ಹುಬ್ಬಳ್ಳಿ,ಏಪ್ರಿಲ್,15,2023(www.justkannada.in): ಹುಬ್ಬಳ್ಳಿ ಸೆಂಟ್ರಲ್ ಕ್ಷೇತ್ರದಿಂದ ಟಿಕೆಟ್ ಕೈತಪ್ಪುವ ಆತಂಕ ಹಿನ್ನೆಲೆ ಪಕ್ಷದ ಹೈಕಮಾಂಡ್ ಮತ್ತು ರಾಜ್ಯ ನಾಯಕರನ್ನ ಭೇಟಿ ಮಾಡಿರುವ ಚರ್ಚಿಸಿರುವ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಕಾದುನೋಡುವ ತಂತ್ರಕ್ಕೆ ಮೊರೆ ಹೋಗಿದ್ದಾರೆ.
ಈ ಕುರಿತು ಇಂದು ಬೆಂಬಲಿಗರ ಸಭೆಯಲ್ಲಿ ಮಾತನಾಡಿದ ಜಗದೀಶ್ ಶೆಟ್ಟರ್, ನನಗೆ ಅಧಿಕಾರದ ದಾಹ ಇಲ್ಲ . ಜನರ ಸೇವೆ ಮಾಡಲು ಅವಕಾಶ ಕೇಳಿದ್ದೇನೆ. ಕೇಂದ್ರದ ನಾಯಕರು ನನಗೆ ಟಿಕೆಟ್ ಘೋಷಿಸುವ ಸಾಧ್ಯತೆ ಇದೆ. ಟಿಕೆಟ್ ಘೋಷಣೆಗೆ ಇಂಧು ಸಂಜೆವರೆಗೆ ಟೈಮ್ ಇದೆ. ನನಗೆ ಟಿಕೆಟ್ ನೀಡುವ ವಿಶ್ವಾಸವಿದೆ. ಆನಂತರ ನೋಡೋಣ ಎಂದಿದ್ದಾರೆ.
ಬಿಜೆಪಿ ನನಗೆ ಎಲ್ಲಾ ಸ್ಥಾನಮಾನ ನೀಡಿದೆ. ಬಿಜೆಪಿಗೆ ಚಿರಋಣಿಯಾಗಿರುತ್ತೇನೆ. ಕಳೆದ 2 ವರ್ಷದಿಂದ ಅಭಿವೃದ್ದಿ ಮಾಡುತ್ತಿದ್ದೇನೆ. ಬಿಎಸ್ ವೈ ನಾಯಕತ್ವದಲ್ಲಿ ನಾನು ಪಕ್ಷ ಕಟ್ಟಿದ್ದೇನೆ. ಈ ಬಾರಿ ಚುನಾವಣೆಗೆ ನಿಲ್ಲಿ ಎಂದು ಕ್ಷೇತ್ರದ ಜನರಿಂದ ಒತ್ತಡ ಜೋರಾಗಿದೆ. ನಿಮ್ಮ ಸಹಕಾರವನ್ನ ಮರೆಯುವ ಆಗಿಲ್ಲ. ಎರಡು ಪಟ್ಟಿಯಲ್ಲಿ ನನ್ನ ಹೆಸರು ಏಕಿಲ್ಲ ..? ರಾಜ್ಯದ ಮೂಲೆ ಮೂಲೆಯಿಂದಲೂ ಜನ ಕೇಳುತ್ತಿದ್ದಾರೆ. ಜನರಿಗೆ ನಾನು ಉತ್ತರಿಸಬೇಕಿದೆ ಎಂದು ಜಗದೀಶ್ ಶೆಟ್ಟರ್ ತಿಳಿಸಿದ್ದಾರೆ.
ನಾನು ಜನಸೇವೆಗಾಗಿ ರಾಜಕೀಯಕ್ಕೆ ಬಂದೆ. 2 ದಿನಗಳ ಹಿಂದೆ ಜೆಪಿ ನಡ್ಡಾ ಭೇಟಿಯಾಗಿದ್ದೇನೆ. ನನಗೆ ಅಧಿಕಾರದ ಆಸೆ ಇಲ್ಲ ಎಂದಿದ್ದೇನೆ. ಇನ್ನೊಂದು ಬಾರಿ ಅವಕಾಶ ಕೊಡಿ ಎಂದಿದ್ದೇನೆ. ಹೈಕಮಾಂಡ್ ನಾಯಕರ ಜೊತೆ ಮಾತನಾಡಿದ್ದೇನೆ. ನನಗೆ ಟಿಕೆಟ್ ಸಿಗುವ ಭರವಸೆ ಇದೆ . ಟಿಕೆಟ್ ಸಿಗದಿದ್ದರೇ ಏನು ಮಾಡಬೇಕು ಎಂಬುದನ್ನ ಮುಂದೆ ತೀರ್ಮಾನಿಸೋಣ ಎಂದು ಶೆಟ್ಟರ್ ತಿಳಿಸಿದರು.
Key words: I am- confident – giving -ticket- Former CM -Jagdish Shettar