ಮೈಸೂರು,ನ,27,2019(www.justkannada.in): ಹುಣಸೂರು ಉಪಚುನಾವಣೆಯಲ್ಲಿ ಜಣ ಜಣ ಕಾಂಚಾಣ ಭಾರೀ ಸದ್ದು ಮಾಡುತ್ತಿದ್ದು ಸೂಕ್ತ ದಾಖಲೆ ಇಲ್ಲದೆ ಸಾಗಿಸಲಾಗುತ್ತಿದ್ದ 2ಕೋಟಿ ಹಣವನ್ನ ಚುನಾವಣಾಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.
ಹುಣಸೂರು ತಾಲ್ಲೂಕಿನ ಮನುಗನಹಳ್ಳಿ ಚೆಕ್ ಪೋಸ್ಟ್ ನಲ್ಲಿ ಬರೋಬ್ಬರಿ 2 ಕೋಟಿ ಹಣವನ್ನ ವಶಕ್ಕೆ ಪಡೆಯಲಾಗಿದೆ. ಬೊಲೆರೋ ವಾಹನದಲ್ಲಿ 3 ಚೀಲಗಳಲ್ಲಿ 2 ಕೋಟಿ ಹಣವನ್ನ ಎಂ.ಡಿ.ಸಿ.ಸಿ.ಬ್ಯಾಂಕ್ ಗೆ ಸೇರಿರುವ ಇಬ್ಬರು ನೌಕರರು ಸಾಗಿಸುತ್ತಿದ್ದರು. ವಾಹನ ಚಾಲಕ ಸೇರಿದಂತೆ ನಾಲ್ವರಿಂದ ಹಣ ರವಾನೆಗೆ ಯತ್ನಿಸುತ್ತಿದ್ದರು.
ಈ ನಡುವೆ ಚೆಕ್ ಪೋಸ್ಟ್ ನಲ್ಲಿ ಪರಿಶೀಲಿಸಿದಾಗ ಪಿರಿಯಾಪಟ್ಟಣ ಬ್ಯಾಂಕ್ ಗೆ ಈ ಹಣ ಸಾಗಿಸುತ್ತಿದ್ದೇವೆಂದು ನೌಕರರು ಹೇಳಿದ್ದಾರೆ. ಚುನಾವಣಾಧಿಕಾರಿಗಳ ಅನುಮತಿ ಪಡೆಯದೆ ಬ್ಯಾಂಕ್ ನ ಸಿಬ್ಬಂದಿ ಹಣ ಸಾಗಿಸುತ್ತಿದ್ದು ತಿಳಿದು ಬಂದಿದೆ. ಭದ್ರತಾ ಸಿಬ್ಬಂದಿಯಿಲ್ಲದೇ ಭಾರೀ ಪ್ರಮಾಣದ ಹಣ ಕೊಂಡೊಯ್ಯುತ್ತಿದ್ದುದರಿಂದ ಚುನಾವಣಾಧಿಕಾರಿಗಳಿಗೆ ಅನುಮಾನಗಳು ವ್ಯಕ್ತವಾಗಿದ್ದು, ಯಾವುದೇ ಸೂಕ್ತ ದಾಖಲೆಗಳಿಲ್ಲದೇ ಸಾಗಿಸುತ್ತಿದ್ದ ಹಣ ಯಾರಿಗೆ ಸೇರಿರಬಹುದೆಂಬ ಶಂಕೆ ವ್ಯಕ್ತ ಪಡಿಸಿದ್ದರು.
ಇನ್ನು ಹಣಕ್ಕೆ ಸಂಬಂಧಿಸಿದ ಸೂಕ್ತ ದಾಖಲೆಗಳನ್ನು ನೀಡುವಂತೆ ಚುನಾವಣಾಧಿಕಾರಿಗಳು ಸೂಚಿಸಿದ್ದು, ಹಣದ ಬಗ್ಗೆ ಮಾಹಿತಿ ಒದಗಿಸುವಂತೆ ಎಂ.ಡಿ.ಸಿ.ಸಿ. ಬ್ಯಾಂಕ್ ನ ಇಬ್ಬರು ನೌಕರರಿಗೆ ನೋಟೀಸ್ ಜಾರಿ ಮಾಡಲಾಗಿದೆ.
Key words: hunsur- by-election-2 crore- seized – Bolero vehicle