ಐಎಎಸ್ ಅಧಿಕಾರಿ ಮಂಜುನಾಥ್ ಅವರನ್ನ ಬಂಧಿಸಿದ್ದು ದಿಟ್ಟ, ನಿರ್ಭೀತ, ಪ್ರಾಮಾಣಿಕ ಅಧಿಕಾರಿ ಯತೀಶ್ ಚಂದ್ರ.

ಬೆಂಗಳೂರು,ಜುಲೈ,5,2022(www.justkannada.in): ಬೆಂಗಳೂರು ನಗರ ಜಿಲ್ಲಾಧಿಕಾರಿ ಮಂಜುನಾಥ್ ಅವರನ್ನು ಬಂಧಿಸಿರುವ ACB SP ಯತೀಶ್ಚಂದ್ರ ದಿಟ್ಟ,ನಿರ್ಭಿತ ಮತ್ತು ಪ್ರಾಮಾಣಿಕ ಅಧಿಕಾರಿ. ACB ADGP ಸೀಮಂತ್ ಕುಮಾರ್ ಸಿಂಗ್ ಅವರು ಮೂಲೆಗುಂಪು ಮಾಡಲು ಪ್ರಯತ್ನಿಸಿದ್ದರು. ಆದರೆ ಯಾವುದೇ ಒತ್ತಡಕ್ಕೆ ಮಣಿಯದೆ ಮಂಜುನಾಥ್ ಅವರನ್ನು ಬಂಧಿಸುವಲ್ಲಿ ಅವರು ಯಶಸ್ವಿಯಾಗಿದ್ದಾರೆ.

ದಾವಣಗೆರೆ ಮೂಲದ ಯತೀಶ್ ಚಂದ್ರ ಕೇರಳ ಕೇಡರ್ ಐಪಿಎಸ್ ಅಧಿಕಾರಿ. ಕಣ್ಣೂರು ಜಿಲ್ಲೆ SP ಸೇರಿದಂತೆ ಕೇರಳದಲ್ಲಿ ವಿವಿಧ ಹುದ್ದೆಗಳನ್ನು ನಿಭಾಯಿಸಿದ್ದಾರೆ. ಕೆಲವು ಕಠಿಣ ನಿರ್ಧಾರಗಳಿಂದಾಗಿ ವಿವಾದಗಳಿಗೂ ಗುರಿಯಾಗಿದ್ದಾರೆ. 2015 ರಲ್ಲಿ ಪ್ರಧಾನಿ ನರೇಂದ್ರ ಮೋದಿ ಕೇರಳ ಭೇಟಿಗೆ ಅಡ್ಡಿಪಡಿಸಿದ್ದ ನೂರಾರು ಕಮ್ಯುನಿಸ್ಟ್ ಕಾರ್ಯಕರ್ತರನ್ನು ಸದೆಬಡಿದಿದ್ದರು. ಆಗ ಎಡ ಪಂಥೀಯ (LDF)ರಾಜಕಾರಣಿಗಳು ಅವರನ್ನು “BJP agent”ಎಂದು ಟೀಕಿಸಿದ್ದರು. ಶಬರಿಮಲೈ ಕುರಿತ ಸುಪ್ರೀಂ ಕೋರ್ಟ್ ಆದೇಶವನ್ನು ಪಾಲಿಸಲು ಕಠಿಣವಾಗಿ ವರ್ತಿಸಿದ್ದರು. ಕೇಂದ್ರ ಸಚಿವ ಪೊನ್ನು ರಾಧಾಕೃಷ್ಣ ಅವರ ಭೇಟಿಗೆ ಅನುಮತಿಯನ್ನು ನಿರಾಕರಿಸಿದ್ದರು. ಆಗ ಬಿಜೆಪಿ ಮುಖಂಡರು ಅವರನ್ನು “ಕಮ್ಯುನಿಸ್ಟ್”ಎಂದು ಟೀಕಿಸಿದ್ದರು.

covid lockdown ವೇಳೆ ಕೆಲವು ಅತಿರೇಕದ ವರ್ತನೆಗಳಿಂದಾಗಿ human rights ಕಮಿಷನ್ ಕೆಂಗಣ್ಣಿಗೂ ಗುರಿಯಾಗಿದ್ದರು. ಈಗ ಕರ್ನಾಟಕ ಸೇವೆಗೆ ಸೀಮಿತ ಅವಧಿಗೆ ಬಂದಿದ್ದಾರೆ. ಕೇರಳದಿಂದ ಬರುವಾಗ ಕಣ್ಣೂರಿನ ಜನತೆ ಅವರಿಗೆ ಅಭಿಮಾನಪೂರ್ವಕವಾಗಿ ಬೀಳ್ಕೊಡಿಗೆ ಸಮಾರಂಭವನ್ನು ಏರ್ಪಡಿಸಿದ್ದರು. ಬೆಂಗಳೂರು ಸೆಂಟ್ರಲ್ DCP ಯಾಗುವಂತೆ CM ಸೂಚಿಸಿದರೂ “ಹಣದ ಚಲಾವಣೆ ನಡೆಯುವ executive ಹುದ್ದೆ ಬೇಡ”ಎಂಬ ತೀರ್ಮಾನಕ್ಕೆ ಯತೀಶ್ ಚಂದ್ರ ಬಂದರು ಎಂದು ಕೆಲವರು ಹೇಳುತ್ತಿದ್ದಾರೆ.

“IPS ಅಧಿಕಾರಿಯಾಗಿದ್ದರೂ ತಿಂಗಳ ಕೊನೆಯಲ್ಲಿ ದುಡ್ಡಿಗೆ ಪರದಾಡುತ್ತಾರೆ”ಎಂದು ಅವರನ್ನು ಬಲ್ಲವರು ಹೇಳುತ್ತಾರೆ.ಮತ್ತೆ ಕೆಲವರು ಅವರನ್ನು ಪ್ರಖ್ಯಾತ IPS ಅಧಿಕಾರಿಯಾಗಿದ್ದ ಮಧುಕರ ಶೆಟ್ಟಿಯವರಿಗೆ ಹೋಲಿಸಲು ಆರಂಭಿಸಿದ್ದಾರೆ.

ಕೃಪೆ:

ರುದ್ರಪ್ಪ, ಬೆಂಗಳೂರು

ಹಿರಿಯ ಪತ್ರಕರ್ತರು

Key words: IAS –officer- Manjunath -arrested -honest officer -Yatish Chandra.