ನವದೆಹಲಿ:ಮೇ-28:(www.justkannada.in) ಎಂಐ-17 ಯುದ್ಧ ಹೆಲಿಕಾಪ್ಟರ್ನಲ್ಲಿ ಯಶಸ್ವಿಯಾಗಿ ಹಾರಾಟ ನಡೆಸುವ ಮೂಲಕ ಭಾರತೀಯ ವಾಯುಪಡೆಯ ಮಹಿಳಾ ಯೋಧರು ಹೊಸ ಇತಿಹಾಸ ಸೃಷ್ತಿಸಿದ್ದಾರೆ.
ಯುದ್ಧಸನ್ನದ್ಧತೆಯ ತರಬೇತಿ ಕಾರ್ಯಕ್ರಮದಡಿಯಲ್ಲಿ ನೈಋತ್ಯ ವಾಯು ನೆಲೆಯ ನಿರ್ಬಂಧಿತ ಪ್ರದೇಶಗಳಲ್ಲಿ ಹೆಲಿಕಾಪ್ಟರ್ ಅನ್ನು ಇಳಿಸುವುದು ಮತ್ತು ಹಾರಾಟ ಕೈಗೊಳ್ಳುವುದು ಸೇರಿದಂತೆ ಹಲವು ರೀತಿಯ ತರಬೇತಿ ವೇಳೆ ಈ ಮಹಿಳಾ ಯೋಧರು ಯಶಸ್ವಿ ಹಾರಾಟ ಕೈಗೊಂಡರು ಎಂದು ಭಾರತೀಯ ವಾಯುಪಡೆ ಮಾಹಿತಿ ನೀಡಿದೆ.
ಕ್ಯಾಪ್ಟನ್ ಫ್ಲೈಟ್ ಲೆಫ್ಟಿನೆಂಟ್ ಪಾರುಲ್ ಭಾರಧ್ವಜ ನೇತೃತ್ವದಲ್ಲಿ ಫ್ಲೈಯಿಂಗ್ ಆಫೀಸರ್ ಅಮನ್ ನಿಧಿ (ಸಹಪೈಲಟ್) ಮತ್ತು ಫ್ಲೈಟ್ ಲೆಫ್ಟಿನೆಂಟ್ ಹಿನಾ ಜೈಸ್ವಾಲ್ (ಫ್ಲೈಟ್ ಇಂಜಿನಿಯರ್) ಎಂಐ-17 ವಿ5 ಯುದ್ಧಹೆಲಿಕಾಪ್ಟರ್ನಲ್ಲಿ ಹಾರಾಟ ನಡೆಸಿದ್ದಾರೆ.
ಈ ಮೂಲಕ ಪಂಜಾಬ್ನ ಮುಕೇರಿಯನ್ ನಿವಾಸಿಯಾಗಿರುವ ಫ್ಲೈಟ್ ಲೆಫ್ಟಿನೆಂಟ್ ಪಾರುಲ್ ಭಾರಧ್ವಜ್, ಎಂಐ-17 ವಿ5 ಯುದ್ಧಹೆಲಿಕಾಪ್ಟರ್ ಅನ್ನು ಚಾಲನೆ ಮಾಡಿದ ಮೊದಲ ಮಹಿಳಾ ಪೈಲಟ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರೆ, ರಾಂಚಿ ನಿವಾಸಿ ಫ್ಲೈಯಿಂಗ್ ಆಫೀಸರ್ ನಿಧಿ ಜಾರ್ಖಂಡ್ನ ಮೊದಲ ಐಎಎಫ್ ಪೈಲಟ್ ಎಂಬ ಹೆಗ್ಗಳಿಕೆಗೆ ಹಾಗೂ ಚಂಡಿಗಢ ನಿವಾಸಿ ಫ್ಲೈಯಿಂಗ್ ಆಫೀಸರ್ ಜೈಸ್ವಾಲ್ ಭಾರತೀಯ ವಾಯುಪಡೆಯ ಮೊದಲ ಮಹಿಳಾ ಫ್ಲೈಟ್ ಇಂಜಿನಿಯರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಎಂಐ-17 ಯುದ್ಧ ಹೆಲಿಕಾಪ್ಟರ್ ಯಶಸ್ವಿ ಹಾರಾಟ ನಡೆಸಿದ ಭಾರತದ ಮಹಿಳಾ ಯೋಧರು
IAF all-women crew flies Mi-17 chopper for first time
In yet another achievement by women officers, an all-woman ccrew on Monday flew a medium-lift helicopter for the first time in India, the Indian Air Force (IAF) said.