ಮೈಸೂರು,ಫೆಬ್ರವರಿ,20,2021(www.justkannada.in): ರಾಮಮಂದಿರ ನಿರ್ಮಾಣ ದೇಣಿಗೆ ಲೆಕ್ಕ ಕೇಳಲು ಇವರು ಯಾರು ಎಂದು ತಮಗೆ ಪ್ರಶ್ನಿಸಿದ ಬಿಜೆಪಿ ನಾಯಕರಿಗೆ ಮಾಜಿ ಸಿಎಂ ಸಿದ್ಧರಾಮಯ್ಯ ತಿರುಗೇಟು ನೀಡಿದ್ದಾರೆ.
ಮೈಸೂರಿನಲ್ಲಿ ಇಂದು ಮಾತನಾಡಿರುವ ಮಾಜಿ ಸಿಎಂ ಸಿದ್ದರಾಮಯ್ಯ, ಜನರು ರಾಮಮಂದಿರಕ್ಕೆ ದೇಣಿಗೆ ನೀಡುತ್ತಿದ್ದಾರೆ, ಅದು ಬಿಜೆಪಿಗಾಗಿ ಅಲ್ಲ. ಹೀಗಾಗಿ ಲೆಕ್ಕ ಕೇಳುವ ಅಧಿಕಾರ ನನಗೆ ಇದೆ. ನಾನು ಈ ದೇಶದ ಪ್ರಜೆ. ಕೊಟ್ಟವರೇ ಲೆಕ್ಕ ಕೇಳಬೇಕು ಎಂದೇನಿಲ್ಲ. ನಾನು ದುಡ್ಡು ಕೊಡಲಿ ಬಿಡಲಿ. ಲೆಕ್ಕ ಕೊಡಬೇಕಾಗಿರುವುದು ಅವರ ಕೆಲಸ. ಕೇಳುವುದು ನಮ್ಮ ಹಕ್ಕು. ಲೆಕ್ಕೆ ಕೊಡಲು ಹಿಂದೇಟು ಹಾಕುತ್ತಿದ್ದಾರೆ ಎಂದರೆ ಅದರ ಅರ್ಥ ಹಣ ದುರುಪಯೋಗವಾಗುತ್ತಿದೆ. ಈ ಹಿಂದೆಯೂ ಇವರು ದೇಣಿಗೆ ಸಂಗ್ರಹಿಸಿ ಲೆಕ್ಕ ಕೊಟ್ಟಿಲ್ಲ. ಇದರ ಅರ್ಥ ಏನು ಎಂದು ಅವರೇ ಹೇಳಬೇಕು ಎಂದು ಚಾಟಿ ಬೀಸಿದರು.
ಸಿದ್ದು ‘ರಾಮ ಮಂದಿರ’ ನಿರ್ಮಾಣ..!
ಇನ್ನು ಮಾಜಿ ಸಿಎಂ ಸಿದ್ಧರಾಮಯ್ಯ ತಮ್ಮ ಊರಿನಲ್ಲಿ ರಾಮಮಂದಿರ ಕಟ್ಟಿಸುತ್ತಿದ್ದಾರಂತೆ. ಆಶ್ಚರ್ಯ ಆದ್ರು ಸತ್ಯ. ಮೈಸೂರಿನಲ್ಲಿ ಸ್ವತಃ ಈ ಬಗ್ಗೆ ಸಿದ್ಧರಾಮಯ್ಯ ಅವರೇ ಮಾಹಿತಿ ಹಂಚಿಕೊಂಡಿದ್ದಾರೆ.
