ಮೈಸೂರು,ಡಿ,5,2019(www.justkannada.in): ಹುಣಸೂರು ಕ್ಷೇತ್ರದ ಉಪಚುನಾವಣೆ ಹಿನ್ನೆಲೆ ಮತ ಚಲಾಯಿಸಲು ಬಂದ ಹೆಚ್.ಡಿ ಕೋಟೆ ಶಾಸಕ ಅನೀಲ್ ಚಿಕ್ಕಮಾದು ಮತ್ತು ಪೊಲೀಸರ ನಡುವೆ ಮಾತಿನ ಚಕಮಕಿ ನಡೆದು ಪೊಲೀಸರ ವಿರುದ್ದ ಗ್ರಾಮಸ್ಥರು ಆಕ್ರೋಶ ಹೊರ ಹಾಕಿದ ಘಟನೆ ನಡೆದಿದೆ.
ಹುಣಸೂರು ಕ್ಷೇತ್ರದ ಹೊಸ ರಾಮೇನಹಳ್ಳಿಯಲ್ಲಿ ಈ ಘಟನೆ ನಡೆದಿದೆ. ಹುಟ್ಟೂರು ಹೊಸ ರಾಮೇನಹಳ್ಳಿಯಲ್ಲಿ ಮತ ಚಲಾಯಿಸಲು ಶಾಸಕ ಅನಿಲ್ ಚಿಕ್ಕಮಾದು ಆಗಮಿಸಿದ್ದರು. ಈ ವೇಳೆ ಪೊಲೀಸರು ಅನಿಲ್ ಚಿಕ್ಕಮಾದು ಅವರನ್ನ ತಡೆದಿದ್ದಾರೆ. ಶಾಸಕ ಅನೀಲ್ ಚಿಕ್ಕಮಾದು ಅವರನ್ನ ಇನ್ಸ್ ಪೆಕ್ಟರ್ ಏಕವಚನದಲ್ಲಿ ಪ್ರಶ್ನೆ ಮಾಡಿದ್ದು, ಲಾಟಿ ತೋರಿಸಿ ಅವಾಜ್ ಹಾಕಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಪೊಲೀಸರ ನಡೆಯಿಂದ ರೊಚ್ಚಿಗೆದ್ದ ಗ್ರಾಮಸ್ಥರು ಮೈಸೂರು ಹಾಸನ ರಸ್ತೆ ತಡೆದು ಪ್ರತಿಭಟನೆ ನಡೆಸಿದರು. ಡಿಸಿಐಬಿ ಇನ್ಸಪೆಕ್ಟರ್ ಸುನೀಲ್ ಕುಮಾರ್ ವಿರುದ್ದ ಆಕ್ರೋಶ ಹೊರ ಹಾಕಿದ ಪ್ರತಿಭಟನಾಕಾರರು, ಸರ್ಕಾರದ ಅಣತಿಯಂತೆ ಪೊಲೀಸರು ಕೆಲಸ ಮಾಡ್ತಿದ್ದಾರೆ. ಶಾಸಕರಿಗೆ ಅವಮಾನ ಮಾಡಿದ ಇನ್ಸ್ ಪೇಕ್ಟರ್ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆ ತಡೆಯಲು ಪೊಲೀಸರ ಹರ ಸಾಹಸ ಪಟ್ಟರು. ಪ್ರತಿಭಟನೆಯಿಂದಾಗಿ ಸ್ಥಳದಲ್ಲಿ ಕೆಲ ಕಾಲ ಉದ್ವಿಗ್ನ ಪರಿಸ್ಥಿತಿ ಉಂಟಾಗಿ ವಾಹನ ಸಂಚಾರ ಅಸ್ತವ್ಯಸ್ತವಾಗಿತ್ತು.
Key words: hunsur- byelection-mla-anil chikkamadu-police- Outrage – villagers.