ಮಂಡ್ಯ, ಸೆಪ್ಟೆಂಬರ್ 29, 2019 (www.justkannada.in): ಮಂಡ್ಯ ಜಿಲ್ಲೆಯ ಪಾಂಡವಪುರ ಸರ್ಕಲ್ ನಲ್ಲಿ ಫೈರಿಂಗ್ ಸ್ಟಾರ್ ಹುಚ್ಚ ವೆಂಕಟ್ ಕಾಣಿಸಿಕೊಂಡಿದ್ದಾರೆ.
ತಮಿಳುನಾಡಿನಲ್ಲಿ ಕೊಳಕು ಬಚ್ಚೆ, ಹುಚ್ಚರಂತೇ ಕಾಣಿಸಿಕೊಂಡಿದ್ದ ವೆಂಕಟ್, ಮಂಡ್ಯದಲ್ಲಿ ಸಹಜ ಸ್ಥಿತಿಯಲ್ಲಿಯೇ ಓಡಾಡಿದ್ದಾರೆ. ಪಾಂಡವಪುರ-ಮಂಡ್ಯ ಸರ್ಕಲ್ ನಲ್ಲಿ ಕಾಣಿಸಿಕೊಂಡಿರುವ ಹುಚ್ಚ ವೆಂಕಟ್, ನೀಲಿ ಶರ್ಟ್ ತೊಟ್ಟು, ಕಪ್ಪು ನೀಲಿ ಬಣ್ಣದ ಪ್ಯಾಂಟ್ ಹಾಕಿ, ಶೂ ಕೂಡ ಹಾಕೊಂಡು ರಸ್ತೆಯಲ್ಲಿ ನಡೆದು ಹೋಗುತ್ತಿದ್ದನ್ನು ಸಾರ್ವಜನಿಕರು ಗಮನಿಸಿದ್ದಾರೆ.
ಹುಚ್ಚ ವೆಂಕಟ್ ಓಡಾಡುತ್ತಿರುವುದನ್ನು ಕಂಡ ಸಾರ್ವಜನಿಕರು, ತಮ್ಮ ಮೊಬೈಲ್ ನಲ್ಲಿ ಚಿತ್ರೀಕರಿಸಿಕೊಂಡು, ಸೋಷಿಯಲ್ ಮೀಡಿಯಾದಲ್ಲಿ ಹರಿ ಬಿಟ್ಟ ಪರಿಣಾಮ, ಇದೀಗ ವೈರಲ್ ಆಗಿದೆ.