ನಾನು ನನ್ನ ಹುಟ್ಟೂರಿನಲ್ಲಿ ರಾಮ ಮಂದಿರ ಕಟ್ಟಿಸುತ್ತಿದ್ದೇನೆ. ಜನರು ಇದಕ್ಕೆ ವಂತಿಗೆ ನೀಡುತ್ತಿದ್ದಾರೆ. ಎಷ್ಟು ವೆಚ್ಚ ಎನ್ನುವುದರ ಬಗ್ಗೆ ಹೇಳಲು ಸಾಧ್ಯವಿಲ್ಲ. ರಾಮ ಜನರ ಧಾರ್ಮಿಕ ನಂಬಿಕೆ. ಎಲ್ಲಾ ಕಡೆ ರಾಮ ಮಂದಿರ ಕಟ್ಟುತ್ತಾರೆ. ಅದರಲ್ಲೇನಿದೆ. ದೇವರು ಅನ್ನೋದು ಜನರಿಗೆ ಭಯ ಭಕ್ತಿಯ ಸಂಕೇತ. ಇದನ್ನು ಅವರು ರಾಜಕಾರಣಕ್ಕೆ ಬಳಸುತ್ತಾರೆ ಎಂದು ಟೀಕಿಸಿದರು.
ದುಡ್ಡು ಹೊಡೆಯೋದೆ ಇವ್ರ ಕೆಲಸ.
ರಾಜ್ಯದಲ್ಲಿ ಕೊರೊನಾ ಎರಡನೇ ಅಲೆ ವಿಚಾರ ಕುರಿತು ಪ್ರತಿಕ್ರಿಯಿಸಿದ ಮಾಜಿ ಸಿಎಂ ಸಿದ್ಧರಾಮಯ್ಯ, ಅದರಲ್ಲೂ ಭ್ರಷ್ಟಾಚಾರ ಮಾಡಲು ಕಾಯುತ್ತಿರುವಂತಿದೆ. ದುಡ್ಡು ಹೊಡೆಯೋದೆ ಇವ್ರ ಕೆಲಸ. ದುಡ್ ಹೊಡೆಯೋದ್ ಬಿಟ್ಟು ಅಭಿವೃದ್ಧಿ ಏನು ಮಾಡಲ್ಲ. ಭ್ರಷ್ಟಾಚಾರವೇ ಇವರ ಕೆಲಸ. ಎಲ್ಲಿ ಕೆಲಸ ಇದೆಯೋ ಅಲ್ಲಿ ದುಡ್ಡು ಹೊಡೆಯುತ್ತಾರೆ. ಕೊರೊನಾ ಮೊದಲ ಅಲೆಯಲ್ಲೂ ಭ್ರಷ್ಟಾಚಾರ, ಇದನ್ನು ನಾನು ವಿಧಾನಸಭೆಯಲ್ಲೇ ಹೇಳಿದ್ದೇನೆ. ಈಗಲೂ ಅದೇ ನಡೆಯುತ್ತದೆ. ಈ ಸರ್ಕಾರ ಯಾವ ವಿಚಾರವನ್ನು ಗಂಭೀರವಾಗಿ ಪರಿಗಣಿಸಿಲ್ಲ. ಎರಡನೇ ಅಲೆ ಗಂಭೀರವಾಗಿ ಪರಿಗಣಿಸಬೇಕು. ಕೇರಳ ಇರಲಿ ಆಫ್ರಿಕಾದಿಂದಲೇ ಬರಲಿ ಅಗತ್ಯ ಮುಂಜಾಗ್ರತೆ ವಹಿಸಿ ಎಂದು ಸಿದ್ಧರಾಮಯ್ಯ ಸಲಹೆ ನೀಡಿದರು.
ENGLISH SUMMARY….
Asking account is my right: I will build a Ram Mandir in my native place – former CM Siddu
Mysuru, Feb. 20, 2021 (www.justkannada.in): Former Chief Minister Siddaramaiah today said that people are donating money to build the Ram Mandir and not for BJP.
Speaking to the presspersons in Mysuru today in response to the BJP leaders asking him who is he to question about the donations to construct Ram Mandir in Ayodhya, the former CM said, “I have the right to ask you. I am also a citizen of India. There is no rule that only the person who has donated has to ask you. Whether I give or not, they have to be transparent and to answer. It is our right to question. They are refusing to give us the details, what does it mean? Doesn’t it mean the money is being misused? It is not the first time it is happening. Earlier also they collected donations and didn’t reply. What does it mean? they should answer,” he said.
Keywords: Former CM Siddaramaiah/ Ram Mandir/ Donations/ I have the right to ask
Key words: I am- building – Ram Mandir -my hometown-Former CM- Siddaramaiah.