ಬೆಂಗಳೂರು, ಜೂನ್ 08, 2021 (www.justkannada.in): ಇತ್ತೀಚಿಗೆ ಸಾಕಷ್ಟು ಜನರ ಫೇಸ್ ಬುಕ್ ಖಾತೆಯನ್ನು ಹ್ಯಾಕ್ ಮಾಡಲಾಗುತ್ತಿದೆ. ಜತೆಗೆ ಕೆಲವರ ನಕಲಿ ಖಾತೆ ತೆರೆದು ಪರಿಚಿತರಿಗೆ ಫ್ರೆಂಡ್ ರಿಕ್ವೆಸ್ಟ್ ಕಳುಹಿಸಿ ನಂತರ ಹಣ ಕೇಳಿ ಮುಜುಗರಕ್ಕೀಡು ಮಾಡುತ್ತಿರುವ ಉದಾಹಣೆಗಳನ್ನು ನೋಡುತ್ತಿದ್ದೇವೆ.
ಪ್ರಮುಖ ಸಾಮಾಜಿಕ ಜಾಲತಾಣವಾದ ಫೇಸ್ ಬುಕ್ ನಲ್ಲಿ ಯಾರಾದರು ಕಿಡಿಗೇಡಿಗಳು ನಿಮ್ಮ ನಕಲಿ ಖಾತೆಯನ್ನು ತೆರೆದಿದ್ದರೆ ಅದನ್ನು ಪತ್ತೆ ಮಾಡುವುದು ಬಲು ಸರಳ. ಅದಕ್ಕಾಗಿ ಈ ಕೆಳಗಿನ ವಿಧಾನವನ್ನು ಅನುಸರಿಸಿ…
ಮೊದಲಿಗೆ ಈಗಾಗಲೇ ಸ್ನೇಹಿತರ ಪಟ್ಟಿಯಲ್ಲಿರುವ ನಿಮ್ಮ ಗೆಳೆಯರ ಹೆಸರಿನಲ್ಲಿ ನಿಮಗೆ ಮತ್ತೆ ಫ್ರೆಂಡ್ ರಿಕ್ವೆಸ್ಟ್ ಬರುತ್ತದೆ. ಇದನ್ನು ಸ್ವೀಕರಿಸಬೇಡಿ. ಅಂದಹಾಗೆ ನಿಮ್ಮ ಗೆಳೆಯರ ಒರಿಜಿನಲ್ ಖಾತೆಯಾದರೆ ಫೇಸ್ ಬುಕ್ .ಕಾಂ/ ಬಳಿಕ ಸ್ನೇಹಿತರ ಹೆಸರು ಬರುತ್ತದೆ. ಆದರೆ ನಕಲಿಯಾದರೆ ಫೇಸ್ ಬುಕ್ ಯುನಿಕ್ ಐಡಿ. ಅಲ್ಲಿ ನಕಲಿ ಅಕೌಂಟ್ ಮಾಡಿದವನು ಪ್ರದರ್ಶನದ ಹೆಸರನ್ನಷ್ಟೇ ಬದಲಿಸಿರುತ್ತಾನೆ. ಯುನಿಕ್ ಐಡಿ ನಕಲಿ ಖಾತೆ ಸೃಷ್ಟಿಸಿದವನ ಹೆಸರಿನಲ್ಲಿರುತ್ತದೆ. ಅಥವಾ ಯಾವ್ಯಾವದೋ ಅಂಕಿಗಳನ್ನು ಒತ್ತಿರುತ್ತಾನೆ. ಅದನ್ನು ಗಮನಿಸಿಕೊಳ್ಳಿ. ಅಲ್ಲಿಗೆ ಅದು ನಕಲಿ ಅಕೌಂಟ್ ಎಂಬುದು ಖಚಿತ
ಮುಂದಿನ ಹಂತ ಅದೇ ಪುಟದಲ್ಲಿ ಮೇಲೆ ಫೈಂಡ್ ಸಪೋರ್ಟ್ ಆರ್ ರಿಪೋರ್ಟ್ ಪ್ರೊಫೈಲ್ ಅಂತಿದೆ. ಅದನ್ನು ಒತ್ತಿ. ಆಗ ಮುಂದಿನ ಪುಟ ತೆರೆದುಕೊಳ್ಳುತ್ತದೆ. ಅದರಲ್ಲಿ ಮೊದಲನೆಯ ಆಯ್ಕೆ Pretending to Be Someone ಅಂತಿರುತ್ತದೆ. ಅದನ್ನು ಒತ್ತಿ. ಮುಂದಿನ ಪುಟದಲ್ಲಿ Me, A Friend, Celebrity ಅಂತ ಬರುತ್ತದೆ. ಆ ನಕಲಿ ಅಕೌಂಟ್ ನಿಮ್ಮದೇ ಆಗಿದ್ದರೆ, Me ಒತ್ತಿ, ನಂತರ Next ಒತ್ತಿ Submit/Done ಕೊಡಿ.
ಆ ಅಕೌಂಟ್ ನಿಮ್ಮ ಗೆಳೆಯರಾದರೆ A Friend ಒತ್ತಿ. ಆಗ ಮುಂದೆ, Which Friend ಎಂದು ಕೇಳುತ್ತದೆ. ಅದರ ಕೆಳಗೆ ಸರ್ಚ್ ಬಾರ್ ನಲ್ಲಿ ನಿಮ್ಮ ಗೆಳೆಯರ ಅಕೌಂಟಿನ ಸರಿಯಾದ ಹೆಸರನ್ನು ಒತ್ತಿ ಆಗ ನಿಮ್ಮ ಗೆಳೆಯರ ಅಕೌಂಟ್ ಹೆಸರು ಬರುತ್ತದೆ. ಆ ಹೆಸರಿನ ಮೇಲೆ ಒತ್ತಿ. ಆಗ Does this go against our Community Standards? ಅಂತ ಬರುತ್ತದೆ. ಅದರ ಕೆಳಗೆ Submit ಅಂತ ನೀಲಿ ಬಣ್ಣದಲ್ಲಿ ಇರುತ್ತದೆ. ಅದರ ಮೇಲೆ Receive notifications about this report ಅಂತಿರುತ್ತದೆ. ಅದನ್ನು ಟಿಕ್ ಮಾಡಿ ಸಬ್‍ಮಿಟ್ ಕೊಡಿ. ಇಷ್ಟು ಮಾಡಿದರೆ Thank you, we have received your report ಬರುತ್ತದೆ. ಇಷ್ಟು ಮಾಡಿದರೆ ಸಾಕು. ನಂತರ ಐದೇ ನಿಮಿಷದಲ್ಲಿ ಆ ನಕಲಿ ಅಕೌಂಟ್ ಡಿಲೀಟ್ ಆಗುತ್ತದೆ. ನಿಮ್ಮ ಮೇಲ್ ಗೆ ಮೆಸೇಜ್ ಸಹ ಬರುತ್ತದೆ.