ಬೆಂಗಳೂರು,ಮೇ,27,2019(www.justkannada.in): ನಾನು ಎಲ್ಲಿಯೂ ಹೋಗಲ್ಲ. ನಾನು ಕಾಂಗ್ರೆಸ್ ಪಕ್ಷದಲ್ಲೇ ಇರುತ್ತೇನೆ ಎಂದು ಅಥಣಿ ಶಾಸಕ ಮಹೇಶ್ ಕುಮುಟಳ್ಳಿ ಸ್ಪಷ್ಟನೆ ನೀಡಿದ್ದಾರೆ.
ಅತೃಪ್ತರ ಶಾಸಕರ ಬಣದಲ್ಲಿ ಗುರುತಿಸಿಕೊಂಡಿದ್ದ ಶಾಸಕ ಮಹೇಶ್ ಕುಮುಟಳ್ಳಿ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಜತೆ ಬಿಜೆಪಿಗೆ ಸೇರ್ಪಡೆಯಾಗುವ ಸಾಧ್ಯತೆ ಇದೆ ಎನ್ನಲಾಗಿತ್ತು. ಆದರೆ ಇಂದು ಬೆಳಿಗ್ಗೆ ಸಿಎಂ ಹೆಚ್.ಡಿ ಕುಮಾರಸ್ವಾಮಿ ಮತ್ತು ಡಿಸಿಎಂ ಡಾ.ಜಿ.ಪರಮೇಶ್ವರ್ ಅವರು ಶಾಸಕ ಮಹೇಶ್ ಕುಮುಟಳ್ಳಿ ಜತೆ ಮಾತುಕತೆ ನಡೆಸಿ ಮನವೊಲಿಕೆ ಮಾಡಿದ್ದಾರೆ.
ಸಿಎಂ ಜತೆ ಚರ್ಚೆ ಬಳಿಕ ಮಾತನಾಡಿದ ಶಾಸಕ ಮಹೇಶ್ ಕುಮುಟಳ್ಳಿ. ನಾನು ಬಿಜೆಪಿಗೆ ಹೋಗಲ್ಲ. ಕಾಂಗ್ರೆಸ್ ನಲ್ಲೇ ಇರುತ್ತೇನೆ. ನಾನು ನಿಗಮಮಂಡಳಿ ಸಚಿವ ಸ್ಥಾನದ ಆಕಾಂಕ್ಷಿಯಲ್ಲ. ಅಭಿವೃದ್ದಿ ರಾಜಕಾರಣದಲ್ಲಿ ನಾನು ನಂಬಿಕೆ ಇಟ್ಟುಕೊಂಡವನು. ಅಪರೇಷನ್ ಕಮಲದ ಬಗ್ಗೆ ಗೊತ್ತಿಲ್ಲ ಎಂದರು.
ಹಾಗೆಯೇ ಸಿಎಂ ಹೆಚ್.ಡಿ ಕುಮಾರಸ್ವಾಮಿ ಬಳಿ ನೀರಿನ ಬಗ್ಗೆ ಚರ್ಚಿಸಿದ್ದೇನೆ ಹೊರೆದು ಅಪರೇಷನ್ ಕಮಲದ ಬಗ್ಗೆ ಅಲ್ಲ. ಅಪರೇಷನ್ ಕಮಲದ ಬಗ್ಗೆ ಚರ್ಚಿಸುವುದಾಗಿದ್ದರೇ ರಹಸ್ಯವಾಗಿ ಬರಬಹುದಿತ್ತು ಎಂದರು.
Key words: I did not go anywhere. I will be in Congress- MLA Mahesh Kumuttalli clarifies.
#MaheshKumuttalli #congress #cmhdkumaraswamy