ಮೈಸೂರು,ಆಗಸ್ಟ್,10,2022(www.justkannada.in): ರಾಜ್ಯದಲ್ಲಿ ಸಿಎಂ ಬದಲಾವಣೆ ವಿಚಾರ ಮತ್ತೆ ಮುನ್ನೆಲೆಗೆ ಬಂದಿದ್ದು, ಈ ಸಂಬಂಧ ರಾಜ್ಯ ಕಾಂಗ್ರೆಸ್ ಮಾಡಿದ್ಧ ಟ್ವಿಟ್ ಗೆ ತಿರುಗೇಟು ನೀಡಿ ಸಿಎಂ ಬದಲಾವಣೆಯ ವಿಚಾರವನ್ನ ಬಿಜೆಪಿ ನಾಯಕರು ತಳ್ಳಿ ಹಾಕಿದ್ದಾರೆ.
ಈ ಮಧ್ಯೆ ಸಿಎಂ ರೇಸ್ ನಲ್ಲಿ ನೀವಿದ್ಧೀರಾ ಎಂಬ ಮಾಧ್ಯಮದವರ ಪ್ರಶ್ನೆಗೆ ಕೈಮುಗಿದು ಸ್ವಷ್ಟನೆ ನೀಡಿದ ಸಹಕಾರ ಸಚಿವ ಎಸ್.ಟಿ ಸೋಮಶೇಖರ್, ಸಿಎಂ ರೇಸ್ ನಲ್ಲಿ ನಾನಿಲ್ಲ. ಹೇಗೋ ಸಹಕಾರ ಸಚಿವನಾಗಿದ್ದೇನೆ. ಅದೂ ಇಷ್ಟ ಇಲ್ಲ ಅಂದ್ರೆ ಹೇಳಿ ಬಿಟ್ಟು ಬಿಡುತ್ತೇನೆ. ಸಚಿವ ಸ್ಥಾನವನ್ನೂ ಬಿಡ್ತೀನಿ ಎಂದರು.
ಕಾಂಗ್ರೆಸ್ ಕೃಪ ಪೋಷಿತ ನಾಟಕ ಮಂಡಳಿ. ಕಾಂಗ್ರೆಸ್ ನಲ್ಲಿ ಒಳ ಬೇಗುದಿ ಆರಂಭವಾಗಿದೆ. ಶಮನ ಮಾಡಿಕೊಳ್ಳಲು ಬಿಜೆಪಿ ಮೇಲೆ ಬಾಣ ಪ್ರಯೋಗಿಸಿದ್ದಾರೆ. ಅವರು ಇವರ ಮೇಲೆ ಇವರು ಅವರ ಮೇಲೆ ಆಪಾದನೆ ಮಾಡ್ತಿದ್ದಾರೆ. ಆಪಾದನೆ ಮುಚ್ಚಿಕೊಳ್ಳಲು ಬಿಜೆಪಿ ಮೇಲೆ ಗೂಬೆ ಕೂರಿಸುತ್ತಿದ್ದಾರೆ ಎಂದು ಸಚಿವ ಎಸ್.ಟಿ.ಸೋಮಶೇಖರ್ ಟೀಕಿಸಿದರು.
Key words: I am- not – CM –race-Minister -ST Somashekhar
ENGLISH SUMMARY…
I am not in the race to become CM: Minister S.T. Somashekar clarifies with folded hands
Mysuru, August 10, 2022 (www.justkannada.in): The rumours of change of Chief Minister has making rounds yet again in the State. As a response to the tweet by the Congress about the change of CM, the BJP state leaders have refused change of CM.
Replying to a question whether he is in the race to become the CM, Mysuru District In-charge Minister S.T. Somashekar clarified that he is not in the race. “I have become the Minister for Cooperation. If you don’t like me to continue, I will quit this post also,” he said.
“Congress is a nurtured drama troupe. Internal dissatisfaction has started in Congress party. That is why they are targeting BJP. They are simply making allegations on each others. In the attempt to cover their loopholes they target BJP,” he alleged.
Keywords: Minister S.T. Somashekar/ race/ CM/ no