ಬೆಂಗಳೂರು, ಮೇ 11, 2021 (www.justkannada.in): ರಾಜ್ಯದಲ್ಲಿ 45 ವರ್ಷಗಳಿಗೆ ಮೇಲ್ಪಟ್ಟ, ಕೋವಿಡ್ ಲಸಿಕೆಯ ಮೊದಲನೇ ಡೋಸ್ ಪಡೆದಿರುವ ಫಲಾನುಭವಿಗಳಿಗೆ ೨ನೇ ಡೋಸ್ ಲಸಿಕೆಯನ್ನು ಹೇಗೆ ಪೂರೈಸುವಿರಿ ಎಂದು ರಾಜ್ಯ ಉಚ್ಛ ನ್ಯಾಯಾಲಯವು ರಾಜ್ಯ ಹಾಗೂ ಕೇಂದ್ರ ಸರ್ಕಾರಗಳನ್ನು ಪ್ರಶ್ನಿಸಿದೆ.
ಇದಕ್ಕೆ ರಾಜ್ಯ ಸರ್ಕಾರವು ಮೊದಲನೇ ಡೋಸ್ ಕೊಡುವುದನ್ನು ನಿಲ್ಲಿಸಿ, ಎರಡನೆ ಡೋಸ್ ಅನ್ನು ಮಾತ್ರ ಪೂರೈಸಲು ಕ್ರಮ ಕೈಗೊಳ್ಳುವುದಾಗಿ ನ್ಯಾಯಾಲಯಕ್ಕೆ ತಿಳಿಸಿದೆ. ಆದರೆ ಉಚ್ಛ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿಗಳಾದ ಎ.ಎಸ್. ಓಕ ಹಾಗೂ ನ್ಯಾಯಮೂರ್ತಿ ಅರವಿಂದ್ ಕುಮಾರ್ ಅವರನ್ನು ಒಳಗೊಂಡ ನ್ಯಾಯಪೀಠವು ರಾಜ್ಯ ಸರ್ಕಾರಕ್ಕೆ ಈ ರೀತಿ ಪ್ರಶ್ನಿಸಿದ್ದಾರೆ:
“ರಾಜ್ಯದಲ್ಲಿ ಕೇವಲ 9 ಲಕ್ಷ ಡೋಸ್ ಲಸಿಕೆಗಳು ಮಾತ್ರ ಲಭ್ಯವಿದೆ. ಆದರೆ 16 ಲಕ್ಷ ಜನರಿಗೆ ಎರಡನೆಯ ಡೋಸ್ ಲಸಿಕೆ ತುರ್ತಾಗಿ ಲಭ್ಯವಾಗಬೇಕಿದೆ. ೧೮-೪೪ ವರ್ಷ ವಯೋಮಾನದವರನ್ನು ಮರೆತುಬಿಡಿ. ನಿಮಗೆ ಎರಡನೆಯ ಡೋಸ್ ಲಸಿಕೆಯನ್ನೂ ಸಹ ಕೊಡಲು ಸಾಧ್ಯವಿಲ್ಲ. 45 ವರ್ಷ ಮೇಲ್ಪಟ್ಟವರಿಗೆ ೨ನೇ ಡೋಸ್ ಹೇಗೆ ಸಿಗಲಿದೆ,” ಎಂದು ಪ್ರಶ್ನಿಸಿದೆ.
ಜೊತೆಗೆ ಮೊದನೇ ಡೋಸ್ ತೆಗೆದುಕೊಂಡಿರುವAತಹ ಫಲಾನುಭವಿಗಳಿಗೆ ಸರಿಯಾದ ಸಮಯಕ್ಕೆ ೨ನೇ ಡೋಸ್ ಲಸಿಕೆ ಲಭಿಸದಿದ್ದರೆ ಏನಾಗಬಹುದು ಎಂಬ ವಿಷಯವನ್ನು ಮೊದಲು ತಿಳಿದುಕೊಂಡು ವರದಿ ಮಾಡುವಂತೆ ಸೂಚಿಸಿದೆ. ಜೊತೆಗೆ ‘ಕೊವ್ಯಾಕ್ಷಿನ್’ ಲಸಿಕೆಯ ೨ನೇ ಡೋಸ್ ಅನ್ನು 4 ವಾರಗಳ ಒಳಗೆ ತೆಗೆದುಕೊಳ್ಳಬೇಕು ಎಂದೂ ಸಹ ತಿಳಿಸಿದೆ.
Key words: How – give – covid- 2nd dose –vaccine-High Court – state government.