಆದ್ರೆ ಎಲ್ಲರೂ ಪ್ರತಿಭಟನೆ ಮಾಡಿದ್ರೆ ಸಮಸ್ಯೆ ಆಗಲಿದೆ. ನೌಕರರ ನ್ಯಾಯಯುತ ಬೇಡಿಕೆಗಳು ಈಡೇರಿಸಲು ಸರ್ಕಾರ ಮುಂದಾಗಲಿ ಎಂದು ಸಲಹೆ ನೀಡಿದರು.
Key words: How – expect -development – minister –MLA- SARA Mahesh- mysore