ಹುಬ್ಬಳ್ಳಿ,ಅ.21,2019(www.justkannada.in): ಹುಬ್ಬಳ್ಳಿಯ ರೈಲ್ವೆ ನಿಲ್ದಾಣದಲ್ಲಿ ಅನುಮಾನಸ್ಪದ ಬಾಕ್ಸ್ ಸ್ಪೋಟಗೊಂಡ ಪರಿಣಾಮ ವ್ಯಕ್ತಿಯೊಬ್ಬರ ಕೈ ಕಟ್ ಆಗಿರುವ ಘಟನೆ ಇಂದು ನಡೆದಿದೆ.
ಹುಬ್ಬಳ್ಳಿ ರೈಲ್ವೆ ನಿಲ್ದಾಣದಲ್ಲಿ ಅನುಮಾನಸ್ಪದ ಬಾಕ್ಸ್ ಪತ್ತೆಯಾಗಿದ್ದು ವಿಜಯವಾಡ- ಹುಬ್ಬಳ್ಳಿ ಅಮರಾವತಿ ಎಕ್ಸ್ ಪ್ರೆಸ್ ನಲ್ಲಿ ಈ ಪಾರ್ಸೆಲ್ ಬಾಕ್ಸ್ ಬಂದಿತ್ತು. ಶಾಸಕ ಪ್ರಕಾಶ್ ಎಂಬುವವರ ಹೆಸರಿನಿಂದ ಬಂದಿತ್ತು ಎನ್ನಲಾಗಿದೆ. ಈ ನಡುವೆ ಹುಸೆನ್ ಸಾಬ್ ಎನ್ನುವವರು ಬಾಕ್ಸ್ ಓಪನ್ ಮಾಡಿದ್ದು, ಈ ವೇಳೆ ಬಾಕ್ಸ್ ಸ್ಪೋಟಗೊಂಡು ಹುಸೆನ್ ಸಾಬ್ ಗಾಯಗೊಂಡಿದ್ದಾರೆ. ಸ್ಪೋಟಕ್ಕೆ ಕಿಟಕಿ , ಬಾಗಿಲುಗಳ ಗಾಜುಗಳು ಪುಡಿಪುಡಿಯಾಗಿವೆ.
ಹುಸೇನ್ ಸಾಬ್ ರನ್ನ ಕಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದ್ದು .ಸುದ್ದಿ ತಿಳಿದ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಶ್ವಾನದಳ, ಬೆರಳಚ್ಚು ತಜ್ಞರು ಸಹ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸುತ್ತಿದ್ದಾರೆ.
Key words: Hubli -railway station- Suspected -box -explosion – Injury – person