ಮೈಸೂರು,ನ,26,2019(www.justkannada.in): ಸಿಎಂ ಯಡಿಯೂರಪ್ಪ ಬಂದು ಹೋದ ಬಳಿಕ ಹುಣಸೂರಿನಲ್ಲಿ ಟ್ರೆಂಡ್ ಸೆಟ್ ಆಗಿದೆ. ನೂರಕ್ಕೆ ನೂರರಷ್ಟು ನಮ್ಮ ಅಭ್ಯರ್ಥಿ ಗೆಲ್ಲುತ್ತಾರೆ ಎಂದು ಆರೋಗ್ಯ ಸಚಿವ ಶ್ರೀರಾಮುಲು ವಿಶ್ವಾಸ ವ್ಯಕ್ತಪಡಿಸಿದರು.
ಮೈಸೂರಿನಲ್ಲಿ ಇಂದು ಮಾತನಾಡಿದ ಸಚಿವ ಶ್ರೀರಾಮುಲು, ಹುಣಸೂರು ಉಪಚುನಾವಣೆ ಹಿನ್ನೆಲೆಯಲ್ಲಿ ಕಾರ್ಯಕರ್ತರ ಸಭೆ ನಡೆಸಿದ್ದೇನೆ. ವಿಶ್ವನಾಥ್ ಗೆಲ್ಲಿಸಲು ರಣತಂತ್ರ ಹೂಡುತ್ತಿದ್ದೇವೆ. ಸಿಎಂ ಯಡಿಯೂರಪ್ಪ ಬಂದು ಹೋದ ಬಳಿಕ ಹುಣಸೂರಿನಲ್ಲಿ ಟ್ರೆಂಡ್ ಸೆಟ್ ಆಗಿದೆ. ನೂರಕ್ಕೆ ನೂರರಷ್ಟು ನಮ್ಮ ಅಭ್ಯರ್ಥಿ ಗೆಲ್ಲುತ್ತಾರೆ. ಎಲ್ಲಾ ಶೋಷಿತ ವರ್ಗದವರು ವಿಶ್ವನಾಥ್ ಪರವಾಗಿದ್ದಾರೆ ಎಂದು ಹೇಳಿದರು.
ಉಪಚುನಾವಣೆ ಬಳಿಕ ಮಧ್ಯಂತರ ಚುನಾವಣೆ ಬರುತ್ತೆ ಎಂಬ ಹೇಳಿಕೆ ವಿಚಾರ ಕುರಿತು ಪ್ರತಿಕ್ರಿಯಿಸಿದ ಸಚಿವ ಶ್ರೀರಾಮುಲು, ಉಪಚುನಾವಣೆ ಬಳಿಕ ಯಾವುದೇ ಮಧ್ಯಂತರ ಚುನಾವಣೆ ಬರುವುದಿಲ್ಲ. ಕಾಂಗ್ರೆಸ್ ಮೂರು ವರ್ಷಗಳ ಕಾಲ ವಿರೋಧ ಪಕ್ಷದಲ್ಲಿರುತ್ತದೆ. 15 ಕ್ಷೇತ್ರದ ಉಪಚುನಾವಣೆಯಲ್ಲಿ ಎಲ್ಲಾ ಕ್ಷೇತ್ರಗಳಲ್ಲೂ ಗೆಲ್ಲುತ್ತೇವೆ ಎಂದು ಶ್ರೀರಾಮುಲು ತಿಳಿಸಿದರು.
ಕಾಂಗ್ರೆಸ್ನವರು ದುಡ್ಡು ಕೊಟ್ಟು ಪ್ರಚಾರ ನಡೆಸುತ್ತಿದ್ದಾರೆ…
ಯಾರು ಅರ್ಹರು, ಯಾರು ಅನರ್ಹರು ಎಂಬುದನ್ನ ಉಪಚುನಾವಣೆಯಲ್ಲಿ ಜನರು ತೀರ್ಮಾನ ಮಾಡುತ್ತಾರೆ. ವಿಶ್ವನಾಥ್ ಸರಳ ರಾಜಕಾರಣಿ. ಕಾಂಗ್ರೆಸ್ನವರು ದುಡ್ಡು ಕೊಟ್ಟು ಪ್ರಚಾರ ನಡೆಸುತ್ತಿದ್ದಾರೆ. ಆದ್ರೆ ವಿಶ್ವನಾಥ್ ಆ ರೀತಿ ಮಾಡುತ್ತೀಲ್ಲ. ಕಾಂಗ್ರೆಸ್ ಪಕ್ಷ ಹಣದಿಂದ ರಾಜಕಾರಣ ಮಾಡುತ್ತಿದ್ದಾರೆ ಎಂದು ಸಚಿವ ಶ್ರೀರಾಮುಲು ಕಾಂಗ್ರೆಸ್ ವಿರುದ್ದ ವಾಗ್ದಾಳಿ ನಡೆಸಿದರು.
ನಿನ್ನೆ ಮಾಜಿ ಸಚಿವ ಜಿ.ಟಿ.ದೇವೇಗೌಡ ಭೇಟಿ ವಿಚಾರ ಕುರಿತು ಪ್ರತಿಕ್ರಿಯಿಸಿದ ಸಚಿವ ಶ್ರೀರಾಮುಲು, ಜಿ.ಟಿ.ಡಿ ಯಾವುದೇ ರಾಜಕೀಯ ಮಾತನಾಡಿಲ್ಲ. ಚುನಾವಣೆಗೆ ಸಹಜವಾಗಿ ಅವರ ಬೆಂಬಲವನ್ನ ಕೋರಿದ್ದೇನೆ. ಆತಂರಿಕ ವಿಚಾರಗಳನ್ನ ನಾನು ಬಹಿರಂಗವಾಗಿ ಹೇಳುವುದಿಲ್ಲ. ಜಿಟಿಡಿ ಮುಂದೊಂದು ದಿನ ಒಂದು ಒಳ್ಳೇ ಮೇಸೆಜ್ ಕೊಡುತ್ತಾರೆ. ಜಿ.ಟಿ ದೇವೇಗೌಡ ಈ ಭಾಗದ ಹಿರಿಯ ರಾಜಕಾರಣಿ. ಬೇರೆ ಪಕ್ಷದವರು ಸಹ ಅವರ ಬೆಂಬಲ ಕೋರಿದ್ದಾರೆ ಎಂದರು.
ಉಪಚುನಾವಣೆ ಬಳಿಕ ತಮಗೆ ಡಿಸಿಎಂ ಸಿಗುವ ವಿಚಾರ ಕುರಿತು ಮಾತನಾಡಿದ ಶ್ರೀರಾಮುಲು, ಅ ವಿಚಾರ ನನಗೆ ಗೊತ್ತಿಲ್ಲ. ಜನರು ಶ್ರೀರಾಮಲುಗೆ ಒಳ್ಳೆ ಸ್ಥಾನ ಸಿಗಬೇಕೆಂದು ಹೇಳಿದ್ದಾರೆ. ಮುಂದಿನ ದಿನಗಳಲ್ಲಿ ನಮ್ಮ ಸಮುದಾಯಕ್ಕೆ ಬಿಜೆಪಿ ಒಳ್ಳೆಯದನ್ನ ಮಾಡುತ್ತದೆ ಎಂದರು.
Key words: hunsur –by election-minister –sriramulu-H.Vishwanath-win